ಬೆಳಗಾವಿ-ನಗರದ ಖಡೇಬಜಾರ ಮಾರ್ಗದಲ್ಲಿ ಗ್ಯಾಸ್ ಸ್ಟೌ ಅಂಗಡಿಯಲ್ಲಿ ಶುಕ್ರವಾರ ಸಂಜೆ ಶಾರ್ಟ ಸರ್ಟ್ಯೂಟದಿಂದ ಬೆಂಕಿ ಅವಗಢ ಸಂಭವಿಸಿದೆ. ಈ ಅವಗಢದಲ್ಲಿ ಸಿಲಿಂಡರ್ ಸ್ಪೋಟಗೊಂಡಿದ್ದರಿಂದ ಅಂಗಡಿ ಸಂಪೂರ್ಣವಾಗಿ ಸುಟ್ಟುಕರಕಲಾಗಿದೆ. ಅಪಾರ ಪ್ರಮಾಣದ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
ಅಂಗಡಿ ಧಗಧಗನೇ ಹೊತ್ತಿ ಉರಿಯುತ್ತಿರುವ ದೃಶ್ಯ ಕಂಡ ಜನತೆ ಬೆಚ್ಚಿಬಿದ್ದು, ಅಲ್ಲಿಂದಕೂಡಲೇ ತೆರಳಿದರು. ಪೈ ಇಂಟರನ್ಯಾಷಲ್ ಶೋ ರೂಂ ಬದಿಯಲ್ಲಿರುವ ಸ್ಟೌ ರಿಪೇರಿ ಮಾಡುವ ಅಂಗಡಿಗೆ ಬೆಂಕಿಗಾಹುತಿಯಾಗಿದೆ. ಖಡೆಬಜಾರ ಮಾರ್ಗ ಜನದಟ್ಟನೆಯಿಂದ ಕೂಡಿರುತ್ತದೆ.ಈ ಮಾರ್ಗದಲ್ಲಿ ಸಾವಿರಾರು ಜನರು ಓಡಾಡುವುದು ಸಾಮಾನ್ಯ. ಆದರೆ, ಗ್ಯಾಸ್ ಸ್ಟೌ ಅಂಗಡಿಗೆ ಬೆಂಕಿ ಹತ್ತಿರುವ ದೃಶ್ಯ ನೋಡಿದ ಅಕ್ಕಪಕ್ಕದ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಬಂದ್ ಮಾಡಿದರು. ಕ್ಷಣಾರ್ಧದಲ್ಲೇ ಬೆಂಕಿ ಹೊತ್ತಿ ಉರಿಯುತ್ತಿದ್ದಂತೆಯೇ ಅಂಗಡಿಯಲ್ಲಿದ್ದ ನಾಲ್ಕು ಸಿಲಿಂಡರ್‌ಗಳು ಕೂಡ ಸ್ಪೋಟಗೊಂಡಿವೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕದಳಕ ಸಿಬ್ಬಂದಿ ಭೇಟಿ ನೀಡಿ, ಬೆಂಕಿಯನ್ನು ನಂದಿಸಿದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