Breaking News
Home / Breaking News / ಹೆಬ್ಬಾಳಕರ್ ಬರಲಿಲ್ಲ,ಜಾರಕಿಹೊಳಿ ಭಾಷಣ ಮಾಡಲಿಲ್ಲ!!

ಹೆಬ್ಬಾಳಕರ್ ಬರಲಿಲ್ಲ,ಜಾರಕಿಹೊಳಿ ಭಾಷಣ ಮಾಡಲಿಲ್ಲ!!

ಹೆಬ್ಬಾಳಕರ್ ಬರಲಿಲ್ಲ,ಜಾರಕಿಹೊಳಿ ಭಾಷಣ ಮಾಡಲಿಲ್ಲ!!

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಹಂಸಗಡದಲ್ಲಿ ನಡೆದ ಶಿಷ್ಟಾಚಾರದ ಲಢಾಯಿ ಕೊನೆಗೂ ಅಂತ್ಯವಾಯಿತು.ಸಿಎಂ ಬೊಮ್ಮಾಯಿ ಅವರು ಇವತ್ತು ರಾಜಹಂಸಗಡದ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯನ್ನು ಲೋಕಾರ್ಪಣೆ ಮಾಡುವದರ ಮೂಲಕ ಇತ್ತೀಚಿಗೆ ನಡೆದಿದ್ದ ಕ್ರೆಡಿಟ್ ವಾರ್ ಗೆ ಬ್ರೇಕ್ ಹಾಕಿದ್ರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮತ್ತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇವತ್ತು ರಾಜಹಂಸಗಡದ ಕಾರ್ಯಕ್ರಮದಲ್ಲಿ ಒಂದೇ ವೇದಿಕೆ ಹಂಚಿಕೊಳ್ಳುವ ನಿರೀಕ್ಷೆ ಇತ್ತು ಆದ್ರೆ ಲಕ್ಷ್ಮೀ ಹೆಬ್ಬಾಳಕರ ಅವರು ಕಾರ್ಯಕ್ರಮಕ್ಕೆ ಗೈರಾದ್ರು ರಮೇಶ್ ಜಾರಕಿಹೊಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದರೂ ಸಹ ಈ ಕಾರ್ಯಕ್ರಮದಲ್ಲಿ ಅವರು ಭಾಷಣ ಮಾಡಲಿಲ್ಲ.

ರಾಜಗಂಸಗಡದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದು.
.
ರಾಜಹಂಸಗಡ ಐತಿಹಾಸಿಕ ಕೋಟೆ.ಐತಿಹಾಸಿಕ ಪರಂಪರೆ ಶಿವಾಜಿ ಕಾಲದ ವೈಭವ ಇದು ಪ್ರತಿನಿಧಿಸುತ್ತೆ.ಶಿವಾಜಿ ಮಹಾರಾಜರ ಬಗ್ಗೆ ಹೇಳುವ ಅವಶ್ಯಕತೆ ಇಲ್ಲಾ.
ಈ ದೇಶ ಕಂಡ ಅಪ್ರತಿಮ ನಾಯಕ‌.ಹಿಂದು ಸಾಮ್ರಾಜ್ಯ ಉಳಿಸಲು ಪರಕೀಯರ ಆಡಳಿತ ಸೆದೆ ಬಡೆಯಲು ಶಿವಾಜಿ ಮಹಾರಾಜರ ಪಾತ್ರ ದೊಡ್ಡದು.ಎಲ್ಲ ವಿಧ್ಯೆ ಪರಿಪೂರ್ಣವಾಗಿ ಕಲಿತ ಪರಿಣಿತರು.ಇಡೀ ಹಿಂದು ಕುಲವನ್ನು ರಕ್ಷಣೆ ಮಾಡಲು ಸಂಸ್ಥಾನಗಳನ್ನ ರಕ್ಷಣೆ ಮಾಡಲು ಪ್ರಮುಖರಾಗಿದ್ದರು.ಮೊಘಲರ ಸೈನ್ಯಬಲದಷ್ಟು ಇವರ ಸೈನ್ಯ ಇರಲಿಲ್ಲ.ಇವರ ಹೃದಯದಲ್ಲಿ ಛಲ, ಧೈರ್ಯ ಎಲ್ಲವನ್ನೂ ತುಂಬಿಕೊಂಡಿದ್ದರು.ಅವರ ಸೈನ್ಯ ಬಲ ನಮ್ಮ ತೋಳ ಬಲದಿಂದ ಅವರನ್ನ ಸೋಲಿಸಲು ಸಾಧ್ಯ ಅಂತಾ ಶಿವಾಜಿ ಮಹಾರಾಜರು ಹೇಳಿದ್ದರು.ತಮ್ಮದೇ ಆದ ಯುದ್ದ ಶೈಲಿಯಲ್ಲಿ ಅವರು ಯುದ್ದ ಮಾಡಿ.
ಎಲ್ಲರನ್ನೂ ಸೋಲಿಸಿ ಈ ಸಾಮ್ರಾಜ್ಯ ಉಳಿಸಿದರು.
ಪುಣೆ ಶಿವನೇರಿಯಿಂದ ಹಿಡಿದು ತಮಿಳುನಾಡಿನ ತಂಜಾವೂರನ ವರೆಗೂ ಸಾಮ್ರಾಜ್ಯ ಸ್ಥಾಪಿಸಿದರು.
ದೇಶ ಕಾಪಾಡಲು ಮೊಟ್ಟ ಮೊದಲು ಹೋರಾಟ ಮಾಡಿದ್ದು ಶಿವಾಜಿ ಮಹಾರಾಜರು.ಅವರ ಆಡಳಿತವನ್ನ ಜನರು ಮೆಚ್ಚಿಕೊಳ್ಳುತ್ತಿದ್ದರು.ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ರು.

