Breaking News

ಜಿಲ್ಲಾಧಿಕಾರಿ ಸಲಕಿ ಹಿಡ್ಕೊಂಡ್ರು..ಕಮಿಷ್ನರ್ ಬುಟ್ಟಿ ಹೊತ್ಕೊಂಡ್ರು..ಕೆಲವರು ನೋಡ್ಕೊಂತ ನಿಂತ್ಕೊಂಡ್ರು..…!

ಬೆಳಗಾವಿ-ಭಾನುವಾರ ಗಾಂಧೀ ಜಯಂತಿಯ ದಿನ ಬೆಳಗಿನ ಜಾವ ಬೆಳಗಾವಿಯ ಜಿಲ್ಲಾ ಮಟ್ಟದ ಅಧಿಕಾರಿಗಳ ಗ್ಯಾಂಗ್ ನಗರದ ಗ್ಯಾಂಗ್‍ವಾಡಿಯಲ್ಲಿ ಸ್ವಚ್ಛತಾ ಅಭಿಯಾನ ನಡೆಸಿ ಎಲ್ಲರ ಗಮನ ಸೆಳೆದರು
ಡಿಸಿ ಜೈರಾಂ ಎಡಿಸಿ ಸುರೇಶ ಇಟ್ನಾಳ,ಪಾಲಿಕೆ ಆಯುಕ್ತ ಶಶಿಧರ ಕುರೇರ ಪ್ರೀತಂ ನರಸಲಾಪುರೆ ಪಾಲಿಕೆ ಆರೋಗ್ಯಾಧಿಕಾರಿ ನಾಡಗೌಡಾ ಪರಿಸರ ಅಭಿಯಂತರ ಉದಯಕುಮಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ನಗರದ ಗ್ಯಾಂಗ್‍ವಾಡಿಯಲ್ಲಿ ಕೆಲವರು ಪೊರಕೆ ಹಿಡಿದು ಸರಸರನೇ ಕಸಗೂಡಿಸಿದರೇ ಇನ್ನು ಕೆಲವರು ಕಸವನ್ನು ಟಿಪ್ಪರ್ ಗೆ ಡಂಪ್ ಮಾಡಿದರು
ಡಿಸಿ ಸಾಹೇಬ್ರು ಪೊರಕೆ ಹಿಡಿದು ಕಸಗೂಡಿಸಿ ಗ್ಯಾಂಗ್ ವಾಡಿಯ ಖುಲ್ಲಾ ಜಾಗೆಯಲ್ಲಿ ಬೆಳೆದು ನಿಂತ ಕಸವನ್ನು ಕಿತ್ತೆಸೆದರು ಪಾಲಿಕೆ ಆಯುಕ್ತ ಶಶಿಧರ ಕುರೇರ ಎಡಿಸಿ ಸುರೇಶ ಇಟ್ನಾಳ ಸೇರಿದಂತೆ ಐವತ್ತಕ್ಕೂ ಹೆಚ್ಚು ಅಧಿಕಾರಿಗಳು ನಗರದ ವಿವಿಧ ಪ್ರದೇಶಗಳಲ್ಲಿ ಶ್ರಮದಾನ ಮಾಡುವದರ ಮೂಲಕ ಅರ್ಥಪೂರ್ಣವಾಗಿ ಗಾಂಧೀ ಜಯಂತಿಯನ್ನು ಆಚರಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು

ನ್ಯಾಯಬೆಲೆ ಅಂಗಡಿಕಾರ ತರಾಟೆಗೆ ….
ಗ್ಯಾಂಗ್‍ವಾಡಿ ವಂಡಮೂರಿಯ ಆಶ್ರಯ ಕಾಲೋನಿಯಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು ನಗರದ ವಂಟಮೂರಿ ಕಾಲೋನಿಯಲ್ಲಿ ಸುತ್ತಾಡಿದ ಜಿಲ್ಲಾಧಿಕಾರಿ ಎನ್ ಜೈರಾಮ ಅಲ್ಲಿಯಯ ಪರಿಸ್ಥಿತಿ ನೋಡಿ ದಂಗಾದರೂ ಅಲ್ಲಿಯ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿದ ಅವರು ಅಂಗನವಾಡಿ ಕೇಂದ್ರದಲ್ಲಿ ನ್ಯಾಯಬೆಲೆ ಅಂಗಡಿಯ ಸಾಮುಗ್ರಿಗಳನ್ನು ಸ್ಟೋರ್ ಮಾಡಿರುವದನ್ನು ಗಮನುಸಿದ ಅವರು ಅಂಗಡಿಕಾರನನ್ನು ತರಾಟೆಗೆ ತೆಗೆದುಕೊಂಡರು
ನಿದಿತ ದರದಲ್ಲಿ ಪಡಿತರ ನೀಡಲಾಗುತ್ತಿದೇಯಾ.? ಎನ್ನುವದರ ಬಗ್ಗೆ ಅಲ್ಲಿಯ ನಿವಾಸಿಗಳನ್ನು ವಿಚಾರಿಸಿದರು ಅಧಿಕಾರಿಗಳ ತಂಡ ಕೇವಲ ಸ್ವಚ್ಛತಾ ಅಭಿಯಾನ ನಡೆಸದೇ ಸಕಾರದ ಸೌಲತ್ತುಗಳು ಯಾವ ರೀತಿಯಲ್ಲಿ ಜನರಿಗೆ ಮುಟ್ಟುತ್ತಿವೆ ಎನ್ನುವದರ ಬಗ್ಗೆ ಪರಶೀಲನೆ ನಡೆಸಿದ್ದು ವಿಶೇಷವಾಗಿತ್ತು

Check Also

ಬೆಳಗಾವಿಯ ಬೀದಿಗಿಳಿದ ಇಲೆಕ್ಟ್ರಿಕ್ ರಿಕ್ಷಾ…!

ಬೆಳಗಾವಿ ಬೆಳಗಾವಿ ನಗರ ದಿನದಿಂದ ದಿನಕ್ಕೆ ಸ್ಮಾರ್ಟ್ ಆಗುತ್ತಿದೆ. ನಗರದ ರಸ್ತೆಗಳಲ್ಲಿ ಇಲೆಕ್ಟ್ರಿಕ್ ರಿಕ್ಷಾಗಳು ರಾರಾಜಿಸುತ್ತಿವೆ. ಪರಿಸರ ಸ್ನೇಹಿಯಾಗಿರುವ ಈ …

Leave a Reply

Your email address will not be published. Required fields are marked *