Breaking News
Home / Breaking News / ನೀ ಹಿಂಗ್ ನೋಡಬ್ಯಾಡ ನನ್ನ…ತಿರುಗಿ ನಾ ಹೆಂಗ್ ನೋಡಲಿ ನಿನ್ನ…!!!

ನೀ ಹಿಂಗ್ ನೋಡಬ್ಯಾಡ ನನ್ನ…ತಿರುಗಿ ನಾ ಹೆಂಗ್ ನೋಡಲಿ ನಿನ್ನ…!!!

ಸರ್ಕಾರ ನಡೆಯುವದು ಅಬಕಾರಿ ಆದಾಯದಿಂದ ಎನ್ನುವದು ಜನಸಾಮಾನ್ಯರ ಅಭಿಪ್ರಾಯ, ಆದ್ರೆ ಸರ್ಕಾರ ಬಾರ್ ಮತ್ತು ವೈನ್ ಅಂಗಡಿ ಮಾಲೀಕರ ಮಾತೂ ಕೇಳುತ್ತಿಲ್ಲ,ಆಕ್ರಮ ಮದ್ಯ ಮಾರಾಟ ತಡೆಯಲು ಸರ್ಕಾರ ಮದ್ಯ ಖರೀಧಿಯ ವಿಚಾರದಲ್ಲಿ ಹೊಸ ನಿಯಮ ಜಾರಿಗೆ ತಂದಿದೆ,ಆದ್ರೆ ಸರ್ಕಾರದ ಹೊಸ ನಿಯಮ ಬಾರ್ ಮತ್ತು ವೈನ್ ಮಾರ್ಚಂಟ್ಸ್ ಮಾಲೀಕರಿಗೆ ಮಾರಕ ಆಗಿದೆ.

ಬೆಂಗಳೂರು-ಕೆಎಸ್‍ಬಿಸಿಎಲ್ ಹೊಸ ನೀತಿಯಿಂದ ಸಂಕಷ್ಟ ಎದುರಾಗಿದೆ ಎಂದು ಆರೋಪಿಸಿ ಮದ್ಯ ವರ್ತಕರು ಇಂದಿನಿಂದ ಮೇ 19ರ ವರೆಗೆ ಮುಷ್ಕರ ನಡೆಸಲು ಮುಂದಾಗಿದ್ದಾರೆ. ಹೀಗಾಗಿ ವೀಕೆಂಡ್‌ನಲ್ಲಿ ಮದ್ಯ ಪ್ರಿಯರಿಗೆ ಎಣ್ಣೆ ಸಿಗಲ್ಲ. ಮದ್ಯ ಖರೀದಿ ಮಾಡುವ ವ್ಯವಸ್ಥೆ ಬದಲಾಗಿರುವುದರಿಂದ ನಮಗೆ ಬಹಳ ತೊಂದರೆಯಾಗಿದೆ ಎಂದು ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟ ಆರೋಪಿಸಿದೆ.

ಇಲ್ಲಿಯವರೆಗೆ ಕೆಎಸ್‌ಬಿಸಿಎಲ್‍ನಿಂದ ಮ್ಯಾನುವಲ್‌ ವ್ಯವಸ್ಥೆ ಮೂಲಕ ವೈನ್ ಮರ್ಚೆಂಟ್ಸ್ ಮತ್ತು ಬಾರ್ ಮಾಲೀಕರು ಮದ್ಯ ಖರೀದಿ ಮಾಡುತ್ತಿದ್ದರು. ಈಗ ಹೊಸದಾಗಿ ರೂಪಿಸಿರುವ ವೆಬ್‍ಸೈಟ್ ಓಪನ್ ಮಾಡಿ, ಅದರಲ್ಲಿ ಮಾಲೀಕರು ಲಾಗಿನ್ ಆಗಿ ತಮಗೆ ಬೇಕಾದ ಮದ್ಯಗಳನ್ನು ಆಯ್ಕೆ ಮಾಡಿ, ಆನ್‍ಲೈನ್ ಮೂಲಕ ಹಣ ರವಾನೆ ಮಾಡಬೇಕು. ರಾತ್ರಿ 9 ರಿಂದ ಬೆಳಗ್ಗೆ 9ರವರೆಗೆ ಲಿಸ್ಟ್ ಫಿಲ್ ಮಾಡಿ, ಗೋದಾಮಿನಲ್ಲಿ ದಾಸ್ತಾನಿರುವ ಮದ್ಯಗಳನ್ನು ಮಾತ್ರ ಪಡೆದುಕೊಳ್ಳಬೇಕು. ಈ ನೂತನ ಪದ್ಧತಿ ಬಾರ್ ಮತ್ತು ವೈನ್ ವ್ಯಾಪಾರಿಗಳಿಗೆ ಸಮಸ್ಯೆ ನೀಡುತ್ತಿದೆ. ಹೀಗಾಗಿ ಈ ಪದ್ಧತಿಯನ್ನು ವಿರೋಧಿಸಿ ಮದ್ಯ ವರ್ತಕರು ಮುಷ್ಕರ ಮಾಡುತ್ತಿದ್ದಾರೆ.