ಶಿವಾಜಿ ಮಹಾರಾಜರು ಕಟ್ಟಿದ ಕೋಟೆ ರಾಜಹಂಸಗಡ.
2008ರಲ್ಲಿ ಯಡಿಯೂರಪ್ಪನವರು ನಮ್ಮ ಸರ್ಕಾರದ ಅಭಿವೃದ್ಧಿ ಮಾಡಲು ಅನುದಾನ ಕೊಟ್ಟಿತ್ತು.
ನಾಲ್ಕೂವರೆ ಕೋಟಿ ರೂಪಾಯಿ ಬಿಡುಗಡೆ ಅವತ್ತೆ ಆಗಿತ್ತು.
ಇವತ್ತು ಶಿವಾಜಿ ಮೂರ್ತಿ ಕೂಡ ಆಗಿದೆ.
2018-19ರಲ್ಲಿ ಇದಕ್ಕೆ ಅನುದಾನ ಬಿಡುಗಡೆ ಮಾಡಿದರು.
ಸುಮಾರು ಐವತ್ತು ಲಕ್ಷ ರೂಪಾಯಿ ಬಿಡುಗಡೆ ಮಾಡಿದರು.
ಶಿವಾಜಿ ಮಹಾರಾಜರ ಮೂರ್ತಿ ಮಾಡಿದ ಶಿಲ್ಪಿಕಾರರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ.
ಮೊದಲೇ ನನ್ನ ಕಡೆ ಇದು ಸಿಕ್ಕಿದ್ರೇ ದೊಡ್ಡ ಪ್ರವಾಸಿ ತಾಣ ಮಾಡ್ತಿದ್ದೆ.ಕೆಲವರ ಕಾಲದಲ್ಲಿ ಅಭಿವೃದ್ಧಿ ಆಗಲ್ಲಾ ಮಾತಾಡುವುದೇ ಆಗುತ್ತೆ.ಕೋಟೆ ಸಮಗ್ರ ಅಭಿವೃದ್ಧಿಗೆ ಹೆಚ್ಚುವರಿಯಾಗಿ ಐದು ಕೋಟಿ ಅನುದಾನ ಕೊಡ್ತೇನೆ.
ಸಮುದಾಯ ಭವನ ಸೇರಿದಂತೆ ಸಮುದಾಯ ಅಭಿವೃದ್ಧಿಗೆ ಅನುದಾನ ಕೊಡ್ತೇನಿ.ಶಿವಾಜಿ ಮಹಾರಾಜರ ಹೆಸರು ಅಮರವಾಗಿರಬೇಕು.ಅಂತಾ ಅತ್ಯಂತ ಅಭಿಮಾನದಿಂದ ಹೆಮ್ಮಯಿಂದ ಶಿವಾಜಿ ಮಹಾರಾಜರ ಮೂರ್ತಿ ಉದ್ಘಾಟನೆ ಮಾಡಿದ್ದೇನೆ.ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ರು.

ಮಾರ್ಚ್ 5,ರಂದು ರಾಜಹಂಸಗಡದಲ್ಲಿ ಲಕ್ಷ್ಮೀ ಹೆಬ್ಬಾಳಕರ ಕಾರ್ಯಕ್ರಮ

ಬಿಜೆಪಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿ ರಾಜಹಂಸಕೋಟೆಯ ಅಭಿವೃದ್ಧಿ ಮಾಡಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮಾರ್ಚ್ 5 ಐದರಂದು ರಾಜಗಂಸಗಡದಲ್ಲಿ ಇನ್ನೊಂದು ಕಾರ್ಯಕ್ರಮ ಮಾಡಲು ಲಕ್ಷ್ಮೀ ಹೆಬ್ಬಾಳಕರ ನಿರ್ಧರಿಸಿದ್ದಾರೆ.

Check Also

ಮನೆ,ಮನೆಗೆ ಹೋಗಿ ಮತದಾರರ ಚೀಟಿ ವಿತರಿಸಲು ಡಿಸಿ ನಿತೇಶ್ ಪಾಟೀಲ್ ಸೂಚನೆ

ಬೆಳಗಾವಿ, ):ಮತದಾರರಿಗೆ ತಮ್ಮ ಮತಗಟ್ಟೆಗಳ ಬಗ್ಗೆ ಮುಂಚಿತವಾಗಿ ಮತದಾರರ ಚೀಟಿ(ವೋಟರ್ ಸ್ಲಿಪ್)ಗಳನ್ನು ನೀಡಿದರೆ ಮತದಾನ ಮಾಡಲು ಅನುಕೂಲವಾಗಲಿದೆ. ಆದ್ದರಿಂದ ಪ್ರತಿಯೊಂದು …

Leave a Reply

Your email address will not be published. Required fields are marked *