Breaking News

PRESS ಲೇಬಲ್ ಹಚ್ಚಿ ರಾತ್ರಿಹೊತ್ತು ದೋಖಾ….!!

 

ಕಾರಿನ ಮೇಲೆ PRESS ಎಂದು ಲೇಬಲ್ ಹಚ್ಚಿ ಬೆಳಗಾವಿ ನಗರದಲ್ಲಿ ರಾತ್ರಿಹೊತ್ತು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಈಗ ಬೆಳಗಾವಿ ಪೋಲೀಸರ ಬಲೆಗೆ ಬಿದ್ದಿದೆ.

*ಮಾಳಮಾರುತಿ ಪೊಲೀಸರಿಂದ ಅಂತರ್ ರಾಜ್ಯ ಕಳ್ಳರ ಬಂಧನ ; 20 ಲಕ್ಷ ಮೌಲ್ಯದ ವಸ್ತುಗಳು ಜಪ್ತು*

ಬೆಳಗಾವಿ- ನಗರದಲ್ಲಿ ಇತ್ತೀಚಿಗೆ ಘಟಿಸುತ್ತಿದ್ದ ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಲು ನಗರದ ಎಲ್ಲ ಪಿಎಸ್ಐ ಪಿಎ ರವರಿಗೆ ಸೂಚಿಸಿದಂತೆ ಮಾಳ ಮಾರುತಿ ಪೊಲೀಸ್ ಠಾಣೆ ರವರು ಅಂತರ್ ರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.

ನಾಗರಾಜ್ ಸುಭಾಷ್ ಕಚೇರಿ ಕಮಲಾಪುರ್ ತಾ& ಜಿ ಗುಲ್ಬರ್ಗ ಸದ್ಯ ನವೀನ್ ಗರಕುಲ ಕುಂಬಾರಿ ಸೋಲಾಪುರ್ ಈತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದಾಗ ಇವನು ತನ್ನ ಗೆಳೆಯರೊಂದಿಗೆ XUV 500 ಐಷಾರಾಮಿ ಕಾರಿನ ಮೇಲೆ *PRESS* ಅಂತ ಬರೆಯಿಸಿ, ಅದರಲ್ಲಿ ಬಂದು ಮಹಾಂತೇಶ್ ನಗರ ಆಂಜನೇಯ ನಗರ ಮತ್ತು ಶಿವಬಸವ ನಗರಗಳಲ್ಲಿ ಕಳ್ಳತನ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಅವನ ಕಡೆಯಿಂದ 10 ಲಕ್ಷ ಮೌಲ್ಯದ ಬಂಗಾರ ಹಾಗೂ ಸುಮಾರು 10 ಲಕ್ಷದ xuv ಕಾರು ಹೀಗೆ ಒಟ್ಟು 20 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಆತನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ
ಈತನೊಂದಿಗೆ ಕೃತ್ಯದಲ್ಲಿದ್ದ ಇನ್ನುಳಿದ ಆರೋಪಿತರಾದ 1.ಹುಸೇನ್ @ ಸಾಗರ್ ಗಾಯಕ್ವಾಡ್ 2.ಅಮುಲ್ ಹಾಗೂ 3.ಕೇತ್ಯಾ ಎಂಬುವವರು ಪರಾರಿ ಇದ್ದು, ವಿಶೇಷ ತಂಡವನ್ನು ರಚಿಸಿ ಅವರ ಪತ್ತೆ ಕಾರ್ಯ ಮುಂದುವರಿಸಿದೆ.
ಹೀಗೆ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಅಂತರ್ ರಾಜ್ಯ ಕಳ್ಳರ ಬಂಧನದಲ್ಲಿ ಶ್ರಮಿಸಿದ ಮಾರ್ಕೆಟ ವಿಭಾಗದ ಎಸಿಪಿ ಸೋಮೇಗೌಡ ಯು. ಜಿ. ರವರ ಮಾರ್ಗದರ್ಶನದಲ್ಲಿ ಕಾಲಿ ಮಿರ್ಚಿ ಪಿ ಐ ಇವರ ನೇತೃತ್ವದ ತಂಡ ಹೊನ್ನಪ್ಪ ತಳವಾರ್ ಪಿಎಸ್ಐ ಶ್ರೀಶೈಲ್ ಹುಳಗೇರಿ ಪಿಎಸ್ಐ ಮತ್ತು ಸಿಬ್ಬಂದಿ ಎಂ ಜಿ ಕುರೇರ್, ಚಿನ್ನಪ್ಪಗೋಳ, ಬಸು ಬಸ್ತ, ಚಂದ್ರು ಚಿಗರಿ ಕೆ.ಬಿ. ಗೌರಾನಿ, ಹೊಸಮನಿ, ರವಿ ಬಾರಿಕರ್, ಮುಜಾವರ, ಶಿವಾಜಿ ಚೌಹಾನ, ಮಾರುತಿ ಮಾದರ, ಮಲ್ಲಿಕಾರ್ಜುನ್ ಗಾಡವಿ, ಜಗನ್ನಾಥ ಭೋಸ್ಲೆ, ಬಸವರಾಜ ಕಲ್ಲಪ್ಪನವರ, ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ರಮೇಶ್ ಅಕ್ಕಿ ಹಾಗೂ ಮಹಾದೇವ ಕಾಶಿದ ರವರ ತಂಡವನ್ನು ಯೆಡಾ ಮಾಟಿನ್ ಮಾರ್ಬನ್ಯಾಂಗ್ ಐಪಿಎಸ್ ಪೊಲೀಸ್ ಆಯುಕ್ತರು ಬೆಳಗಾವಿ ನಗರ ಹಾಗೂ ಡಿಸಿಪಿ ರವರುಗಳು ಪ್ರಶಂಸಿಸಿರುತ್ತಾರೆ.

Check Also

ರಿವರ್ ಕ್ರಾಸ್ಸೀಂಗ್ ತರಬೇತಿಗೆ ಹೋಗಿದ್ದ ಬೆಳಗಾವಿಯ ಇಬ್ಬರು ಕಮಾಂಡೋಗಳ ಸಾವು

ಬೆಳಗಾವಿ -ರಿವರ್ ಕ್ರಾಸೀಂಗ್ ತರಬೇತಿಗೆ ಹೋಗಿದ್ದ ಬೆಳಗಾವಿ ಕಮಾಂಡೋ ಸೆಂಟರ್ ನ ಇಬ್ಬರು ಕಮಾಂಡೋಗಳು ಬೋಟ್ ಮುಳುಗಿದ ಪರಿಣಾಮ ಮೃತಪಟ್ಟ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.