Breaking News

ನಾನಿರುವುದು ನಿಮಗಾಗಿ, ಡೋಂಟ್ ವರೀ,- ರಾಜು ಸೇಠ…!!

ಸಹಾಯ ಕೇಳಲು ಕಚೇರಿಗೆ  ಬಂದ ಅಜ್ಜಿಗೆ, ಶಾಸಕ  ಅಸೀಪ್ ರಾಜು ಸೇಠ ಅವರಿಂದ ಸ್ಪಂದನೆ….!!

ಬೆಳಗಾವಿ-
ಬೆಳಗಾವಿ ನಗರದ ಮುಖ್ಯ ನೀರಿನ ಮೂಲವಾದ ರಾಕಸಕೊಪ್ಪ ಜಲಾಶಯದಲ್ಲಿ ಕೇವಲ ಅರ್ದ ಅಡಿ ನೀರು ಮಾತ್ರ ಬಾಕಿ ಇದ್ದು, ಇನ್ನೊಂದು ವಾರದಲ್ಲಿ ಡೆಡ್ ಸ್ಟೋರೇಜ್ ಹಂತ ತಲುಪುವ ಸಾಧ್ಯತೆಗಳಿದ್ದು, ಬೆಳಗಾವಿ ನಗರದಲ್ಲಿ 100 ಹೊಸ ಬೋರ್ ವೆಲ್ ಮಂಜೂರು ಮಾಡುವಂತೆ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ರಾಜು ಸೇಠ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಮಾನ್ಸೂನ್ ಮತ್ತಷ್ಟು ತಡವಾದ್ರೆ ನಗರದಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಸಾದ್ಯತೆಗಳು ಹೆಚ್ಚಾಗಿದ್ದು ನಗರದಲ್ಲಿ ಈಗಿನಿಂದಲೇ ಸಾರ್ವಜನಿಕರು ನೀರಿಗಾಗಿ ಪರದಾಡುತ್ತಿರುವದನ್ನು ಗಮನಿಸಿರುವ ರಾಜು ಸೇಠ ಅವರು ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ 100 ಹೊಸ ಬೋರ್ ವೆಲ್ ಹಾಕಿಸುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಬೆಳಗಾವಿ ನಗರ ನಿವಾಸಿಗಳು ನೀರಿಗಾಗಿ ಆತಂಕಪಡುವ ಅಗತ್ಯವಿಲ್ಲ ,ಓಪನ್ ವೆಲ್ ಗಳನ್ನು ಸ್ವಚ್ಛ ಮಾಡುವಂತೆ ಬೆಳಗಾವಿ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ,100 ಹೊಸ ಬೋರ್ ವೆಲ್ ಕೊರೆಯಿಸಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು.ನಗರ ನಿವಾಸಿಗಳಿಗೆ ನೀರಿನ ಸಮಸ್ಯೆ ಆಗದಂತೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಶಾಸಕ ರಾಜು ಸೇಠ ತಿಳಿಸಿದ್ದಾರೆ.

ಬೆಳಗಾವಿ ನಗರದಲ್ಲಿ ಸಾವಿರಾರು ಖಾಸಗಿ ಬೀರ್ ವೆಲ್ ಗಳು ಇವೆ. ಖಾಸಗಿ ಬೋರವೆಲ್ ಇದ್ದವರು ತಮ್ಮ ತಮ್ಮ ಏರಿಯಾದಲ್ಲಿ ಸಾರ್ವಜನಿಕರಿಗೆ ನೀರು ಕೊಡಬೇಕು, ನೀರಿನ ಸಮಸ್ಯೆ ಬಂದಾಗ ಖಾಸಗಿ ಬೋರ್ ಇದ್ದವರು ಸಹಕರಿಸಬೇಕೆಂದು ಶಾಸಕ ಅಸೀಪ್ ರಾಜು ಸೇಠ ಮನವಿ ಮಾಡಿಕೊಂಡಿದ್ದಾರೆ.

Check Also

ಕುಡಚಿ ರೈಲು ನಿಲ್ದಾಣದಲ್ಲಿ ʻವಂದೇ ಭಾರತ ರೈಲುʼ ನಿಲುಗಡೆಗೆ ಸಂಸದೆ ಪ್ರಿಯಾಂಕಾ ಮನವಿ

ಬೆಳಗಾವಿ: ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲನ್ನು (ನಂ.20669) ನಿಲುಗಡೆ ಮಾಡಬೇಕೆಂದು ಕೇಂದ್ರ …

Leave a Reply

Your email address will not be published. Required fields are marked *