ಬೆಳಗಾವಿ-ಬೆಳಗಾವಿ ಮಹಾನಗರ ಈಗ ಮೆಟ್ರೋ ಪಾಲಿಟೀನ್ ಸಿಟಿ ಆಗುವತ್ತ ದಾಪುಗಾಲು ಹಾಕುತ್ತಿದೆ,ರಾಜ್ಯದ ಎರಡನೇಯ ರಾಜಧಾನಿಯಾಗುವ ಹೊಸ್ತಿಲಲ್ಲಿದೆ.ಜೊತೆಗೆ ಸ್ಮಾರ್ಟ್ ಸಿಟಿ ಕೂಡಾ ಹೌದು,ಕರ್ನಾಟಕ, ಮಹಾರಾಷ್ಟ್ರ,ಗೋವಾ ರಾಜ್ಯಗಳ ಸಂಪರ್ಕದ ಕೊಂಡಿಯಾಗಿರುವ ಬೆಳಗಾವಿ ಮಹಾನಗರದಲ್ಲಿ ಟ್ರಾಫಿಕ್ ಮ್ಯಾನೆಜ್ಮೆಂಟ್ ಇಲ್ಲವೇ ಇಲ್ಲ,ಹೀಗಾಗಿ ಇಲ್ಲಿ ಸರಣಿ ಅಪಘಾತಗಳು ಸಂಭವಿಸಿ ಈಗಾಗಲೇ ಹಲವಾರು ಜನ ಬಲಿಯಾಗಿದ್ದಾರೆ.
ಬೆಳಗಾವಿ ಮಹಾನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಗರದ ಎಲ್ಲ ರಸ್ತೆಗಳು ಸುಧಾರಣೆಯಾಗಿವೆ, ನಗರೋತ್ಥಾನ ಯೋಜನೆಯ ನೂರಾರು ಕೋಟಿ ರೂ ಅನುದಾನವನ್ನು ರಸ್ತೆಗಳ ಅಭಿವೃದ್ಧಿಗೆ ಖರ್ಚು ಮಾಡಲಾಗಿದೆ. ಆದ್ರೂ ಸಹ ಬೆಳಗಾವಿಯ ಕಾಂಟೋನ್ಮೆಂಟ್ ವ್ಯಾಪ್ತಿಗೆ ಬರುವ ಸುಮಾರು 200 ಮೀಟರ್ ಉದ್ದದ ರಸ್ತೆ ಅಗಲೀಕರಣ ಆಗದೇ ಹಾಗೇಯೇ ಉಳಿದುಕೊಂಡಿದ್ದು ಈ ರಸ್ತೆಯಲ್ಲೇ ಸರಣಿ ಅಪಘಾತಗಳು ಸಂಭವಿಸುತ್ತಿವೆ.
ಕ್ಯಾಂಪ್ ಪ್ರದೇಶದ ಪೋಲೀಸ್ ಲೈನ್ ನಿಂದ BSNL ಕಚೇರಿವರೆಗಿನ ರಸ್ತೆ ಅಗಲೀಕರಣಗೊಂಡಿಲ್ಲ.ಈ ರಸ್ತೆಯ ಉಳಿದ ಭಾಗ ಚತುಸ್ಪದ ರಸ್ತೆಯಾಗಿದೆ.
ಕಾಂಟೋನ್ಮೆಂಟ್ ಅಧಿಕಾರಿಗಳ ಅಸಹಕಾರ,ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಯ ಕೊರತೆ,ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ದಿಂದಾಗಿ ಕ್ಯಾಂಪ್ ಪ್ರದೇಶದ ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಲೇ ಇವೆ.
ಅಗಲೀಕರಣ ಗೊಳ್ಳದೇ ಬಾಕಿ ಉಳಿದಿರುವ ಈ ರಸ್ತೆಯ ಸುತ್ತ ಮುತ್ತಲು ಹಲವಾರು ಪ್ರತಿಷ್ಠಿತ ಶಾಲೆಗಳಿವೆ.ರಸ್ತೆ ದಾಟುವಾಗ ಶಾಲಾ ಮಕ್ಕಳೇ ಬಲಿಯಾಗುತ್ತಿದ್ದು.ಈ ರಸ್ತೆ ಅಗಲೀಕರಣ ಮಾಡಬೇಕು,ಇಲ್ಲವಾದಲ್ಲಿ ಸಾರ್ವಜನಿಕರ ಅನಕೂಲಕ್ಕಾಗಿ ಇಲ್ಲಿ ಅಂಡರ್ ಪಾಸ್ ಅಥವಾ ಓವರ್ ಬ್ರೀಡ್ಜ್ ನಿರ್ಮಾಣ ಮಾಡಬೇಕು.
ಬೆಳಗಾವಿಯ ರಿಂಗ್ ರೋಡ್ ನಿರ್ಮಾಣದ ಕಾಮಗಾರಿಗೆ ಅಡ್ಡಿಯಾಗಿರುವ ಸಮಸ್ಯೆಯನ್ನು ಅಧಿಕಾರಿಗಳು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ,ಬೆಳಗಾವಿ ಮಹಾನಗರದಲ್ಲಿ ಭಾರಿ ವಾಹನಗಳ ಸಂಚಾರವನ್ನು ಡೈವೋರ್ಟ್ ಮಾಡುವದು ಅತ್ಯಗತ್ಯವಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಯ ದುಡ್ಡನ್ನು ಕೇವಲ ರಸ್ತೆಗಳ ಸುಧಾರಣೆಗೆ ಖರ್ಚು ಮಾಡದೇ, ಬೆಳಗಾವಿ ಮಹಾನಗರದಲ್ಲಿ ಮಲ್ಟೀ ಲೇವಲ್ ಪಾರ್ಕಿಂಗ್ ನಿರ್ಮಿಸಿ ಬೆಳಗಾವಿ ಮಹಾನಗರದಲ್ಲಿ ಟ್ರಾಫಿಕ್ ವ್ಯೆವಸ್ಥೆ ಸುಧಾರಣೆ ಮಾಡುವದು ಸ್ಥಳೀಯ ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ.