ಬೆಳಗಾವಿ- ಸಮೀಪದ ಚಂದಗಡ ತಾಲೂಕಿನ ಗ್ರಾಮವೊಂದರಲ್ಲಿ ಕರಡಿಯೊಂದು ದಾಳಿ ಮಾಡಿದ್ದು ಮಾರುತಿ ಲಕ್ಷ್ಮಣ ದೇವನಿ ಎಂಬಾತ ರೈತ ಗಂಭೀರವಾಗಿ ಗಾಯಗೊಂಡಿದ್ದಾನೆ
ಆತನನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ
ಢೋಂಗಿ ಬಾಬಾ ಪೋಲಿಸರ ವಶಕ್ಕೆ
ಬೆಳಗಾವಿ ನಗರದ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಮುಖ ನೋಡಿ ಭವಿಷ್ಯ ಹೇಳುವದಾಗಿ ಜನರನ್ನು ವಂಚಿಸುತ್ತಿದ್ದ ಭವಿಷ್ಯಗಾರನೊಬ್ಬ ಕಾಕತಿ ಪೋಲಿಸರ ಅತಿಥಿಯಾಗಿದ್ದಾನೆ
ಕಾರ್ಮಿಕನಿಗೆ ಗಾಯ
ಸಮೀಪದ ಕಾಕತಿ ಗ್ರಾಮದಲ್ಲಿ ನಿರ್ಮಾಣ ವಾಗುತ್ತಿರುವ ಫಾಯ್ ಸ್ಟಾರ್ ಹೊಟೆಲ್ ಕಟ್ಟಡದ ಏಳನೇಯ ಮಹಡಿಯಿಂದ ವಾಚ್ ಮನ್ ಒಬ್ಬ ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ
ಕಾಕತಿ ಗ್ರಾಮದ ಸುಧೀರಕುಮಾರ ವಿಠ್ಠಲ ಸುರೇಕರ ಎಂಬಾತ ಗಂಭೀರವಾಗಿ ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ
