Breaking News

ಶಾಸಕರ ಚೆಸ್ ಕಪ್ ನಲ್ಲಿ ಬೆಳಗಾವಿ ಜಿಲ್ಲೆಗೂ ಬಹುಮಾನ

ಬೆಂಗಳೂರು-ಕರ್ನಾಟಕ ವಿಧಾನಸಭೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಲೆಜಿಸ್ಲೇಜರ್ ಕಪ್-2024 ಚೆಸ್ ಪಂದ್ಯಾವಳಿಯು ಅತ್ಯಂತ ಯಶಸ್ವಿಯಾಗಿ ನಡೆಯಿತು.

ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು ವಿಶ್ವ ಚೆಸ್ ದಿನದ ಅಂಗವಾಗಿ ಈ ಪಂದ್ಯಾವಳಿ ಆಯೋಜಿಸಿದ್ದು, ಆರು ಸುತ್ತುಗಳಲ್ಲಿ ಪಂದ್ಯಗಳು ನಡೆದು ನೋಡುಗರ ಹುಬ್ಬೇರುವಂತೆ ಮಾಡಿತು.

ಪಂದ್ಯಾಕೂಟದ ಎಲ್ಲಾ ಸುತ್ತಿನಲ್ಲಿ ಜಯ ದಾಖಲಿಸುವ ಮೂಲಕ ಶಾಸಕರಾದ ಅಜಯ್ ಸಿಂಗ್ ಅವರು 2 ಲಕ್ಷ ನಗದನ್ನು ಒಳಗೊಂಡಿರುವ ಪ್ರಥಮ ಬಹುಮಾನ ಗೆದ್ದರೆ, ಖಾನಾಪುರ ಶಾಸಕ ವಿಠ್ಠಲ್ ಸೋಮಣ್ಣ ಹಲಗೇಕರ್ ಅವರು ದ್ವಿತೀಯ ಬಹುಮಾನ ಮತ್ತು ಪ್ರತಾಪ್ ಸಿಂಹ ನಾಯಕ್ ಅವರು ತೃತೀಯ ಬಹುಮಾನ ಗಳಿಸಿದರು.

ವಿಜೇತರೆಲ್ಲರಿಗೂ ಮುಖ್ಯಮಂತ್ರಿ Siddaramaiah ಅವರು ಬಹುಮಾನ ವಿತರಿಸಿ ಶುಭ ಹಾರೈಸಿದರು.

#ಖಾನಾಪೂರ

Check Also

ಕುಡಚಿ ರೈಲು ನಿಲ್ದಾಣದಲ್ಲಿ ʻವಂದೇ ಭಾರತ ರೈಲುʼ ನಿಲುಗಡೆಗೆ ಸಂಸದೆ ಪ್ರಿಯಾಂಕಾ ಮನವಿ

ಬೆಳಗಾವಿ: ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲನ್ನು (ನಂ.20669) ನಿಲುಗಡೆ ಮಾಡಬೇಕೆಂದು ಕೇಂದ್ರ …

Leave a Reply

Your email address will not be published. Required fields are marked *