Breaking News
Home / BGAdmin (page 66)

BGAdmin

ಇಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬೆಳಗಾವಿಗೆ ಬರ್ತಾರೆ.

ಬೆಳಗಾವಿ: ರಾಜ್ಯ ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಬಿಜೆಪಿಯಲ್ಲಿ ಆತ್ಮಾವಲೋಕನ ಪರ್ವ ಶುರುವಾಗಿದೆ. ಇಂದು ಸೋಮವಾರ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಬೆಳಗಾವಿ ಭೇಟಿ ತೀವ್ರ ಕುತೂಹಲ ಮೂಡಿಸಿದೆ. ಇಂದು ಸಾಯಂಕಾಲ 4 ಗಂಟೆಗೆ ಬೆಳಗಾವಿಯ ಡಾ. ಗುರುದೇವ ರಾನಡೆ ಮಂದಿರ ಎಸಿಪಿಆರ್ ನ ನವೀಕೃತ ಕಟ್ಟಡದ ಲೋಕಾರ್ಪಣೆ ಮತ್ತು ಪಾತವೇಟು ಗಾಡ್ ನಿಯತಕಾಲಿಕೆಯ 200ನೇ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಹೆಸರಿನ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಜಿ …

Read More »

ಬೆಳಗಾವಿ: ಮಾಜಿ ಸೈನಿಕನ ಮರ್ಡರ್.

ಆಸ್ತಿ ವಿವಾದ : ಬರ್ಬರ ಹತ್ಯೆ ಆಸ್ತಿ ವಿಚಾರವಾಗಿ ಸಹೋದರರ ಮಧ್ಯೆ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ತಿಗಡಿ ಗ್ರಾಮದ ನಿವಾಸಿ ಸುರೇಶ್ ಖಣಗಾಂವಿ ಹತ್ಯೆಯಾದವ. ಸದಾ ಖಣಗಾಂವಿ ಗಂಭೀರವಾಗಿ ಗಾಯಗೊಂಡವ.ಶಂಕರ್ ಖಣಗಾಂವಿ ಕೊಲೆ ಮಾಡಿದ ವ್ಯಕ್ತಿ.ಹತ್ಯೆಗೀಡಾದ ಸುರೇಶ್ ಮಾಜಿ ಸೈನಿಕನಾಗಿದ್ದು, ಸದ್ಯ ಕೃಷಿ ಮಾಡಿಕೊಂಡು ಜಮೀನಿನಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದರು. ಆಸ್ತಿ ವಿಚಾರವಾಗಿ ಆರೋಪಿ ಶಂಕರ್ ಖಣಗಾಂವಿ …

Read More »

ಬೆಳಗಾವಿ ಡಿಸಿ ಕಚೇರಿ ಆವರಣದಲ್ಲಿ ಕಚೇರಿ ಕಾಂಪ್ಲೇಕ್ಸ್ ಆಗೋದು ಗ್ಯಾರಂಟಿ…!!

ಬೆಳಗಾವಿ ನಗರದಲ್ಲಿ ಸರಕಾರಿ ಕಚೇರಿಗಳ ಬಹುಮಹಡಿ ಕಟ್ಟಡ‌ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ಬೆಳಗಾವಿ, – ನಗರದ ಹೃದಯಭಾಗದಲ್ಲಿ ಇರುವ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಇತರೆ ಕಚೇರಿಗಳ ಜಾಗೆಯಲ್ಲಿಯೇ ಸರಕಾರಿ ಕಚೇರಿಗಳ ಸುಸಜ್ಜಿತ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳ ತಂಡ ಶನಿವಾರ(ಜೂ.3) ಸ್ಥಳ ಪರಿಶೀಲನೆ ನಡೆಸಿತು. ಲೋಕೋಪಯೋಗಿ ಇಲಾಖೆಯ ಸಚಿವರಾಗಿರುವ ಸತೀಶ್ ಜಾರಕಿಹೊಳಿ ಅವರ ನಿರ್ದೇಶನದಂತೆ ನಗರಕ್ಕೆ ಆಗಮಿಸಿದ ತಂಡವು ಸ್ಥಳವನ್ನು ವೀಕ್ಷಿಸಿ ಅಗತ್ಯ ಮಾಹಿತಿಯನ್ನು …

Read More »

ಬೆಳಗಾವಿ ಜಿಲ್ಲೆಯಲ್ಲೂ ಗ್ಯಾರಂಟಿ ಮೀಟೀಂಗ್…!!

