Breaking News

ಜಗದೀಶ ಮೆಟಗುಡ್ ಗೆ ಕಾಂಗ್ರೆಸ್ ಟಿಕೆಟ್ ಖಚಿತ….!!!!

ಬೆಳಗಾವಿ– ರಾಜ್ಯ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ದಿನ ಸಮೀಪಿಸುತ್ತಿದ್ದಂತೆಯೇ ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ಸುಂಟರಗಾಳಿ ಬೀಸುತ್ತಿದೆ

ದೆಹಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಳ ಪಟ್ಟಿಗೆ ಅಂತಿಮ ಸ್ಪರ್ಷ ನೀಡಲಾಗುತ್ತಿದ್ದು ಬೆಳಗಾವಿ ಜಿಲ್ಲಾಮಂತ್ರಿ ರಮೇಶ ಜಾರಕಿಹೊಳಿ,ಲಕ್ಷ್ಮೀ ಹೆಬ್ಬಾಳಕರ ವಿನಯ ನಾವಲಗಟ್ಟಿ ಸೇರಿದಂತೆ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ನಾಯಕರಿಗೆ ದೆಹಲಿಯಿಂದ ಬುಲಾವ್ ಬಂದಿದ್ದು ಎಲ್ಲ ನಾಯಕರು ದೆಹಲಿಗೆ ದೌಡಾಯಿಸಿದ್ದಾರೆ

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಗೆ ಅಂತಿಮ ಸ್ಪರ್ಷ ನೀಡುವ ಕಾರ್ಯ ಕಾಂಗ್ರೆಸ್ ಹೈಕಮಾಂಡ್ ಮಾಡುತ್ತಿದ್ದು ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ವಲಯದಲ್ಲಿ ಹಲವಾರು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯಲ್ಲಿ ಹಲವಾರು ಬದಲಾವಣೆಗಳಾಗುವ ಸಾಧ್ಯತೆ ಹೆಚ್ವಿದೆ

ಬಿಜೆಪಿ ಟಿಕೆಟ್ ನಿಂದ ವಂಚಿತರಾಗಿ ಬಂಡಾಯದ ಬಾವುಟ ಹಾರಿಸಿರುವ ಬೈಲಹೊಂಗಲದ ಮಾಜಿ ಬಿಜೆಪಿ ಶಾಸಕ ಜಗದೀಶ ಮೆಟಗುಡ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಜಿಲ್ಲೆಯ ಕಾಂಗ್ರೆಸ್ ನಾಯಕರು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ ಎಂದು ತಿಳಿದು ಬಂದಿದ್ದು ಜಗದೀಶ್ ಮೆಟಗುಡ್ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗುವದು ಖಚಿತ ಎಂದು ದೆಹಲಿಯ ಉನ್ನತ ಮೂಲಗಳಿಂದ ತಿಳಿದು ಬಂದಿದೆ

ನಿಪ್ಪಾನಿ ಕ್ಷೇತ್ರದಿಂದ ಪ್ರಕಾಶ ಹುಕ್ಕೇರಿ ಅವರಿಗೆ ಟಿಕೆಟ್ ನೀಡುವದು ಬೈಲಹೊಂಗಲ ಕ್ಷೇತ್ರದಿಂದ ಜಗದೀಶ ಮೆಟಗುಡ್ ಅವರಿಗೆ ಟಿಕೆಟ್ ನೀಡುವದು ಸೇರಿದಂತೆ ಸವದತ್ತಿ,ಕಾಗವಾಡ,ಬೆಳಗಾವಿ ದಕ್ಷಿಣ,ಸೇರಿದಂತೆ ಇನ್ನಿತರ ಕ್ಷೇತ್ರದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕುರಿತು ಹೈಕಮಾಂಡ್ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ನಾಯಕರ ಅಭಿಪ್ರಾಯ ಸಂಗ್ರಹಿಸಿದೆ ಎಂದು ತಿಳಿದು ಬಂದಿದೆ

ಬೈಲಹೊಂಗಲದಲ್ಲಿ ಬಂಡಾಯದ ಬಾವುಟ ಹಾರಿಸಿರುವ ಜಗದೀಶ ಮೆಟಗುಡ್ ಈ ಬಾರಿ ಚುನಾವಣೆಗೆ ನಿಲ್ಲೋದು ಖಚಿತ ಎಂಬ ಸಂದೇಶ ರವಾನಿಸಿದ್ದಾರೆ

