Breaking News

ಹಿಂಡಲಗಾ ಜೈಲಿನ ಮುಂದೆ ಟೆಂಟ್ ಹಾಕಿ ಜೈಲು ಸಿಬ್ಬಂಧಿಗಳ ಪ್ರತಿಭಟನೆ

ಬೆಳಗಾವಿಯಲ್ಲಿ ಹಿಂಡಲಗಾ ಜೈಲಿನಲ್ಲಿ ಡಿಐಜಿ ರೂಪ ಪರಪ್ಪನ ಅ್ಗರಹಾರದ ಕುರಿತು ನೀಡಿರುವ ವರದಿಯನ್ನು ಖಂಡಿಸಿ ಜೈಲಿನ ಅಧಿಕಾರಿಗಳು ಮತ್ತು ಸಿಬ್ಬಂಧಿಗಳು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ. ನಡೆಸಿದ್ದಾರೆ

ಜೈಲು ಅಧೀಕ್ಷ ಟಿ.ಪಿ.ಶೇಷ ನೇತೃತ್ವದಲ್ಲಿ ನೂರಾರು ಸಿಬ್ಬಂದಿಗಳ ಪ್ರತಿಭಟನೆ ನಡೆಸಿದ್ದು
ಡಿಐಜಿ ರೂಪ ತಮ್ಮ ಹಿರಿಯ ಅಧಿಕಾರಿಗೆ ಪರಪ್ಪನ ಅಗ್ರಹಾರ ಜೈಲಿನ ಬಗ್ಗೆ ಬರೆದ ಪತ್ರದ ಹಿನ್ನಲೆ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ

ಹಿಂಡಲಗಾ ಜೈಲು ಸಿಬ್ಬಂದಿಯಿಂದ ಮೌನ ಪ್ರತಿಭಟನೆ ಮುಂದುವರೆದಿದ್ದು ಹಿಂಡಲಗಾ ಜೈಲು ಮುಂ ಬಾಗದಲ್ಲಿ ಟೆಂಟ್ ಹಾಕಿ ಪ್ರತಿಭಟನೆ ನಡೆಸಲಾಗುತ್ತಿದೆ

ಬೆಳಗಾವಿ ಹಿಂಡಲಗಾ ಜೈಲು ಮುಖ್ಯ ಅಧೀಕ್ಷಕ ಟಿ.ಪಿ.ಶೇಷ ಹೇಳಿಕೆ. ನೀಡಿದ್ದು ಕಾರಾಗೃಹ ಡಿಜಿ ಸತ್ಯನಾರಾಯಣ ಬಗ್ಗೆ ಸುಳ್ಳು ಆರೋಪ ಮಾಡಲಾಗಿದೆ. ನಿನ್ನೆ ಮಾಧ್ಯಮದಲ್ಲಿ ಸುಳ್ಳು ಆರೋಪ ಬಿತ್ತರವಾಗಿದೆ. ಡಿಜಿ ಸತ್ಯನಾರಾಯಣ ಅವರು ಧನಾತ್ಮಕವಾದ ಕಾರ್ಯಗಳನ್ನ ಮಾಡಿದ್ದಾರೆ. ಕೈದಿಗಳ ಮನಪರಿವರ್ತನೆ ವಿಚಾರ ಹಾಗೂ ಸಿಬ್ಬಂದಿಗಳ ಸುಧಾರಣೆ ವಿಚಾರವಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಸತ್ಯನಾರಾಯಣ ಅವರು ಕಾರಾಗೃಹ ಇಲಾಖೆ ಸಮಗ್ರ ಏಳಿಗೆಗೆ ಶ್ರಮಿಸಿದ್ದಾರೆ. ಸತ್ಯನಾರಾಯಣ ಅವರ ವರ್ಚಸ್ಸು ಸಹಿಸದೇ ಸುಳ್ಳು ಆರೋಪ ಮಾಡಲಾಗಿದೆ ಎಂದು ಶೇಷ ಆರೋಪಿಸಿದ್ದಾರೆ

ಡಿಜಿ ಸತ್ಯನಾರಾಯಣ ಅವರ ಮೇಲಿನ ಆರೋಪ ಮುಕ್ತವಾಗುವ ವರೆಗೂ ಹೋರಾಟ ಮಾಡ್ತಿವಿ ಎಂದು ಹೇಳಿದ್ದಾರೆ

ರಾಜ್ಯಪಾಲರಿಗೆ ನಾವು ಮನವಿ ಸಲ್ಲಿಸುತ್ತೇವೆ. ಕಾನೂನಿನ ಚೌಕಟ್ಟಿನಲ್ಲಿ ನಮ್ಮ ಹೋರಾಟ ನಡೆಯಲಿದೆ ಎಂದು ಜೈಲು ಮುಖ್ಯ ಅಧೀಕ್ಷ ಟಿ.ಪಿ. ಶೇಷ. ಹೇಳಿದ್ದಾರೆ

Check Also

ಬೆಳಗಾವಿಯಲ್ಲಿ ಸಭೆ ನಡೆಸಿದ ರಾಹುಲ್ ವಾರ್ನಿಂಗ್ ಮಾಡಿದ್ದೇನು ಗೊತ್ತಾ..??

ಸಾರ್ವಜನಿಕ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ: ಜಿ.ಪಂ. ಸಿ.ಇ.ಓ.ರಾಹುಲ್ ಶಿಂಧೆ ಸೂಚನೆ ಬೆಳಗಾವಿ, – ತಾಲೂಕು ಮಟ್ಟದ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವುದರ …

Leave a Reply

Your email address will not be published. Required fields are marked *