ವಧು-ವರ ಸೇರಿ ಕನ್ನಡಿಗ ಯುವಕರ ಮೇಲೆ ಎಂಇಎಸ್ ಕಾರ್ಯಕರ್ತರಿಂದ ಹಲ್ಲೆ
ಬೆಳಗಾವಿ-ಬೆಳಗಾವಿಯಲ್ಲಿ ಮತ್ತೆ ಪುಂಡಾಟಿಕೆ ಮೆರೆದ ಎಂಇಎಸ್ ಗೂಂಡಾಗಳು ಬೆಳಗಾವಿ ಪಕ್ಕದ ಧಾಮಣೆ ಗ್ರಾಮದಲ್ಲಿ ಕನ್ನಡದ ಹುಡುಗರ ಜೊತೆ ಗಲಾಟೆ ಮಾಡಿದ್ದಾರೆ.
ಬೆಳಗಾವಿ ಅಧಿವೇಶನ ವೇಳೆ ಗೂಂಡಾವರ್ತನೆ ತೋರಿದ ಎಂಇಎಸ್ ಗೂಂಡಾಗಳಿಂದ ಮತ್ತೆ ಕಿರಿಕ್ ಶುರುವಾಗಿದೆ.
*ಮದುವೆ ಸಮಾರಂಭದಲ್ಲಿ ಕನ್ನಡ ಹಾಡು ಹಚ್ಚಿದ್ದಕ್ಕೆ ಎಂಇಎಸ್ ಗುಂಡಾಗಳು ಕನ್ನಡದ ಹುಡುಗರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು
ವಧು-ವರ ಸೇರಿ ಕನ್ನಡಿಗ ಯುವಕರ ಮೇಲೆ ಎಂಇಎಸ್ ಕಾರ್ಯಕರ್ತರಿಂದ ಹಲ್ಲೆ ಮಾಡಲಾಗಿದೆ.
ಬೆಳಗಾವಿ ತಾಲೂಕಿನ ಧಾಮನೆ ಗ್ರಾಮದಲ್ಲಿ ತಡರಾತ್ರಿ ಘಟನೆ ನಡೆದಿದ್ದು,ವರ ಸಿದ್ದು ಸೈಬಣ್ಣವರ್, ವಧು ರೇಷ್ಮಾ, ವರ ಸಿದ್ದು ತಮ್ಮ ಭರಮಾ ಸೇರಿ ಐವರ ಮೇಲೆ ಎಂಇಎಸ್ ಗುಂಡಾಗಳಿಂದ ಹಲ್ಲೆ ನಡೆದಿದೆ.ವಧು ವರ ಸೇರಿ ಐವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಓರ್ವನಿಗೆ ಗಂಭೀರ ಗಾಯಗೊಂಡಿದ್ದಾನೆ.
ಗಾಯಾಳು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ನಿನ್ನೆ ಧಾಮನೆ ಗ್ರಾಮದಲ್ಲಿ ಸೈಬಣ್ಣವರ್ ಕುಟುಂಬದ ಮದುವೆ ಸಮಾರಂಭವಿತ್ತು,
ರಾತ್ರಿ ಬ್ಯಾಂಡ್ ಹಚ್ಚಿ ಮೆರವಣಿಗೆ ಮೂಲಕ ವಧು-ವರನನ್ನು ಮನೆಗೆ ಕರೆದೊಯ್ಯುತ್ತಿದ್ದ ಸಂಧರ್ಭದಲ್ಲಿ ಈ ಘಟನೆ ನಡೆದಿದೆ.
ಈ ವೇಳೆ ಕನ್ನಡ ಧ್ವಜ ಹಿಡಿದು ‘ಕರುನಾಡೇ’ ಹಾಡಿಗೆ ಕನ್ನಡದ ಹುಡುಗರು ಕುಣಿದು ಕುಪ್ಪಳಿಸುತ್ತಿದ್ದನ್ನು ನೋಡಿ ಸಹಿಸಲಾಗದ ಎಂಇಎಸ್ ಗುಂಡಾಗಳು ದಾಳಿ ಮಾಡಿದ್ದಾರೆ.
ಅಜಯ್ ಯಳ್ಳೂರಕರ್, ಆಕಾಶ್ ಸೇರಿ ಎಂಟತ್ತು ಯುವಕರ ವಿರುದ್ಧ ಆರೋಪ ಮಾಡಲಾಗಿದೆ.ಬೆಳಗಾವಿ ಗ್ರಾಮೀಣ ಠಾಣೆಗೆ ಕುಟುಂಬಸ್ಥರ ದೂರು ನೀಡಿದ್ದಾರೆ.
ಬೆಳಗಾವಿ ಅಧಿವೇಶನ ವೇಳೆ ಮನೆ ಎದುರಿನ ಬೈಕ್‌ಗೆ ಬೆಂಕಿ ಹಚ್ಚಿದ್ದ ಎಂಇಎಸ್ ಗೂಂಡಾಗಳು ಈಗ ಕನ್ನಡ ಬೋರ್ಡ್ ಎದುರು ಮರಾಠಿ ಬೋರ್ಡ್ ಹಚ್ಚಿಯೂ ಕಿರಿಕ್ ಮಾಡಿದ್ದಾರೆ.
ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಹಲ್ಲೆಗೊಳಗಾದ ಯುವಕರು ಎಂದು ಆರೋಪ ಮಾಡಿದ್ದಾರೆ.
ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.