Breaking News
Home / Breaking News / ಶಾಸಕ ಅನೀಲ ಬೆನಕೆ ಅವರಿಗೆ ಡ(ಟ್ರ)ಬಲ್ ಜವಾಬ್ದಾರಿ….!!!

ಶಾಸಕ ಅನೀಲ ಬೆನಕೆ ಅವರಿಗೆ ಡ(ಟ್ರ)ಬಲ್ ಜವಾಬ್ದಾರಿ….!!!

ಬೆಳಗಾವಿ – ಶಾಸಕ ಅನೀಲ ಬೆನಕೆ ಅವರನ್ನು ಬೆಳಗಾವಿ ಮಹಾನಗರ ಬಿಜೆಪಿ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನಕುಮಾರ್ ಕಟೀಲ ಅವರು ಆದೇಶ ಹೊರಡಿಸಿದ್ದಾರೆ.

ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾಗಿರುವ ಅನೀಲ ಬೆನಕೆ ಅವರಿಗೆ ಪಕ್ಷದ ಸಂಘಟನೆಯ ಜವಾಬ್ದಾರಿ ನೀಡಿರುವ ವಿಚಾರವನ್ನು ಹಲವರು ಭಿನ್ನ, ವಿಭಿನ್ನ ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ.

ಹಾಲಿ ಶಾಸಕರಾಗಿರುವ ಅನೀಲ ಬೆನಕೆ ಅವರ ಬದಲಿಗೆ ಲಿಂಗಾಯತ ಸಮಾಜದ ಅಭ್ಯರ್ಥಿಗೆ ಈಬಾರಿ ಬಿಜೆಪಿ ಟಿಕೆಟ್ ಸಿಗಲಿದೆ. ಬೆನಕೆ ಅವರಿಗೆ ಬಿಜೆಪಿ ಟಿಕೆಟ್ ತಪ್ಪಲಿದೆ,ಎನ್ನುವ ವದಂತಿಗಳನ್ನು ಹಬ್ಬಿಸುವ ಕಾರ್ಯ, ವ್ಯವಸ್ಥಿತವಾಗಿ ನಡೆಯುತ್ತಿದೆ.ಹಾಲಿ ಶಾಸಕರಿಗೆ ಟಿಕೆಟ್ ಸಿಗುವದು ಖಚಿತವಾಗಿದ್ದರೂ ರಾಜಕೀಯ ವಾಗಿ ಚಿತ್ರ,ವಿಚಿತ್ರ ವದಂತಿಗಳು ಹರಡುತ್ತಿವೆ.

ಬೆಳಗಾವಿ ಮಹಾನಗರದಲ್ಲಿ ಮರಾಠಾ ಸಮುದಾಯದ ಜನಸಂಖ್ಯೆ ಹೆಚ್ಚಿದೆ,ಅದೇ ಸಮುದಾಯದವರಾದ ಅನೀಲ ಬೆನಕೆ ಅವರಿಗೆ ಬೆಳಗಾವಿ ಮಹಾನಗರ ಜಿಲ್ಲೆಯ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಹಾಲಿ ಶಾಸಕರನ್ನು ಬಿಟ್ಟು ಮತ್ತೊಬ್ಬರಿಗೆ ಟಿಕೆಟ್ ಕೊಡಲು ಸಾದ್ಯವಿಲ್ಲ,ಎನ್ನುವ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬಂದರೂ ವದಂತಿಗಳಿಗೆ ಮಾತ್ರ ಬ್ರೇಕ್ ಬೀಳುತ್ತಿಲ್ಲ.

ಶಾಸಕ ಅನೀಲ ಬೆನಕೆ ಅವರಿಗೆ ಮಹಾನಗರ ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಿಸಲಾಗಿರುವ ವಿಚಾರ ಈಗ ಬಿಜೆಪಿ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Check Also

ಬಾಸ್ ಬಂದು ಹೋದ ಮೇಲೆ ಅಜ್ಜಿಯ ಮನೆಗೆ ಬಂತು ಗ್ಯಾಸ್…!!

ಬೆಳಗಾವಿ: ತಾಲ್ಲೂಕಿನ ಹಿಂಡಲಗಾದಲ್ಲಿ ಅಜ್ಜಿ ಬಾಯವ್ವ ಅವರಿಗೆ ಆಹಾರ, ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಗುರುವಾರ ಸಿಲಿಂಡರ್‌, ಗ್ಯಾಸ್‌ ನೀಡಿದ್ದಾರೆ. …

Leave a Reply

Your email address will not be published. Required fields are marked *