Breaking News
Home / Breaking News / ಇಂದು ಗುರುವಾರ ಬೆಳಗಾವಿಗೆ, ಬಿಜೆಪಿ ನಾಯಕರ ದಂಡು…!!!

ಇಂದು ಗುರುವಾರ ಬೆಳಗಾವಿಗೆ, ಬಿಜೆಪಿ ನಾಯಕರ ದಂಡು…!!!

ಇಂದು ಬೆಳಗಾವಿಗೆ,ಬಿಜೆಪಿ ನಾಯಕರ ದಂಡು…!!!

ಬೆಳಗಾವಿ- ಬೆಳಗಾವಿಯಲ್ಲಿ ವಾಯುವ್ಯ ಪದವೀಧರ ಹಾಗೂ ಶಿಕ್ಷಕರ ಮತಕ್ಷೇತ್ರದ ಚುನಾವಣೆ ರಂಗೇರಿದೆ.ಇಂದು ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ.

ವಾಯುವ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಹಣಮಂತ ನಿರಾಣಿ,ಶಿಕ್ಷಕರ ಮತಕ್ಷೇತ್ರದಿಂದ ಅರುಣ ಶಹಾಪೂರ ಅವರು ನಾಮಪತ್ರ ಸಲ್ಲಿಸಲಿದ್ದಾರೆ ಈ ಸಂಧರ್ಭದಲ್ಲಿ ಬಿಜೆಪಿ ರಾಜ್ಯಾದ್ಯಕ್ಷ ನಳೀನ್ ಕುಮಾರ್ ಕಟೀಲು, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಜಿಲ್ಲಾ ಮಂತ್ರಿ ಗೋವಿಂದ ಕಾರಜೋಳ,ಸಚಿವರಾದ ಮುರುಗೇಶ್ ನಿರಾಣಿ,ಉಮೇಶ್ ಕತ್ತಿ,ಶಶಿಕಲಾ ಜೊಲ್ಲೆ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಸ್ಥಳೀಯ ಬಿಜೆಪಿ ಶಾಸಕರು,ಮಾಜಿ ಶಾಸಕರು ಸಂಸದರು ಭಾಗವಹಿಸಲಿದ್ದಾರೆ.

ನಾಮಪತ್ರ ಸಲ್ಲಿಸುವ ಸಂಧರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೂ ಬೆಳಗಾವಿಗೆ ಆಗಮಿಸುವ ಸಾಧ್ಯತೆಗಳಿದ್ದು ಇನ್ನುವರೆಗೆ ಸಿಎಂ ಪ್ರವಾಸದ ವೇಳಾಪಟ್ಟಿ ಜಿಲ್ಲಾಡಳಿತಕ್ಕೆ ಬಂದಿಲ್ಲ.ಆದ್ರೆ ಯಾವುದೇ ಕ್ಷಣದಲ್ಲಿ ಸಿಎಂ ಬರಬಹುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಇಂದು ಮಧ್ಯಾಹ್ನ 12-00 ಗಂಟೆಗೆ ಬಿಜೆಪಿ ನಾಯಕರು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಸೇರಿ, ಚನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡು,ರಾಣಿ ಚನ್ನಮ್ಮ ಹಾಗೂ ಡಾ‌.ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪಗೌರವ ಸಲ್ಲಿಸಿ ನಂತರ ನಾಮಪತ್ರ ಸಲ್ಲಿಸಲಿದ್ದಾರೆ.

Today nominations shall be filed.

All are requested together at Kannad Sahitya Bhavan at 12.00 We shall move to Kittur Rani Chennamma Circle to Dr Babasaheb Ambedkar Garden to DC office

State BJP President Shri Nalin Kumar Katil, Ex CM Shri B S Yediyurappa, District Minister Shri Govind Karjol, Minister Shri Umesh Katti & Smt Shashikala Jolle,
District presidents,
MP Smt Mangla Suresh Angadi, Shri Iranna Kadadi, MLA Shri Abhay Patil, MLA Shri Anil Banke, MP, Mla, Ex MP, Ex Mla’s, Padadhikari’s and karykarta’s shall be present.

Check Also

ಬಾಸ್ ಬಂದು ಹೋದ ಮೇಲೆ ಅಜ್ಜಿಯ ಮನೆಗೆ ಬಂತು ಗ್ಯಾಸ್…!!

ಬೆಳಗಾವಿ: ತಾಲ್ಲೂಕಿನ ಹಿಂಡಲಗಾದಲ್ಲಿ ಅಜ್ಜಿ ಬಾಯವ್ವ ಅವರಿಗೆ ಆಹಾರ, ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಗುರುವಾರ ಸಿಲಿಂಡರ್‌, ಗ್ಯಾಸ್‌ ನೀಡಿದ್ದಾರೆ. …

Leave a Reply

Your email address will not be published. Required fields are marked *