Breaking News

ಬಸವನಕೊಳ್ಳಕ್ಕೆ ಹರಿದು ಬಂತೂ ಹಿಡ್ಕಲ್ ನೀರು

ಬೆಳಗಾವಿ-ಬೆಳಗಾವಿ ನಗರದ ಕಣಬರ್ಗಿ ಮಹಾಂತೇಶ ನಗರ ಆಂಜನೇಯ ನಗರ,ಅಟೋ ನಗರ,ರಾಮತೀರ್ಥ ನಗರ ಮುತ್ಯಾನಟ್ಟಿ ಸೇರಿದಂದತ ವಿವಿಧ ಪ್ರದೇಶಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವ ಕಾಲ ಕೂಡಿ ಬಂದಿದೆ ಬದವನಕೊಳ್ಳ ಶುದ್ಧಿಕರಣ ಘಟಕಕ್ಕೆ ಗಾಂಧೀ ಜಯಂತಿಯ ದಿನ ಹಿಡಕಲ್ ನೀರು ಯಶಸ್ವಿಯಾಗಿ ತಲುಪಿದೆ

ಬೆಳಗಾವಿ ಸಮೀಪದ ಬಸವನಕೊಳ್ಳ ಗ್ರಾಮದಲ್ಲಿ ೩೬ ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಹೆಚ್ಚುವರಿ ಶುದ್ಧೀಕರಣ ಘಟಕ ನಿರ್ಮಾಣ ಮಾಡಲಾಗುತ್ತಿದೆ ಈ ಕಾಮಗಾರಿ ಮುಕ್ತಾಯದ ಹಂತ ತಲುಪಿದ್ದು ಹಿಡಕಲ್ ಜಲಾಶಯದ ನೀರು ಶುದ್ಧೀಕರಣ ಘಟಕಕ್ಕೆ ತಲುಪಿದೆ ಭಾನುವಾರ ನಡೆದ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ

ಬಸವನಕೊಳ್ಳದ ಹೆಚ್ಚುವರಿ ಕುಡಿಯುವ ನೀರಿನ ಘಟಕಕ್ಕೆ ಪ್ರತಿ ದಿನ ಆರು ಎಂಜಿಡಿ ನೀರು ಬರಲಿದೆ ಹೀಗಾಗಿ ಬೆಳಗಾವಿ ನಗರದ ಅರ್ಧ ಭಾಗದ ನೀರಿನ ಸಮಸ್ಯೆ ಬಗೆ ಹರಿಯಲಿದೆ

ರಾಮತೀರ್ಥ ನಗರದ ಕುಡಿಯುವ ನೀರಿನ ಬವಣೆ ನಿವಾರಣೆ ಆದಂತಾಗಿದೆ ಬೆಳಗಾವಿ ನೀರು ಸರಬರಾಜು ಮಂಡಳಿಯ ಅಭಿಯಂತರ ಪ್ರಸನ್ನಮೂರ್ತಿ ಅವರ ನಿರಂತರ ಪ್ರಯತ್ನದ ಫಲವಾಗಿ ಬಸವನಕೊಳ್ಳಕ್ಕೆ ನೀರು ತಲುಪಿದ್ದು ಶಾಸಕ ಫರೋಜ್ ಸೇಠ ಅವರ ಕನಸಿನ ಯೋಜನೆ ಇದಾಗಿದ್ದು ಡಿಸೆಂಬರ ತಿಂಗಳಲ್ಲಿ ಈ ನೀರು ನಗರ ನಿವಾಸಿಗಳ ಮನೆಗಳಿಗೆ ತಲುಪಲಿದೆ

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.