“ಗ್ಯಾರಂಟಿ”ಗಳ ಸಮರ್ಪಕ ಅನುಷ್ಠಾನ; ಸಂಭವನೀಯ ಪ್ರವಾಹ ನಿರ್ವಹಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ನಿರ್ದೇಶನ ಬೆಳಗಾವಿ, -: ಗೃಹಲಕ್ಷ್ಮೀ, ಯುವನಿಧಿ, ಅನ್ನಭಾಗ್ಯ ಸೇರಿದಂತೆ ಐದೂ “ಗ್ಯಾರಂಟಿ”ಗಳನ್ನು ಜಾರಿಗೊಳಿಸಲಾಗುವುದು ಎಂದು ಸರಕಾರ ಘೋಷಿಸಿದೆ. ಇವುಗಳ ಸಮರ್ಪಕ ಅನುಷ್ಠಾನ, ಫಲಾನುಭವಿಗಳ ಗುರುತಿಸುವಿಕೆ ಹಾಗೂ ಜಿಲ್ಲೆಯಲ್ಲಿ ಸಂಭವನೀಯ ಪ್ರವಾಹ ನಿರ್ವಹಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. …

Read More »

ಲಕ್ಷ್ಮೀ ಮೇಡಂ ಅವರಿಗೆ ಪವರ್ ಫುಲ್ ಇನ್ ಚಾರ್ಜ್…!!

ಬೆಳಗಾವಿ- ನಿರಂತರ ರಾಜಕೀಯ ಸಂಘರ್ಷ ನಡೆಸಿ,ಘಟಾನುಘಟಿ ರಾಜಕೀಯ ನಾಯಕರ ಪ್ರತಿರೋಧ ಎದುರಿಸಿ ಎರಡನೇಯ ಬಾರಿಗೆ ವಿಧಾನಸೌಧದ ಮೆಟ್ಟಲೇರಿ,ಮಂತ್ರಿಯೂ ಆಗಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಮಹತ್ವದ ಉಸ್ತುವಾರಿ ಸಿಗುವ ಸಾಧ್ಯತೆ ಇದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗುವದು ಬಹುತೇಕ ಖಚಿತವಾಗಿದ್ದು ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದ್ದು, ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಹುಬ್ಬಳ್ಳಿ- ಧಾರವಾಡ ಜಿಲ್ಲಾ ಉಸ್ತುವಾರಿಯ …

Read More »

ಐದು ಗ್ಯಾರಂಟಿ ಪಕ್ಕಾ. ಸಿಎಂ ಸಿದ್ರಾಮಯ್ಯ ಹೊಡೆದ್ರು ಶಿಕ್ಕಾ. ಚಿಂತಿ ಬೇಡ ಅಕ್ಕಾ..!!

ಬೆಂಗಳೂರು: ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನಾ ಜನತೆಗೆ ನೀಡಲಾಗಿದ್ದ ಎಲ್ಲಾ ಗ್ಯಾರಂಟಿ ಭರವಸೆಗಳನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಸಚಿವ ಸಂಪುಟ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಮೊದಲ ಗ್ಯಾರಂಟಿಯಾಗಿ ಗೃಹ ಜ್ಯೋತಿ ಯೋಜನೆಯನ್ನು ಜುಲೈ 1 ರಿಂದ ಜಾರಿ ಮಾಡಲಾಗುವುದು ಎಂದರು. 12 ತಿಂಗಳ ಸರಾಸರಿ ಆಧರಿಸಿ, ಅದಕ್ಕೆ ಶೇಕಡಾ 10 ರಷ್ಟು ಸೇರಿಸಿ, ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಾಗುವುದು, ಗೃಹಜ್ಯೋತಿಯ …

Read More »

ಬೆಳಗಾವಿಯ ರಾಕಸಕೊಪ್ಪ ಡ್ಯಾಂ ನಲ್ಲಿ ಉಳಿದ್ದಿದ್ದು ಮೂರು ಅಡಿ,ರಾಡಿ…!!

