Breaking News
Home / Breaking News / ಪೌರ ಕಾರ್ಮಿಕ ಮಹಿಳೆಗೆ ಒಲಿದ ಮೇಯರ್ ಪಟ್ಟ…

ಪೌರ ಕಾರ್ಮಿಕ ಮಹಿಳೆಗೆ ಒಲಿದ ಮೇಯರ್ ಪಟ್ಟ…

ಪೌರ ಕಾರ್ಮಿಕ ಮಹಿಳೆಗೆ ಒಲಿದ ಮೇಯರ್ ಪಟ್ಟ…

ದಲಿತ ಮಹಿಳೆಗೆ ಒಲಿದ ಅಂಬೇಡ್ಕರ್ ಕಾನೂನಾತ್ಮಕ ಹೋರಾಟದ ಪ್ರತಿಫಲ*

*”ಸವಿತಾ” “ಕಾಂಬಳೆ” ಬೆಳಗಾವಿ ಮಹಾನಗರ ಪಾಲಿಕೆಯ ಪ್ರಥಮ ಪ್ರಜೆ – ಸ್ತ್ರೀಶಕ್ತಿಗೆ ಸಂದ ಐತಿಹಾಸಿಕ ಜಯ*

ಬೆಳಗಾವಿ-ಮಹಿಳಾ ಶೋಷಣೆಯ ವಿವಿಧ ಮಗ್ಗಲುಗಳ ಬಗ್ಗೆ ಆಳವಾಗಿ ಚಿಂತಿಸಿ, ಧಾರ್ಮಿಕ- ಸಾಮಾಜಿಕ- ರಾಜಕೀಯ ಹಕ್ಕುಗಳನ್ನು ಸಂವಿಧಾನ ದತ್ತಿವಾಗಿ ನೀಡಲು ಶ್ರಮಿಸಿದ ಭಾರದತ ಮೊದಲ ವ್ಯಕ್ತಿ ಭಾರತ ರತ್ನ ಡಾಕ್ಟರ್‌ ಬಾಬಾಸಾಹೇಬ ಅಂಬೇಡ್ಕರ್‌ ಅವರು. ʻಯಾವುದೇ ಸಮುದಾದ ಏಳ್ಗೆಯನ್ನು ಅಳೆಯಬೇಕಾದರೆ ಆ ಸಮುದಾಯದ ಸ್ತ್ರೀಯರ ಏಳ್ಗೆಯನ್ನು ಪರಿಗಣಿಸಬೇಕು ʼ ಎಂದು ಮಹಿಳೆಯರ ಸ್ಥಿತಿಗತಿಯನ್ನು ಸಮಾಜದ ಏಳ್ಗೆಯ ಸೂಚ್ಯಂಕವಾಗಿ ಪರಿಗಣಿಸಿದ ಅಂಬೇಡ್ಕರ್‌ ಭಾರತದಲ್ಲಿ ಮಾನವ ಹಕ್ಕು ಹಾಗೂ ಮಹಿಳಾ ಹಕ್ಕು ಹೋರಾಟುಗಳಿಗೆ ಕಾನೂನು ಚೌಕಟ್ಟು ನೀಡಿದ ಮೊದಲನಾಯಕ. ‌