ಇಲ್ಲಿಯವರೆಗೆ ಕೆಎಸ್‌ಬಿಸಿಎಲ್‍ನಿಂದ ಮ್ಯಾನುವಲ್‌ ವ್ಯವಸ್ಥೆ ಮೂಲಕ ವೈನ್ ಮರ್ಚೆಂಟ್ಸ್ ಮತ್ತು ಬಾರ್ ಮಾಲೀಕರು ಮದ್ಯ ಖರೀದಿ ಮಾಡುತ್ತಿದ್ದರು. ಈಗ ಹೊಸದಾಗಿ ರೂಪಿಸಿರುವ ವೆಬ್‍ಸೈಟ್ ಓಪನ್ ಮಾಡಿ, ಅದರಲ್ಲಿ ಮಾಲೀಕರು ಲಾಗಿನ್ ಆಗಿ ತಮಗೆ ಬೇಕಾದ ಮದ್ಯಗಳನ್ನು ಆಯ್ಕೆ ಮಾಡಿ, ಆನ್‍ಲೈನ್ ಮೂಲಕ ಹಣ ರವಾನೆ ಮಾಡಬೇಕು.ಈ ವ್ಯೆವಸ್ಥೆ ಬದಲಾಗಬೇಕು,ಮೊದಲಿನ ಮ್ಯಾನ್ಯುವಲ್ ವ್ಯೆವಸ್ಥೆ ಜಾರಿಗೆ ಬರಬೇಕು ಎನ್ನುವದು,ವೈನ್ ಮಾರ್ಚಂಟ್ ಮತ್ತು ಬಾರ್ ಮಾಲೀಕರ ಒತ್ತಾಯ ಆಗಿದೆ.

ಬಾರ್ ಮಾಲೀಕರು ಅಥವಾ ವೈನ್ ಶಾಪ್ ಮಾಲೀಕರು ತಮಗೆ ಬೇಕಾಗಿರುವಷ್ಟು ಮದ್ಯ ಖರೀದಿ ಮಾಡುತ್ತಾರೆ. ಆದರೆ ಸಣ್ಣ ಮದ್ಯ ಮಾರಾಟಗಾರರಿಗೆ ಈ ವ್ಯವಸ್ಥೆಸಮಸ್ಯೆ ನೀಡುತ್ತಿದೆ. ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಶೇ.80 ಜನರಿಗೆ ಕಳೆದ ಒಂದು ತಿಂಗಳಿನಿಂದ ಈ ಪದ್ಧತಿ ಸಮಸ್ಯೆ ನೀಡಿದೆ.  ಈ  ಸಮಸ್ಯೆ ಬಗೆಹರಿಸುವುದಾಗಿ ಆಯುಕ್ತರು ಹೇಳಿದ್ದಾರೆ. ಆದರೆ ಇನ್ನೂ ಪರಿಹಾರ ಲಭಿಸಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ

* ಯಾವ ದಿನ ಎಲ್ಲಿ ಮುಷ್ಕರ*
ಮೇ 6 :  ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್
ಮೇ 10 : ಬಳ್ಳಾರಿ, ಧಾರವಾಡ,  ಗದಗ, ಹಾವೇರಿ, ಬಾಗಲಕೋಟೆ, ಚಿತ್ರದುರ್ಗ, ದಾವಣಗೆರೆ, ಕೊಪ್ಪಳ, ಬೆಳಗಾವಿ, ವಿಜಯಪುರ
ಮೇ 12 : ಮೈಸೂರು, ಹಾಸನ, ಚಿಕ್ಕಮಗಳೂರು, ಉತ್ತರಕನ್ನಡ, ಉಡುಪಿ, ಹಾಸನ, ಮಂಡ್ಯ, ಕೊಡಗು, ಮಂಗಳೂರು, ಶಿವಮೊಗ್ಗ
ಮೇ 17 : ಬೆಂಗಳೂರು, ಚಿಕ್ಕಬಳ್ಳಾಪುರ,  ತುಮಕೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ
ಮೇ 19 : ಬೆಂಗಳೂರು ನಗರ ವಿಭಾಗದ ಕೆಎಸ್‍ಬಿಸಿಎಲ್ ಡಿಪೋಗಳಲ್ಲಿ ಮದ್ಯ ಖರೀದಿ ಮಾಡದಿರಲು ನಿರ್ಧಾರ ಕೈಗೊಳ್ಳಲಾಗಿದೆ

Check Also

ಬುಧವಾರ, ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಗೆ ಗ್ರ್ಯಾಂಡ್ ವೆಲ್ ಕಮ್…!!!

ಬೆಳಗಾವಿ: ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಜಗದೀಶ್ ಶೆಟ್ಟರ್ ಅವರು ನಾಳೆ ಬುಧವಾರ ಬೆಳಗಾವಿಗೆ ಬರಲಿದ್ದು ಬೆಳಗಾವಿಯ ಬಿಜೆಪಿ …

Leave a Reply

Your email address will not be published. Required fields are marked *