ಬೆಳಗಾವಿ- ಮಹಾನಗರಿ,ಕುಂದಾನಗರಿಗೆ ನೀರು ಸರಬರಾಜು ಮಾಡುವ ಜಲದ ಮೂಲ ರಾಕಸಕೊಪ್ಪ ಜಲಾಶಯದಲ್ಲಿ ಕೇವಲ ಮೂರು ಅಡಿ,ರಾಡಿ ನೀರು ಮಾತ್ರ ಬಾಕಿ ಉಳಿದಿಕೊಂಡಿದ್ದು ಜೂನ್ ಹದಿನೈದರವರೆಗೆ ಮಾನ್ಸೂನ್ ಶುರುವಾಗದಿದ್ದರೆ,ಡೆಡ್ ಸ್ಟೋರೇಜ್ ನಿಂದ ನೀರು ಪಂಪ್ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ. ಬೆಳಗಾವಿ ಮಹಾನಗರಕ್ಕೆ ಹಿಡಕಲ್ ಜಲಾಶಯ ಮತ್ತು ರಾಕಸಕೊಪ್ಪ ಜಲಾಶಯದಿಂದ ನೀರು ಪೂರೈಕೆ ಮಾಡಲಾಗುತ್ತದೆ. ಹಿಡಕಲ್ ಜಲಾಶಯದಿಂದ ನೀರು ಪಂಪ್ ಮಾಡಿ ಬೆಳಗಾವಿಯ ಬಸವನಕೊಳ್ಳದಲ್ಲಿ ನೀರು ಶುದ್ಧೀಕರಣ ಮಾಡಿ ನಗರದ ಆಯ್ದ ಪ್ರದೇಶಗಳಿಗೆ …

Read More »

ಮಗನ ಸಾವಿನ ಸುದ್ದಿ ಕೇಳಿ ತಾಯಿಯೂ ಹೃದಯಾಘಾತದಿಂದ ಸಾವು.

ಬೆಳಗಾವಿ-ಮಗನ ಸಾವಿನ ಸುದ್ದಿ ಕೇಳಿ ತಾಯಿಯೂ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ,ಬೆಳಗಾವಿಯ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದಲ್ಲಿ ನಡೆದಿದೆ. ಬಾಳಪ್ಪ ವೆಂಕಪ್ಪ ತಳವಾರ (50) ರುದ್ರವ್ವ ತಳವಾರ (70) ಮೃತದುರ್ದೈವಿಗಳು.ನೇರಳೆ ಹಣ್ಣು ಹರಿಯಲು ಮರ ಏರಿದ್ದಾಗ ಜಾರಿ ಬಿದ್ದು ಸ್ಥಳದಲ್ಲೇ ಮೃತಪಟ್ಟ ಬಾಳಪ್ಪ,ಬಾಳಪ್ಪ ತಳವಾರ ನೇರಳೆ ಹಣ್ಣು ವ್ಯಾಪಾರ ಮಾಡುತ್ತಿದ್ದ ಎಂಬ ಮಾಹಿತಿ ಸಿಕ್ಕಿದೆ. ಈ ಸುದ್ದಿ ಗೊತ್ತಾಗುತ್ತಿದ್ದಂತೆ ತೀವ್ರ,ಹೃದಯಾಘಾತದಿಂದ ರುದ್ರವ್ವ ತಳವಾರ ಸಾವನ್ನೊಪ್ಪಿದ್ದು,ತಾಯಿ- ಅಣ್ಣನ ಸಾವಿನ ಸುದ್ದಿ ಕೇಳಿ ಕುಸಿದು …

Read More »

ರಾತ್ರೋ ರಾತ್ರಿ ಸ್ಪೇಶಲ್ ಫ್ಲಾಯಿಟ್ ನಲ್ಲಿ ಬೆಳಗಾವಿಗೆ ದೌಡಾಯಿಸಿದ ಡಿ.ಕೆ ಶಿವಕುಮಾರ್…!!