ಡಾಕ್ಟರ್‌ ಬಾಬಾಸಾಹೇಬರು ಕಂಡ ಕನಸು, ನಡೆಸಿದ ಹೋರಾಟದ ಪ್ರತಿಫಲವಾಗಿ ಇಂದು ಸ್ತ್ರೀ ಕುಲ ಸಾಮಾಜಿಕ ರಾಜಕೀಯ ಹಕ್ಕು ಮತ್ತು ಸ್ವಾತಂತ್ರ್ಯ ಅನುಭವಿಸಲು ಸಾಧ್ಯವಾಗಿದೆ. ಇದಕ್ಕೊಂದು ಅಪರೂಪದ ನಿದರ್ಶನವಾಗಿ ಬಾಬಾಸಾಹೇಬರ ಪಾದಸ್ಪರ್ಶ ಪಡೆದ ಬೆಳಗಾವಿಯಲ್ಲಿ ನೆಲದಲ್ಲಿ ದಲಿತ ಸಮುದಾಯದ ಬದುಕಿನ ಎಲ್ಲ ಹಕ್ಕು ಕಳೆದುಕೊಂಡು ಸವಿತಾ ಕಾಂಬಳೆ ಇಂದು ಬೆಳಗಾವಿ ಮಹಾನರ ಪಾಲಿಕೆಯ ಪ್ರಥಮ ಪ್ರಜೆಯಾಗಿರುವುದು. ಸವಿತಾ ಕಾಂಬಳೆ ಅವರ ಸಾಮಾಜಿಕ ಕಾಳಜಿಗೆ ಡಾಕ್ಟರ್‌ ಬಿ.ಆರ್.‌ ಅಂಬೇಡ್ಕರ್‌ ಅವರು ಒದಗಿಸಿದ ಕಾನೂನಾತ್ಮಕ ಬಲದ ಪ್ರತೀಕ. ಹಾಗಂತ ಅಂಬೇಡ್ಕರ್‌ ಅವರ ಕನಸು ಸಾಮಾಜಿಕವಾಗಿ ಸರಳವಾಗಿ ನೆರವೇರುತ್ತಿದೆ ಎಂದು ಭಾವಿಸಬೇಕಾಗಿಲ್ಲ. ಈಗಲೂ ಸಾಮಾಜಿಕ ಶ್ರೇಣೀಕೃತ ವ್ಯವಸ್ಥೆ, ಲಿಂಗತಾರತಮ್ಯೆತೆ ಮಹಿಳೆಯನ್ನು ವ್ಯವಸ್ಥಿತಿತವಾಗಿ ಹತ್ತಿಕ್ಕಲು ಹವಣಿಸುವ ಪ್ರಯತ್ನದಲ್ಲಿ ಕಾರ್ಯಮಗ್ನವಾಗಿರುತ್ತದೆ. ಆದರೆ, ಅಂಬೇಡ್ಕರ್‌ ಅವರು ಕಾನೂನಾತ್ಮಕ ನೀಡಿದ ಶಕ್ತಿ ಇದನೆಲ್ಲವನ್ನೂ ಬಗ್ಗು ಬಡೆದು ಸ್ತ್ರೀ ಗೌರವವನ್ನು ಎತ್ತಿಹಿಡಿಯುತ್ತಿದೆ ಎನ್ನುವುದಕ್ಕೆ ಶೋಷಣೆಯ ಎಲ್ಲ ಮಗ್ಗಲುಗಳನ್ನು ಅನುಭವಿಸಿ ಪುಟಿದೆದ್ದು ಬಂದ ಸವಿತಾ ಕಾಂಬಳೆಗೆ ಲಭಿಸಿದ ಸ್ಥಾನಮಾನವೇ ಸಾಕ್ಷಿಯಾಗಿದೆ.

ಈಗ ಸವಿತಾ ಕಾಂಬಳೆ ಜೀವನ ಸಾಧನೆಯತ್ತ ಬರುವುದಾದರೆ, ಸವಿತಾ ದಲಿತ ಸಮುದಾಯದ ಅತ್ಯಂತ ಕಡುಬಡತನದಿಂದ ಬಂದ ಸಾಮಾನ್ಯ ಮಹಿಳೆ. ಇಲ್ಲಗಳ ಮಧ್ಯ ಆಶಾದಾಯಕ ಜೀವನಕ್ರಮ ಹಾಗೂ ಸಾಮಾಜಿಕ ಕಾಳಜಿ ಇಲ್ಲಿಗೆ ಕರೆ ತಂದಿದೆ. ದಲಿತ ಇರಲಿ ದಲಿತೇರರವೇ ಇರಲಿ ಎಲ್ಲ ಸೌಲಭ್ಯಗಳು ಆರ್ಥಿಕ ಅನುಕೂಲಸ್ಥರಿಗೆ ಮಾತ್ರ ಸಾಧ್ಯ ಎನ್ನುವ ಪ್ರಸ್ತುತ ಸಂದರ್ಭದಲ್ಲಿ ಸಂವಿಧಾನಾತ್ಮಕ ಮೀಸಲು ಶಕ್ತಿ ಅನಾನುಕೂಲ ಸ್ತ್ರೀ ಶಕ್ತಿಯನ್ನು ಎತ್ತಿ ಹಿಡಿದಿದೆ.

