ಟ್ರೇಲರ್ ಬಿಡುಗಡೆ ಆಗುವ ಮುನ್ನವೇ ಪಿಕ್ಚರ್ಸ್ ರಿಲೀಸ್…!!!

 

ಬೆಳಗಾವಿ-ಪಾರ್ಲಿಮೆಂಟ್ ಇಲೆಕ್ಷನ್ ಬಂದಿದೆ, ಬೆಳಗಾವಿ ಲೋಕಸಭಾ ಮತಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂದು ಬಿಸಿಬಿಸಿ ಚರ್ಚೆ ನಡೆಯುತ್ತಿರುವಾಗಲೇ ಸೋಶಿಯಲ್ ಮಿಡಿಯಾ ದಲ್ಲಿ ಪೂಲ್ ಪಿಕ್ಚರ್ಸ್‌ ರಿಲೀಸ್ ಆಗಿದ್ದು ಸೋಶಿಯಲ್ ಮಿಡಿಯಾ ದಲ್ಲಿ ಹರದಾಡುತ್ತಿರುವ ಪೋಟೋ ಸಖತ್ತ್ ವೈರಲ್ ಆಗಿದೆ.

ಒಂದು ಪೋಟೋ ನೂರು ಪದಗಳಿಗೆ ಸಮ ಎಂದು ಹೇಳ್ತಾರೆ, ಆದ್ರೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ,ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮತ್ತು ಬೆಳಗಾವಿ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ ಡಾ.ಗಿರೀಶ್ ಸೋನವಾಲ್ಕರ್ ಅವರು ಒಗ್ಗೂಡಿ ಚರ್ಚೆ ಮಾಡುತ್ತಿರುವ ಪೋಟೋ ಈಗ ಕಾಂಗ್ರೆಸ್ ಕಾರ್ಯಕರ್ತರ ವಲಯದಲ್ಲಿ ಚರ್ಚೆಯ ಅಸ್ತ್ರವಾಗಿದ್ದು ನಿಜ…

ಬೆಳಗಾವಿ ಲೋಕಸಭಾ ಮತಕ್ಷೇತ್ರದಿಂದ ಲಕ್ಷ್ಮೀ ಹೆಬ್ಬಾಳಕರ್ ಅವರ ಸುಪುತ್ರ ಮೃನಾಲ ಹೆಬ್ಬಾಳಕರ್ ಮತ್ತು ಡಾ. ಗಿರೀಶ್ ಸೋನವಾಲ್ಕರ್ ಇಬ್ಬರು ಆಕಾಂಕ್ಷಿಗಳ ಹೆಸರು ಮಾತ್ರ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಮೀಟಿಯಿಂದ ಕೆಪಿಸಿಸಿಗೆ ಶಿಫಾರಸು ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸುವ ವಿಚಾರದಲ್ಲಿ ಹೈಕಮಾಂಡ್ ಅಂಗಳದಲ್ಲಿ ತಮ್ಮ ಪ್ರಭಾವ ಬೀರಿದ್ದಾರೆ ಎಂದು ತಿಳಿದು ಬಂದಿದೆ.

ಈಗ ಸದ್ಯ ಸೋಶಿಯಲ್ ಮೀಡಿಯಾ ದಲ್ಲಿ ಏನಿಲ್ಲಾ ಯಾರಿಲ್ಲ..ಕರಿಮಣಿ ಮಾಲೀಕ ನಾನಲ್ಲ ಎನ್ನುವ ಹಾಡು ಫುಲ್ ವೈರಲ್ ಆಗಿರುವ ಬೆನ್ನಲ್ಲಿಯೇ….
ಬೆಳಗಾವಿ ಕಾಂಗ್ರೆಸ್ ವಲಯದಲ್ಲಿ ಏನಿಲ್ಲಾ…ಯಾರಿಲ್ಲಾ…ಡಾ.ಗಿರೀಶ್ ಸೋನವಾಲ್ಕರ್ ಹೆಸರು ಫೈನಲ್ಲಾ…?? ಎನ್ನುವ ಹಾಡು ಕೇಳಿ ಬರುತ್ತಲೇ ಇದೆ.

ಸತೀಶ್ ಜಾರಕಿಹೊಳಿ ಅಭಿಮಾನಿಗಳು ಪ್ರಿಯಾಂಕಾ ಜಾರಕಿಹೊಳಿ ಹೆಸರು ಫೈನಲ್ ಆಗಿದೆ ಎನ್ನುವ ಪೋಸ್ಟಗಳು ವೈರಲ್ ಆಗಿವೆ‌.ಇನ್ನೊಂದು ಕಡೆ ಲಕ್ಷ್ಮೀ ಹೆಬ್ಬಾಳಕರ್ ಸೈಲೆಂಟ್ ಆಗಿದ್ದು ಅವರ ಮೌನ ಬಿರುಗಾಳಿ ಬೀಸುವ ಮುನ್ಸೂಚನೆ ಕೊಡುತ್ತಿದೆ. ಈ ಸಂದಿಗ್ಧ ಸಮಯದಲ್ಲಿ ಡಾ.ಗಿರೀಶ್ ಸೋನವಾಲ್ಕರ್ ಅವರ ಹೆಸರು ಓಡಾಡುತ್ತಿದೆ.

ರಾಜಕಾರಣದಲ್ಲಿ ಯಾವುದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ..ಯಾಕಂದ್ರೆ ರಾಜಕಾರಣದಲ್ಲಿ ಏನ್ ಬೇಕಾದ್ರೂ ಆಗಬಹುದು ರಾಜಕೀಯ ಆಟ ತರ್ಕಕ್ಕೆ ನಿಲುಕದ್ದು.ಅದನ್ನು ಕಲ್ಪನೆ ಮಾಡಲೂ ಸಾಧ್ಯವಿಲ್ಲ..ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು..? ವಾಚ್ ಆ್ಯಂಡ್ ವೇಟ್…..!!!

Check Also

ಚನ್ನಮ್ಮಾಜಿಯ ಮೂರ್ತಿ ತೆರವು ವಿವಾದ, ಸಂಧಾನ ಸಫಲ

ಬೆಳಗಾವಿ ವೀರರಾಣಿ ಕಿತ್ತೂರು ಚನ್ನಮ್ಮನ ಅಶ್ವಾರೂಢ ಪ್ರತಿಮೆ ತೆರವಿಗೆ ಪೊಲೀಸ್‌ರು ಮತ್ತು ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳು ಮುಂದಾದ ವೇಳೆ …

Leave a Reply

Your email address will not be published. Required fields are marked *