ಬೆಳಗಾವಿ- ರಾತ್ರೋ ರಾತ್ರಿ 11-30 ಕ್ಕೆ ಸ್ಪೇಶಲ್ ಫ್ಲಾಯಿಟ್ ನಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬೆಳಗಾವಿಗೆ ದೌಡಾಯಿಸಿ ಬೆಳಗಾವಿಯಲ್ಲೇ ವಾಸ್ತವ್ಯ ಮಾಡಿದ್ದಾರೆ. ಅಥಣಿ ಶಾಸಕ ಮಾಜಿ ಡಿಸಿಎಂ ಲಕ್ಷ್ಮಣ ಸವದಿ,ಅವರು ಚುನಾವಣೆಯಲ್ಲಿ ಗೆದ್ದರೂ ಸಹ ಅವರು ಮಂತ್ರಿ ಮಂಡಲದಲ್ಲಿ ಸ್ಥಾನ ಗಿಟ್ಟಿಸಿಕೊಂಡಿಲ್ಲ‌.ಅವರನ್ನು ಭೇಟಿಯಾಗಲು,ಸಮಾಧಾನಪಡಿಸಲು ಡಿ.ಕೆ ಶಿವಕುಮಾರ್ ಬೆಳಗಾವಿಗೆ ದೌಡಾಯಿಸಿದ್ದಾರೆ. ಬುಧವಾರ ಬೆಳಗ್ಗೆ 8-00 ಗಂಟೆಗೆ ಲಕ್ಷ್ಮಣ ಸವದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ ನಂತರ ಜಗದೀಶ್ ಶೆಟ್ಟರ್ ಅವರನ್ನು …

Read More »

ಬೆಳಗಾವಿ : ಹೊಲದ ಗದ್ದೆಯಲ್ಲಿ ವಿಮಾನ ಲ್ಯಾಂಡೀಂಗ್..!!

ಬೆಳಗಾವಿ: ತಾಲೂಕಿನ ಹೊನ್ನಿಹಾಳ ಹಾಗೂ ಬಾಗೇವಾಡಿ ಮಾರ್ಗದ ಮಧ್ಯೆ ಇರುವ ಹೊಲದಲ್ಲಿ ಮಂಗಳವಾರ ಬೆಳಿಗ್ಗೆ ತರಬೇತಿ ವಿಮಾನವೊಂದು ಭೂಸ್ಪರ್ಶವಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಸಮೀಪದ ಸಾಂಬ್ರಾ ಗ್ರಾಮದ ಬಳಿ ಇರುವ ಬೆಳಗಾವಿ ವಿಮಾನ ನಿಲ್ದಾಣದಿಂದ ತರಬೇತಿ ನಡೆಸುತ್ತಿದ್ದ ಪುಟ್ಟ ವಿಮಾನ ಒಂದು ತಾಲೂಕಿನ ಹೊನ್ನಿಹಾಳ ಹೊರವಲಯದ ಮೋದಗಾ- ಬಾಗೇವಾಡಿ ರಸ್ತೆ ಮಧ್ಯದಲ್ಲಿ ತುರ್ತು ಭೂಸ್ಪರ್ಶವಾಗಿದೆ. ಘಟನೆಯಲ್ಲಿ ತರಬೇತುದಾರನ ಕಾಲಿಗೆ ಗಾಯವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆಮಾರೀಹಾಳ ಠಾಣೆ ಪೊಲೀಸರು, ವಾಯು ಸೇನೆ ಅಧಿಕಾರಿಗಳು …

Read More »