ಯಡಿಯೂರಪ್ಪ ವಿರುದ್ಧ ಮೆಟಗುಡ್ ಕಿಡಿ

ಬಿಜೆಪಿ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದ್ದಂತೆ ಬಿಜೆಪಿಯಲ್ಲಿ ಟಿಕೇಟ್ ನಿಂದ ವಂಚಿತರಾದಚರು ಬಂಡಾಯದ ಕಾವನ್ನು ಕೊಡಲು ಮುಂದಾಗಿದ್ದಾರೆ. ಹೌದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮತಕ್ಷೆತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ, ಜಗದೀಶ ಮೆಟಗುಡ್ಡ ಇವರಿಗೆ ಈ ಬಾರಿ ಬಿಜೆಪಿ ಇಂದ ಟಿಕೇಟ್ ಕೈ ತಪ್ಪಿದೆ..ಆದರೆ ಕಳೆದ ಬಾರಿ‌ಅಂದ್ರೆ 2013 ರಲ್ಲಿ‌ ಬಿಜೆಪಿ ಇಂದ ನಿಂತು‌ 37,000 ವೋಟುಗಳನ್ನು‌ ಪಡೆದು ಕ್ಕೊಂಡಿದ್ದರು, ಆದರೆ ಜಗದೀಶ ಮೆಟಗುಡ್ಡ ಅವರ ವಿರುದ್ದ ಕೆಜೆಪಿ ಇಂದ ವಿಶ್ವನಾಥ ಪಾಟೀಲ ಅವರು ಸ್ಪರ್ದೆ ಮಾಡಿ‌ ಜಯಗಳಿಸಿದರು, ಶಾಸಕರಾದ ಬಳಿಕ ಕೆಜೆಪಿ ಇಂದ ಬಿಜೆಪಿಗೆ ಸೆರ್ಪಡೆಯಾದರು.ಆದರೆ ಕ್ಷೆತ್ರದಲ್ಲಿ ಬಿಜೆಪಿ ಕಟ್ಟಿ ಬೆಳಸಿದ ಜಗದೀಶ ಮೆಟಗುಡ್ಡ ಅವರನ್ನು ಈ ಬಾರಿ ಬಿಜೆಪಿ ಇಂದ ಟಿಕೇಟ್ ನಿಡಿಲ್ಲಾ ಎಂದು ಕಾರ್ಯಕರ್ತರು ಯಡಿಯೂರಪ್ಪ ಅವರ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ….

