Breaking News

ಬೆಳಗಾವಿ ಜಿಲ್ಲೆಯಲ್ಲಿ ಖಡಕ್ ಚುನಾವಣಾ ನೀತಿಸಂಹಿತೆ

ಬೆಳಗಾವಿ-ಚುನಾವಣೆ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆಯೇ ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಜಿಯಾವುಲ್ಲಾ ಅವರು ಬೆಳಗಾವಿ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ನೀತಿ ಸಂಹಿತೆಯನ್ನು ಜಾರಿಗೊಳಿಸಿದ್ದಾರೆ

ಕೇಂದ್ರ ಚುನಾವಣಾ ಆಯೋಗ ಚುನಾವಣೆಯ ದಿನಾಂಕ ಪ್ರಕಟಿಸುತ್ತಿದ್ದಂತೆಯೇ ಬೆಳಗಾವಿ ನಗರ ಹಾಗು ಜಿಲ್ಲೆಯಾದ್ಯಂತ ರಾಜಕೀಯ ಪಕ್ಷಗಳ ನಾಯಕರ ಬ್ಯಾನರ್ ಕಟೌಟುಗಳನ್ನು ತೆರವುಗೊಳಿಸಿದ ಜಿಯಾವುಲ್ಲಾ ಅವರು ಜಿಲ್ಲೆಯ ಆಯಕಟ್ಟಿನ ಪ್ರದೇಶಗಳಲ್ಲಿ ಚೆಕ್ ಪೋಸ್ಟಗಳನ್ನು ಸ್ಥಾಪಿಸಿ ಆಕ್ರಮ ಸರಾಯಿ ಸಾಗಾಣಿಕೆ ಆಕ್ರಮ ಹಣ ಸಾಗಾಣಿಕೆ ಸೇರಿದಂತೆ ಹತ್ತು ಹಲವು ಆಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಿ ಜಿಲ್ಲೆಯಲ್ಲಿ ಖಡಕ್ ನೀತಿಸಂಹಿತೆ ಜಾರಿಗೊಳಿಸಿ ದ್ದಾರೆ

ಚುನಾವಣಾ ನೀತಿ ಸಂಹಿತೆ ಘೋಷಣೆಯಾದಾಗಿನಿಂದ ಇಂದಿನವರೆಗೆ (ಏ.10) ಜಿಲ್ಲೆಯಲ್ಲಿ ಒಟ್ಟು ರೂ.2,64,42,360 ಮೌಲ್ಯದ ಸಲಕರಣೆ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿವಿಧ ಪ್ರಕರಣಗಳಲ್ಲಿ ಬೆಳಗಾವಿ ನಗರ ಪ್ರದೇಶದಲ್ಲಿ 10 ಹಾಗೂ ಗ್ರಾಮೀಣ ಪ್ರದೇಶದಲ್ಲಿ 34 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಇಂದಿನವರೆಗೆ ರೂ.2,00,231 ಮೌಲ್ಯದ 949.875 ಲೀ. ಮದ್ಯವನ್ನು ಜಪ್ತಿ ಮಾಡಲಾಗಿದೆ. ರೂ.36,17,670 ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 32 ವಾಹನಗಳನ್ನು ಜಪ್ತಿ ಮಾಡಲಾಗಿದೆ.

ಏ.9 ರಂದು ವಿವಿಧ ಪ್ರಕರಣ:
ಏ.9 ರಂದು ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬೆಳವತ್ತಿ ಗ್ರಾಮದಲ್ಲಿ ಅಬಕಾರಿ ನಿರೀಕ್ಷಕರು, ಬೆಳಗಾವಿ ಉಪ ವಿಭಾಗ ತಂಡದವರು ದಾಳಿ ನಡೆಸಿ, ರೂ. 6000 ಮೌಲ್ಯದ 33.6 ಲೀಟರ್ ಮದ್ಯ ಹಾಗೂ ರೂ.40,000 ಮೌಲ್ಯದ ಎಕ್ಟಿವ್ ಹೊಂಡಾ ಬೈಕ್‍ನ್ನು ವಶಪಡಿಸಿಕೊಂಡಿದ್ದಾರೆ. ಈIಖ ಓo.38/2017-18 ರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಪರಾರಿಯಾಗಿದ್ದಾನೆ.
ಏ.9 ರಂದು ಕಾಗವಾಡ ವಿಧಾನಸಭಾ ಕ್ಷೇತ್ರದ ಮದಬಾವಿ ಚೆಕ್‍ಪೋಸ್ಟ್‍ನಲ್ಲಿ ಎಸ್.ಎಸ್.ಟಿ ತಂಡದವರು ದಾಳಿ ನಡೆಸಿ ರೂ. 6,27,200 ಮೌಲ್ಯದ 22 ಕೆ.ಜಿ 400 ಗ್ರಾಂ ಬೆಳ್ಳಿ ಹಾಗೂ ರೂ.2 ಲಕ್ಷ ಮೌಲ್ಯದ ಮಹೀಂದ್ರಾ ಲೊಗೊನ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಈIಖ ಓo.236/2018 ರಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಸರಜಿರಾವ ಬಾಳಾಸೋ ಪಾಟೀಲ ಎಂಬುವವರ ಮೇಲೆ ಪ್ರಕರಣ ದಾಖಲಾಗಿದೆ.
ಏ.09 ರಂದು ರಾಮದುರ್ಗ ವಿಧಾನಸಭಾ ಕ್ಷೇತ್ರದ ಖಾನಪೇಠ ಗ್ರಾಮದಲ್ಲಿ ಅಬಕಾರಿ ನಿರೀಕ್ಷಕರು, ರಾಮದುರ್ಗ ವಲಯದ ತಂಡದವರು ದಾಳಿ ನಡೆಸಿ ರೂ.2000 ಮೌಲ್ಯದ 5.4 ಲೀಟರ್ ಮದ್ಯ ಹಾಗೂ ರೂ.45,000 ಮೌಲ್ಯದ ಆಟೋ ರಿಕ್ಷಾ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಈIಖ ಓo.23/2017-18 ರಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಯಾವುಲ್ಲಾ ತಿಳಿಸಿದ್ದಾರೆ

Check Also

ಬೆಳಗಾವಿ- ಗೋಕಾಕ್ ರಸ್ತೆಯಲ್ಲಿ ಪೋಲೀಸರಿಗೆ ಸಿಕ್ಕಿದ್ದೇನು ಗೊತ್ತಾ.?

ಬೆಳಗಾವಿ- ಬೆಳಗಾವಿ- ಗೋಕಾಕ್ ರಸ್ತೆಯಲ್ಲಿ ಬೆಳಗಾವಿಗೆ ಸಾಗಿಸಲಾಗುತ್ತಿದ್ದ ಗಾಂಜಾ ,ಬೆಳಗಾವಿಯ ಸಿಇಎನ್ ಸೈಬರ್ ಕ್ರೈಂ ಪೋಲೀಸರು ವಶಪಡಿಸಿಕೊಂಡಿದ್ದಾರೆ. ಬೆಳಗಾವಿ ನಗರದ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.