ಪಾತಾಳಕ್ಕಿಳಿದ ಕ್ಯಾಬೀಜ್ ಬೆಲೆ ಬೀದಿಗೆ ಬಂದ ರೈತ…..!!!!
ಬೆಳಗಾವಿ- ಬೆಳಗಾವಿಯ ತರಕಾರಿ ಮಾರ್ಕೆಟ್ ನಲ್ಲಿ ಕ್ಯಾಬೀಜ್ ಬೆಲೆ ಕೆಜಿ ಗೆ 50 ಪೈಸೆ ಇಷ್ಟು ದರದಲ್ಲಿ ಕ್ಯಾಬೀಜ್ ಬೆಳೆದ ರೈತನಿಗೆ ಕ್ಯಾಬೀಜ್ ಕಟಾವ್ ಮಾಡಿದ ಕೂಲಿಯೂ ಸಿಗೋದಿಲ್ಲ ,ಕ್ಯಾಬೀಜ್ ಬೆಲೆ ಪಾತಾಳಕ್ಕೆ ತಲುಪಿರುವ ಕಾರಣ ಕ್ಯಾಬೀಜ್ ಬೆಳೆದ ರೈತ ಬೀದಿಗೆ ಬಂದಿದ್ದಾನೆ
ಬೆಳಗಾವಿ ಸಮೀಪದ ಕಡೋಲಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕ್ಯಾಬೀಜ್ ಬೆಳೆಯಲಾಗುತ್ತಿದೆ.ಅದರ ಬೆಲೆ ಏಕಾ ಏಕಿ ಕುಸಿದಿರುವದರಿಂದ ಹೈರಾಣಾಗಿರುವ ರೈತರು ಇಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕ್ಯಾಬೀಜ್ ಸುರಿದು ಆಕ್ರೋಶ ವ್ಯಕ್ತಪಡಿಸಿದರು.
ಮಾರುಕಟ್ಟೆಯಲ್ಲಿ ಕ್ಯಾಬೀಜ್ ಗೆ ಬೆಲೆ ಇಲ್ಲ,ರೈತ ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ಸಿಗುತ್ತಿಲ್ಲ ಸರ್ಕಾರ ಇಂತಹ ಪರಿಸ್ಥಿತಿಯಲ್ಲಿ ರೈತನ ನೆರವಿಗೆ ಧಾವಿಸಬೇಕು ,ಕ್ಯಾಬೀಜ್ ಬೆಳೆದ ರೈತನಿಗೆ ಸರ್ಕಾರ ಪರಿಹಾರ ಅಥವಾ ಬೆಂಬಲ ಬೆಲೆ ಕೊಡಬೇಕು ಎಂದು ರೈತರು ಆಗ್ರಹಿಸಿದರು.
ಸರ್ಕಾರ ತರಕಾರಿ ಬೆಲೆ ಕುಸಿಯದಂತೆ ನಿಯಂತ್ರಣ ಮಾಡಲು ಯೋಜನೆ ರೂಪಿಸಬೇಕು. ಕ್ಯಾಬೀಜ್ ಬೆಳೆಗಾರರಿಗೆ ಪರಿಹಾರ ಒದಗಿಸಬೇಕು, ರೈತ ಶ್ರಮ ಪಟ್ಟು ತಾನು ಬೆಳೆದ ಕ್ಯಾಬೀಜ್ ಮಣ್ಣಲ್ಲಿ ಸಮಾದಿ ಮಾಡುವ ಪರಿಸ್ಥಿತಿ ಬಂದಿದೆ,ಸರ್ಕಾರ ರೈತನ ಸಹಾಯಕ್ಕೆ ಧಾವಿಸಬೇಕು ಎಂದು ರೈತ ಮುಖಂಡ ಅಪ್ಪಾಸಾಹೇಬ ದೇಸಾಯಿ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು.