Breaking News

ಸ್ಮಾರ್ಟ್ ಸಿಟಿಯಲ್ಲಿ ಸ್ಮಾರ್ಟ್ ಶಾಸಕನ..ಸ್ಮಾರ್ಟ್ ನಗರ…..!!

ಬೆಳಗಾವಿ- ಬೆಳಗಾವಿ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ಯಾವಾಗ ಪ್ರಾರಂಭ ಆಗುತ್ತದೆಯೋ ಗೊತ್ತಿಲ್ಲ ಆದರೆ ಬೆಳಗಾವಿಯ VIP ಬಡಾವಣೆ ಎಂದೇ ಹಣೆಪಟ್ಟಿ ಕಟ್ಟಿಕೊಂಡಿರುವ ಹನುಮಾನ ನಗರವಂತೂ ಸ್ಮಾರ್ಟ್ ಆಗಿದೆ

ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಒಂದು ಕೋಟಿ ರೂ ವೆಚ್ಚದಲ್ಲಿ ಹನಮಾನ ನಗರದ ಜಾಧವ ನಗರದಿಂದ ಹಿಂಡಲಗಾ ಗಣಪತಿ ಮಂದಿರದ ವರೆಗೂ ರಸ್ತೆಯ ಡಿವೈಡರ್ ಗಳಲ್ಲಿ ಅತ್ಯಾಕರ್ಷಕ ಬೀದಿ ದೀಪಗಳನ್ನು ಅಳವಡಿಸಲಾಗಿದ್ದು ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮಿಗಳು ಅತ್ಯಾಕರ್ಷಕ ಬೀದಿ ದೀಪಗಳನ್ನು ಉದ್ಘಾಟಿಸಿದರು
ಈ ಸಂಧರ್ಭದಲ್ಲಿ ಮಾತಮಾಡಿದ ಅವರು ಜನ ಪ್ರತಿನಿಧಿಗಳು ಜನರ ಬೇಕು ಬೇಡಗಳನ್ನು ತಿಳಿದುಕೊಂಡು ಅದಕ್ಕೆ ಸ್ಪಂದಿಸಿದರೆ ಜನರ ಮೆಚ್ಚುಗೆ ಗಳಿಸಿತ್ತಾರೆ ಶಾಸಕ ಫಿರೋಜ್ ಸೇಠ ನಗರದಲ್ಲಿ ಅಭಿವೃದ್ಧಿಯ ಕ್ರಾಂತಿ ಮಾಡಿದ್ದು ಅವರ ನಿರಂತರ ಶ್ರಮದ ಫಲವಾಗಿ ಬೆಳಗಾವಿ ನಗರ ಅಭಿವೃದ್ಧಿಯಾಗುತ್ತಿದೆ ಹನುಮಾನ ನಗರದಿಂದ ಆರಂಭಬಾಗಿರುವ ಹೈಟೆಕ್ ಕಾಮಗಾರಿಗಳು ನಗರದೆಲ್ಲಡೆ ವಿಸ್ತರಣೆ ಯಾಗಲಿ ಎಂದು ಶ್ರೀಗಳು ಹಾರೈಸಿದರು
ಶಾಸಕ ಸೇಠ ಅವರು ಜನಸಾಮಾನ್ಯರ ಜೊತೆ ಬೆರೆತು ಬೆಳದಿಂಗಳ ಬೆಳಕಿನಲ್ಲಿ ಕ್ಷೇತ್ರದಲ್ಲಿ ಸುತ್ತಾಡಿ ಎಲ್ಲಿ ಏನು ಮಾಡಬೇಕು ಅನ್ನೋದನ್ನು ತಿಳಿದುಕೊಂಡು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಾರೆ ಅವರು ಶಾಸಕರಾದಾಗಿನಿಂದ ನಗರದಲ್ಲಿ ಅಗಣಿತ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ ಎಂದು ಕಾರಂಜಿಮಠದ ಶ್ರೀಗಳು ಶಾಸಕ ಸೇಠ ಅವರ ಕಾರ್ಯವನ್ನು ಶ್ಲಾಘಿಸಿದರು