ಮೂಲಕ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಶಿರಗೂರ ಗ್ರಾಮದ ಸವಿತಾ ಕಾಂಬಳೆ ನಿತ್ಯ ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿದ್ದ ಸಾಮಾನ್ಯ ಕುಟುಂಬದ ಮಹಿಳೆ. ಸವಿತಾಗೆ ಮದುವೆ ಆಗಿತ್ತು. ಒಬ್ಬ ಮಗ ಇದ್ದಾನೆ. ಅದಾವದೋ ಕಾರಣಕ್ಕೆ ಸಂಸಾರದಲ್ಲಿ ಉಂಟಾದ ಕನದಿಂದಾಗಿ ಬೆಳಗಾವಿಗೆ ಆಗಿಮಿಸಿದ ಸವಿತಾ ಬೆಳಗಾವಿಯ ಸದಾಶಿವ ನಗರದ ಬೆಲ್ದಾರ ಛಾವಣಿ ಪ್ರದೇಶದಲ್ಲಿ ಉಳಿದುಕೊಂಡು ಸುತ್ತಲಿನ ಮನೆಗಳ ಕಸಮುಸರೆ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದಳು. ಮೂರ್ನಾಲ್ಕು ತಿಂಗಳು ಪೌರ ಕಾರ್ಮಿಕರಾಗಿಯೂ ಕೆಲಸ ಮಾಡಿದರು. ಮುಂದೆ ಉದ್ಯಮಬಾಗದಲ್ಲಿ ಉದಬತ್ತಿ ತಯಾರಿಕೆ ಕಂಪನಿಯಲ್ಲಿ ಕೆಲಸ ಮಾಡಿದರು. ನಂತರ ಇದೇ ಉದ್ಯಮಬಾಗದಲ್ಲಿರುವ ಮೇಗಾ ಹೆಲ್ಮೇಟ್‌ ತಯಾರಿಕಾ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಈ ಮಾಧ್ಯ ನಗರದ ಸರ್ದಾರ್‌ ಹೈಸ್ಕೂಲನಲ್ಲಿ ಸವಿತಾ ಎಸ್.ಎಸ್.ಎಲ್.ಸಿ. ವರೆಗೆ ಓದುತ್ತಾರೆ.

ನಿತ್ಯ ಕೂಲಿ ಕೆಲಸ ಮಾಡಿ ದುಡಿದು ತಿನ್ನುವ ಸವಿತಾ ಸಾಮಾಜಿಕ ಸಂಪರ್ಕ ಸಾಧಿಸಿ ದುಡಿತದ ಮಧ್ಯ ಸಾಮಾಜಿಕ ಸೇವೆಗೆ ತೊಡಗಿಸಿಕೊಳ್ಳುತ್ತಿದ್ದರು. ಈ ಕಾಳಜಿಯೇ ಆಕೆಗೆ ವರವಾಗಿ ಮಹಿಳಾ ಮೀಸಲು ಬೆಳಗಾವಿ ಮಹಾನಗರ ಪಾಲಿಕೆ ವಾರ್ಡ ಸದಸ್ಯ ಚುನಾವಣೆಗೆ ಸ್ಪರ್ಧಿಸಿ ಗೆಲವು ಸಾಧಿಸಲು ವಾರ್ಡನ ಜನರೇ ಒಮ್ಮತದಿಂದ ಶ್ರಮಿಸುತ್ತಾರೆ. ಸವಿತಾರ ಕಾಳಜಿ, ವಾರ್ಡ ಜನರ ಒತ್ತಾಸೆ ಯಶಸ್ಸು ಸಾಧಿಸಿ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿ ಗೆಲವು ಸಾಧಿಸುತ್ತಾರೆ. ರಾಜ್ಯದ ಮಹಾನಗರ ಪಾಲಿಕೆಗಳಲ್ಲಿ ಪ್ರಾಮುಖ್ಯತೆ ಸಾಧಿಸಿ ಬೆಳಗಾವಿ ಮಹಾನಗರ ಪಾಲಿಕೆಗೆ ಪ್ರಥಮ ಸದಸ್ಯತ್ವದಲ್ಲಿಯೇ ಪಾಲಿಕೆಯ ಪ್ರಥಮ ಪ್ರಜೆಯಾಗಿ ಆಯ್ಕೆ ಆಗಿರುವುದು ಸವಿತಾರ ಕ್ರಿಯಾಶಕ್ತಿಗೆ ಸಂದ ಗೌರವ ಮಾತ್ರವಲ್ಲಿ ಸಾಂವಿಧಾನತ್ಮಕವಾಗಿ ಸ್ತ್ರೀ ಶಕ್ತಿಗೆ ಲಭಿಸಿ ಜಯದ ಸಂಕೇತವೂ ಹೌದು.