ಕಳೆದ 2004 ಮತ್ತು 2008 ರಲ್ಲಿ ಬಿಜೆಪಿ ಇಂದ ಎರಡು ಬಾರಿ ಬಿಜೆಪಿ ಇಂದ ಶಾಸಕರಾಗಿ ಆಯ್ಕೆಯಾಗಿದ್ದರು, ಮತ್ತು ಬೆಳಗಾವಿ ಜಿಲ್ಲಾದ್ಯಕ್ಷರಾಗಿ ಬಿಜೆಪಿಗೆ ಸಾಕಷ್ಟು ಶ್ರಮವಹಿಸಿ ಪಕ್ಷ ಕಟ್ಟಿದ ಮೆಟಗುಡ್ಡ ಅವರ ಟಿಕೇಟ್ ಸಿಗದೆ ಇದ್ದುದಕ್ಕೆ ಅವರ ಕಾರ್ಯಕರ್ತರ ಜೊತೆ ಮಾತುಕತೇ ನಡೆಸಿ ಕಾರ್ಯಕರ್ತರು ಹೇಳಿದ ಹಾಗೆ ಕ್ಷೆತ್ರದ ಬಂಡಾಯ ಅಭ್ಯರ್ಥಿ ಯಾಗಿ ನಿಲ್ಲಿವುದು ಖಚಿತ ಎಂದು ಇಂಗಿತ ವ್ಯಕ್ತ ಪಡಿಸಿದ್ದಾರೆ..ಇನ್ನು ಕ್ಷೇತ್ರದಲ್ಲಿ ತಮ್ಮದೆ ಆದ ವರ್ಚಸ್ಸನ್ನು ಬೆಳಸಿದ ಜಗದೀಶ ಮೆಟಗುಡ್ಡ ಅವರು ಹೊಂದಿದ್ದಾರೆ, ವಲಸೆ ಬಂದವರಿಗೆ ಬಿಜೆಪಿ ಟಿಕೇಟ್ ನಿಡಿದ ನಾನು ಮಾತ್ರ ಬಂಡಾಯ ಏಳುವುದು ಖಚಿತ ಎಂದು ಬೆಳಗಾವಿ ಸುದ್ಧಿಗೆ ಪ್ರತಿಕ್ರಿಯೇ ನಿಡಿದ್ದಾರೆ…ಜೊತೆಗೆ ಕಾರ್ಯಕರ್ತರು ಸೂಚಿಸಿದಂತೆ ನಮ್ಮ ನಡೆ ಎಂದು ಹೇಳಿದ್ದಾರೆ..ಯಡಿಯೂರಪ್ಪ ಅವರು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ..ಕಳೆದ ಬಾರಿ ೨೦೧೩ ರಲ್ಲಿ ಯಡಿಯೂರಪ್ಪ ಅವರು ಬಿಜೆಪಿ ಇಂದ ಕೆಜೆಪಿ ಪಕ್ಷ ಕಟ್ಟಿದಾಗ ಮೆಟಗುಡ್ಡ ಅವರಿಗೆ ಬರಲು ಸೂಚಿಸಿದ್ದರು, ಆಗ ಇವರು ಹೊಗದಿದ್ದಕ್ಕೆ ಈ ಬಾರಿ ಕೈ ಬಿಜೆಪಿ ಇಂದ ಮೆಟಗುಡ್ಡ ಅವರ ಟಿಕೇಟ್ ಯಡಿಯೂರಪ್ಪ ಅವರು ತಪ್ಪಿಸಿದ್ದಾರೆ ಎಂದು ಕಾರ್ಯಕರ್ತರ ಗಂಬೀರ ಆರೋಪ ಮಾಡುತ್ತಿದ್ದಾರೆ…
ಒಟ್ಟಿನಲ್ಲಿ ಬೈಲಹೊಂಗಲ ಕ್ಷೆತ್ರದಲ್ಲಿ ಜಗದೀಶ ಮೆಟಗುಡ್ಡ ಅವರ ಟಿಕೇಟ್ ಕೈ ತಪ್ಪಿದ ಹಿನ್ನಲೆಯಲ್ಲಿ ಭಾರಿ ಮೆಟಗುಡ್ಡ ಅವರು ಬಂಡಾಯ ಅಭ್ಯರ್ಥಿ ಯಾಗಿ ನಿಲ್ಲಲಿದ್ದಾರೆ..ಇನ್ನು ಕಾರ್ಯಕರ್ತರು ಬಿಜೆಪಿ ಇಂದ ಯಾವುದೆ ಅಭ್ಯರ್ಥಿ ನಿಂತರೂ ಅವರನ್ನು ಸೋಲಿಸುತ್ತೆವೆ. ಯಡಿಯೂರಪ್ಪ ಅವರ ಪ್ಲಾನ್ ಸಕ್ಸಸ್ ಆಗುತ್ತಾ ಪೇಲ್ ಆಗುತ್ತಾ ಎಂಬುದನ್ನು ಕಾದು ನೋಡಬೇಕಿದೆ…

Check Also

ಶಿವಸಾಗರ ಸಕ್ಕರೆ ಕಾರ್ಖಾನೆ ಮಾರಾಟ, ಸಿಡಿದೆದ್ದ ಷೇರುದಾರರು, ಡಿಸಿ ಕಚೇರಿಯಲ್ಲಿ ಹಠಾತ್ ಸಭೆ…!!

ಶಿವಸಾಗರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಸಿಡಿದೆದ್ದ ಷೇರುದಾರರು, ರೈತರು.. ಬೆಳಗಾವಿ ಡಿಸಿ ನೀಡಿದ ಭರವಸೆ ಏನು? ಬೆಳಗಾವಿ: …

Leave a Reply

Your email address will not be published. Required fields are marked *