ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದ್ದು ಜೂನ್ 27 ರಂದು ಪಾಲಿಕೆಯ ಸಾಮಾನ್ಯ ಸಭೆ ನಡೆಯಲಿದೆ,ಈ ಸಭೆಯಲ್ಲಿ ಸ್ಥಾಯಿಸಮೀತಿಗಳ ಆಯ್ಕೆ ಪ್ರಕ್ರಿಯೆ ಕೂಡಾ ನಡೆಯಲಿದೆ.
ಆರೋಗ್ಯ,ಹಣಕಾಸು,ಲೆಕ್ಕಪತ್ರ,ಮತ್ತು ಲೋಕೋಪಯೋಗಿ ಸಮೀತಿಗಳನ್ನು ರಚಿಸಲಾಗುತ್ತದೆ.ಒಂದು ಸಮೀತಿಯಲ್ಲಿ 7 ಜನ ಸದಸ್ಯರು ಇರುತ್ತಾರೆ.ಆಡಳಿತ ಪಕ್ಷದ ನಾಲ್ಕು,ವಿರೋಧ ಪಕ್ಷಗಳ ಮೂರು ಜನ ಸದಸ್ಯರು ಪ್ರತಿ ಸಮೀತಿಯಲ್ಲಿ ಇರುವುದು ಬೆಳಗಾವಿ ಮಹಾನಗರ ಪಾಲಿಕೆಯ ವಾಡಿಕೆ,ಆದ್ರೆ ಇದೇ ಮೊದಲ ಬಾರಿಗೆ ಪಕ್ಷ ಆಧಾರಿತ ಚುನಾವಣೆ ನಡೆದುದ್ದು ಬಹುಮತ ಗಳಿಸಿರುವ ಬಿಜೆಪಿ 4+3 ಫಾರ್ಮುಲಾ ಅನುಸರಿಸುತ್ತದೆಯೋ ಇಲ್ಲವೋ ಅನ್ನೋದನ್ನು ಕಾಯ್ದು ನೋಡಬೇಕಾಗಿದೆ.
27 ರಂದು ಸ್ಥಾಯಿ ಸಮೀತಿಗಳನ್ನು ರಚಿಸಲಾಗುತ್ತದೆ.ನಂತರ ಸಮೀತಿಗಳ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ. ಪಾಲಿಕೆ ಇತಿಹಾಸದಲ್ಲಿ 2009 ರಲ್ಲಿ ಮಾತ್ರ ಸ್ಥಾಯಿ ಸಮೀತಿಗಳ ಆಯ್ಕೆಗೆ ಚುನಾವಣೆ ನಡೆದಿದೆ ಉಳಿದ ಸಮಯದಲ್ಲಿ ಸಮೀತಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.2009 ರಲ್ಲಿ ಯಲ್ಲಪ್ಪ ಕುರುಬರ ಅವರು ಮಹಾಪೌರರಾಗಿದ್ದರು,ಸಂಬಾಜಿ ಪಾಟೀಲ ಆಡಳಿತ ಗುಂಪು ಬಿಟ್ಟು ಹೊರಗೆ ಹೋದ ಕಾರಣ ಆಡಳಿತ ಗುಂಪು,ಮತ್ತು ವಿರೋಧಿ ಗುಂಪಿನ ನಡುವೆ ಹೊಂದಾಣಿಕೆ ಆಗದ ಕಾರಣ 2009 ರಲ್ಲಿ ಮಾತ್ರ ಸ್ಥಾಯಿ ಸಮೀತಿಗಳ ಆಯ್ಕೆಗೆ ಚುನಾವಣೆ ನಡೆದಿದ್ದು ಪಾಲಿಕೆಯ ಇತಿಹಾಸ.
ಬೆಳಗಾವಿ ಪಾಲಿಕೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಇದೆ,ಪಾಲಿಕೆ ಸದಸ್ಯರಾದ ಪವಾರ್,ಗಿರೀಶ್ ಧೋಂಗಡಿ, ನಂದು,ಆಡಳಿತ ಪಕ್ಷದ ನಾಯಕ ಡೋಣಿ,ವಾಣಿ ವಿಲಾಸ ಜೋಶಿ ಸೇರಿದಂತೆ ಹಲವಾರು ಜನ ಸದಸ್ಯರು ಸ್ಥಾಯಿ ಸಮೀತಿಗಳ ಅಧ್ಯಕ್ಷರಾಗುವ ಸಾಧ್ಯತೆಗಳಿವೆ.