ರಾಜಕೀಯ ಎಂದ್ಮೇಲೆ ಚುನಾವಣೆ ಅದರ ಹಿಂದಿನ ತಂತ್ರಗಳು ನಡೆದೇ ನಡೆಯುತ್ತವೆ. ಸವಿತಾ ಕಾಂಬಳೆ ಅವರ ಆಯ್ಕೆಯ ಸಂದರ್ಭದಲ್ಲಿ ಇದೆಲ್ಲ ನಡೆದಿದ್ದರೂ ಒಂದು ಐತಿಹಾಸಿಕ ದಾಖಲೆ ಬರೆಯಬೇಕೆಂಬ ಉದ್ದೇಶದಿಂದ ಪ್ರಸ್ತುತ ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ಹಾಗೂ ಮಾಜಿ ಶಾಸಕ, ಬಿಜೆಪಿಯ ಪ್ರಭಾವಿ ನಾಯಕ ಅನಿಲ ಬೆನಕೆ ಅವರು ಸವಿತಾ ಅವರನ್ನು ಮೇಯರ್‌ ಮಾಡುವಲ್ಲಿ ತೆಗೆದುಕೊಂಡು ರಾಜಕೀಯ ನಿರ್ಣಾಯಕ ಪಾತ್ರ ಪ್ರಮುಖವಾದದ್ದು. ಈ ಇಬ್ಬರ ನಾಯಕರ ಐತಿಹಾಸಿಕ ನಿರ್ಧಾರ ಶ್ಲಾಘನೀಯ ಹಾಗೂ ಅಭಿನಂದನಾರ್ಹ.

ಡಾಕ್ಟರ್‌ ಬಾಬಾಸಾಹೇಬ ಅಂಬೇಡ್ಕರ್‌ ಅವರ ಕಾನೂನಾತ್ಮಕ ಹೋರಾಟದ ಪ್ರತಿಫಲವಾಗಿ ಪಾಲಿಕೆಯ ಪ್ರಥಮ ಪ್ರಜೆ ಆಗಿರುವ ಸವಿತಾ ಕಾಂಬಳೆ ಅಂಬೇಡ್ಕರ್‌ ಕನಸುಗಳಿಗೆ ಪೂರಕವಾಗಿ ಕೆಲಸ ಮಾಡಲಿ, ಮಹಿಳೆಯರ ಗೌರವ ಸ್ಥಾನಮಾನ ಇನ್ನೂ ಹೆಚ್ಚಿಸಲಿ ಎಂದು ಬೆಳಗಾವಿ ಸುದ್ಧಿ ಡಾಟ್‌ ಕಾಮ್‌ ಆಶಿಸುತ್ತದೆ. ʼಸವಿತಾʼ ಎಂಬ ಹೆಸರು ಅಂಬೇಡ್ಕರ್‌ ಜೀವನದಲ್ಲಿ ಪ್ರಮುಖವಾಗಿದ್ದು, ಅದು ಅವರ ಎರಡನೇ ಧರ್ಮ ಪತ್ನಿಯ ಹೆಸರೂ ಆಗಿರುವುದು ಅದೇ ಹೆಸರಿನ್ನು ಹೊಂದಿರುವ ನಮ್ಮ ಮೇಯರ್‌ ʼಸವಿತಾʼ ಆಗಿರುವುದು ಹೆಮ್ಮೆಯ ಸಂಗತಿ.

ಮಹಾಪೌರರಾಗಿ ಆಯ್ಕೆಯಾದ ಸವಿತಾ ಕಾಂಬಳೆ,ಮತ್ತು ಉಪ ಮಹಾಪೌರ ಆನಂದ ಚವ್ಹಾಣ್ ಅವರಿಗೆ ಗಣ್ಯರು ಅಬಿನಂಧನೆ ಸಲ್ಲಿಸಿದರು.

Check Also

ಕಾಂಗ್ರೆಸ್ ಪಾರ್ಟಿಯಲ್ಲೂ ಚಹಾ ಪೇ ಚರ್ಚಾ ವೀದೌಟ್ ಖರ್ಚಾ…!!!

ಬೆಳಗಾವಿ- ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಇವತ್ತು ಬೆಳಗಾವಿಗೆ ಬಂದ್ರು ಇಲ್ಲಿಯ ಕಾಂಗ್ರೆಸ್ ಭವನದಲ್ಲಿ …

Leave a Reply

Your email address will not be published. Required fields are marked *