ಬೆಳಗಾವಿಯಲ್ಲಿ ಯತ್ನಾಳಗೌಡರ ಠಿಖಾನಿ, ಗುಪ್ತ..ಗುಪ್ತ…ಸಭೆ…!!!

ಬೆಳಗಾವಿ- ಅತ್ತ ಮೈಸೂರಿನಲ್ಲಿ ಬಿಜೆಪಿ ಪಾದಯಾತ್ರೆ ನಡೆಸುತ್ತಿದೆ.ಇತ್ತ ಬೆಳಗಾವಿ ನಗರದ ಹೊರ ವಲಯದಲ್ಲಿರುವ ರಿಸಾರ್ಟ್ ನಲ್ಲಿ ಬಿಜೆಪಿಯ ಅತೃಪ್ತ ನಾಯಕರು ಬಸನಗೌಡ ಯತ್ನಾಳ, ಹಾಗೂ ರಮೇಶ್ ಜಾರಕಿಹೊಳಿ ಅವರ ನೇತ್ರತ್ವದಲ್ಲಿ ಸಭೆ ನಡೆಸಿದ್ದು ಬಸನಗೌಡ ಯತ್ನಾಳ ಕಳೆದ ಎರಡು ದಿನಗಳಿಂದ ಬೆಳಗಾವಿಯಲ್ಲೇ ಠಿಖಾನಿ ಹೂಡಿದ್ದು ಗುಪ್ತವಾಗಿಯೇ ಎಲ್ಲ ಅತೃಪ್ತರನ್ನು ಸಂಘಟಿಸುವ ವೇದಿಕೆಯನ್ನು ಬೆಳಗಾವಿಯಲ್ಲೇ ರೆಡಿ ಮಾಡುತ್ತಿರುವ ಅಚ್ಚರಿಯ ಬೆಳವಣಿಗೆಯ ಮಾಹಿತಿ ಲಭ್ಯವಾಗಿದೆ.

ಬಸನಗೌಡ ಯತ್ನಾಳ ಎರಡು ದಿನಗಳಿಂದ ಬೆಳಗಾವಿಯ ಹೊರ ವಲಯದಲ್ಲಿರುವ ರಿಸಾರ್ಟ್ ನಲ್ಲಿ ಗುಪ್ತವಾಗಿ ಸರಣಿ ಸಭೆಗಳನ್ನು ನಡೆಸುತ್ತಿದ್ದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಸಮರ ಸಾರಿದ್ದು ವಿಜಯೇಂದ್ರ ವಿರುದ್ಧ ಅಸಮಾಧಾನ ಇರುವ ಬಿಜೆಪಿ ಶಾಸಕರು ಒಬ್ಬೊಬ್ಬರಾಗಿ ಯತ್ನಾಳ ಗೌಡರ ಗರಡಿ ಸೇರುತ್ತಿದ್ದಾರೆ. ಬೆಳಗಾವಿಯಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆದಿವೆ.

ಬಸನಗೌಡ ಯತ್ನಾಳ,ರಮೇಶ್ ಜಾರಕಿಹೊಳಿ ಪ್ರತಾಪ ಸಿಂಹ, ಹಾಗೂ ಅನೇಕ ಜನ ಬಿಜೆಪಿ ಶಾಸಕರು ಮತ್ತು ಕೆಲವು ಜನ ಬಿಜೆಪಿ ನಾಯಕರು ಗುಪ್ತವಾಗಿ ಯತ್ನಾಳಗೌಡರ ಜೊತೆ ಬೆಳಗಾವಿಯ ಹೊರವಲಯದಲ್ಲಿರುವ ರಿಜಂಟಾ ರಿಸಾರ್ಟ್ ನಲ್ಲಿ ಸಭೆ ನಡೆಸಿರುವ ಅಚ್ಚರಿಯ ಮಾಹಿತಿ ಬೆಳಗಾವಿ ಸುದ್ದಿ ಡಾಟ್ ಕಾಮ್ ಗೆ ಲಭ್ಯವಾಗಿದೆ.

ಮುಡಾ ಬಳಿಕ ಮತ್ತೊಂದು ಪಾದಯಾತ್ರೆಗೆ ಬಿಜೆಪಿಯ ಇನ್ನೊಂದು ಬಣ ಬೆಳಗಾವಿಯಲ್ಲೇ ಸಿದ್ಧತೆ ನಡೆಸಿದೆ.ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಮಾವಣೆಯಾಗ್ತಿರುವ ಬಿಜೆಪಿಯ ಘಟನುಘಟಿ ನಾಯಕರು,ಬಸವನಗೌಡ ಪಾಟೀಲ ‌ಯತ್ನಾಳ,
ಮಾಜಿ ಸಚಿವ ರಮೇಶ್ ಜಾರಕಿಹೊಳಿ,ಅರವಿಂದ ಲಿಂಬಾವಳಿ, ಮಾಜಿ ಸಂಸದರಾದ ಪ್ರತಾಪ್ ಸಿಂಹ, ಅಣ್ಣಾಸಾಹೇಬ್ ಜೊಲ್ಲೆ,ಜಿ.ಎಂ‌ ಸಿದ್ಧೇಶ್ವರ ಸೇರಿ 10 ಕ್ಕೂ ಅಧಿಕ‌ ಬಿಜೆಪಿ ನಾಯಕರು ಬೆಳಗಾವಿಯಲ್ಲೇ ಗುಪ್ತಸಭೆ ನಡೆಸಿದ್ದಾರೆ.

ವಾಲ್ಮೀಕಿ ‌ಹಗರಣ ಸಂಬಂಧ ಕೂಡಲಸಂಗಮ To ಬಳ್ಳಾರಿವರೆಗೆ ಪಾದಯಾತ್ರೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.ಪಾದಯಾತ್ರೆಯ ರೂಪುರೇಷೆಗಳನ್ನು ಬೆಳಗಾವಿಯಲ್ಲೇ ಸಿದ್ಧಪಡಿಸಲಾಗುತ್ತಿದೆ.

ಬೆಳಗಾವಿಯಲ್ಲಿ ಬಿಜೆಪಿ ರಾಜ್ಯಾಧ್ಯಾಕ್ಷ ಬಿ.ವೈ ವಿಜಯೇಂದ್ರ ವಿರೋಧಿ ಬಣದ ನಾಯಕರು ಸಮಾಗಮಗೊಂಡಿದ್ದು
ಬಿಜೆಪಿಯ ರೆಬಲ್ಸ್ ನಾಯಕರ ಮೀಟಿಂಗ್ ತೀವ್ರಕುತೂಹಲ ಮೂಡಿಸಿದೆ.

Check Also

ಬೆಳಗಾವಿ ಮಹಾನಗರದ ಅಪಾಯಕಾರಿ ತಂತಿಗಳ ತೆರವು

  ಗಣೇಶೋತ್ಸವ- ಅಪಾಯಕಾರಿ ವಿದ್ಯುತ್ ತಂತಿಗಳ ತೆರವು; ಮಾರ್ಗಗಳ ಎತ್ತರ ಹೆಚ್ಚಳ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಬೆಳಗಾವಿ, -ಗಣೇಶೋತ್ಸವ ಹಿನ್ನೆಲೆಯಲ್ಲಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.