ಶಾಸಕ ಸೇಠ ಮಾತನಾಡಿ ಸ್ಮಾರ್ಟ ಸಿಟಿ ಯೋಜನೆ ಕೇವಲ ಘೋಷಣೆ ಆಗಿದೆ ಆದರೆ ಕಾಮಗಾರಿಗಳು ಆರಂಭವಾಗಿಲ್ಲ ಆದರೆ ಅದಕ್ಕೂ ಮೊದಲು ನಗರವನ್ನು ಸ್ಮಾರ್ಟ್ ಮಾಡುವ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಕೇವಲ ರಸ್ತೆ ಚರಂಡಿ ನಿರ್ಮಿಸುವದು ಸರ್ಕಾರದ ಕೆಲಸ ಅಲ್ಲ ಜನರ ಇಷ್ಟಾರ್ಥ ಗಳನ್ನು ಪೂರ್ಣಗೊಳಿಸುವದು ಸರ್ಕಾರದ ಜವಾಬ್ದಾರಿ ಈ ನಿಟ್ಟಿನಲ್ಲಿ ಸರ್ಕಾರ ಅನೇಕ ಜನಪರ ಕಾರ್ಯಗಳನ್ನು ಬೆಳಗಾವಿಯಲ್ಲಿ ಮಾಡುತ್ತಿದೆ ಎಂದರು
ಬೆಳಗಾವಿ ನಗರದಲ್ಲಿ ರಸ್ತೆ ಅಭಿವೃದ್ಧಿ,ರಸ್ತೆ ಅಗಲೀಕರಣ,ರಸ್ತೆಗಳ ಸುಂದರೀಕರಣ ಸ್ವಿಮಿಂಗ್ ಫೂಲ್ ಗಳ ನಿರ್ಮಾಣ ಕ್ರಿಡಾಂಗಣಗಳ ಅಭಿವೃದ್ಧಿ.ಹೊಸದಾಗಿ ಟೆನಿಸ್ ,ಫುಟಬಾಲ್ ಬ್ಯಾಡ್ಮಿಂಟನ್ ಕ್ರಿಡಾಂಗಣಗಳನ್ನು ನಿರ್ಮಿಸುವದರ ಜೊತೆಗೆ ಕ್ಯಾಂಪ್ ಪ್ರದೇಶದಲ್ಲಿ ಮಹಿಳೆಯರಿಗಾಗಿ ವಿಶೇಷವಾದ ಜಿಮ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದ ಶಾಸಕ ಸೇಠ ಹೈಟೆಕ್ ಬೀದಿ ದೀಪಗಳನ್ನು ಉತ್ತರ ಮತಕ್ಷೇತ್ರದ ಎಲ್ಲ ಪ್ರಮುಖ ರಸ್ತೆಗಳಲ್ಲಿ ಅಳವಡಿಸಲು ಸಂಕಲ್ಪ ಮಾಡಲಾಗಿದೆ ಎಂದು ಶಾಸಕ ಹೇಳಿದರು
ನಗರ ಸೇವಕಿ ಅನುಶ್ರೀ ದೇಶಪಾಂಡೆ ಮಾತನಾಡಿ ಶಾಸಕ ಸೇಠ ಸಮಸ್ಯೆಗಳನ್ನು ಸ್ವತಹ ತಿಳಿದುಕೊಂಡು ಜನ ಕೇಳುವ ಮೊದಲೇ ಅವಗಳನ್ನು ಬಗೇಹರಿಸುತ್ತಾರೆ ಅವರ ನೇತ್ರತ್ವದಲ್ಲಿ ಅಭಿವೃದ್ದಿಯ ಜಾತ್ರೆ ನಡೆಯುತ್ತಿದೆ ಇಂತಹ ಶಾಸಕ ಬೆಳಗಾವಿ ನಗರಕ್ಕೆ ಸಿಕ್ಕಿರುವದು ನಮ್ಮೆಲ್ಲರ ಸೌಭಾಗ್ಯ ಎಂದು ಅನುಶ್ರೀ ಹೇಳಿದರು
ಪಾಲಿಕೆ ಆಯುಕ್ತ ಶಶಿಧರ ಕುರೇರ ಮುಖ್ಯ ಅಭಿಯಂತರ ಆರ್ ಎಸ್ ನಾಯಕ, ದೇಶಪಾಂಡೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು

Check Also

ಎರಡು ಗ್ರಾಮಗಳಿಗೆ ದೀಪಾವಳಿ ಗೀಫ್ಟ್ ಕೊಟ್ಟ ಸಾಹುಕಾರ್….!!

ತಿಗಡಿ ಮತ್ತು ಅವರಾದಿ ಗ್ರಾಮಗಳಿಗೆ ದಸರಾ ಹಬ್ಬದ ಗಿಫ್ಟ್ ಕೊಟ್ಟ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಗಡಿ, ಅವರಾದಿಗೆ ಪದವಿ ಪೂರ್ವ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.