ಬೆಳಗಾವಿ-ಹಾಡುಹಗಲೆ ತಮ್ಮನಿಂದಲೇ ಅಣ್ಣನಿಗೆ ಚೂರಿ ಇರಿದು ಕೊಲೆ ಮಾಡಿದ ಘಟನೆ ಬೆಳಗಾವಿ ನಗರದಲ್ಲಿ ನಡೆದಿದ್ದು, ಗಂಭೀರ ಗಾಯಗೊಂಡ ಅಣ್ಣ ನರಳುತ್ತ ನೆಲದ ಮೇಲೆ ಬಿದ್ದ್ರು, ರಾಜಾರೋಷವಾಗಿ ಅಣ್ಣನ ನರಳಾಟ ನೋಡುತ್ತ ನಿಂತಿದ್ದ ಕಿರಾತಾಕ ತಮ್ಮ. ಕೊಲೆ ಮಾಡಿದ ಆರೋಪಿಯನ್ನ ಪೊಲೀಸರು ಮಿಂಚಿನ ಕಾರ್ಯಾಚರಣೆ ಮಾಡಿ ಬಂಧಿಸಿದ್ದಾರೆ.
ಬೆಳಗಾವಿಯ ಜ್ಯೋತಿ ನಗರದ ನಿವಾಸಿ ಪ್ರವೀಣ ರಾಜಾ ಕುಡಾಳೆ (34) ಕೊಲೆಯಾದ ದುರ್ದೈವಿ. ಪ್ರವೀಣ ತಮ್ಮ ಪಪ್ಪ್ಯಾ ಕುಡಾಳೆ ಕೊಲೆ ಮಾಡಿದಾತ. ಇಂದು ಬೆಳಗ್ಗೆ ಕ್ಷುಲ್ಲಕ್ಕೆ ಕಾರಣಕ್ಕೆ ಪ್ರವೀಣ ಮತ್ತು ಪಪ್ಪ್ಯಾ ಮಧ್ಯೆ ಜಗಳ ಆರಂಭವಾಗಿದೆ. ಇಬ್ಬರು ಕುಡಿದ ಮತ್ತಿನಲ್ಲಿದ್ದ್ರು. ಜಗಳ ಕೈಕೈ ಮೀಲಾಯಿಸುವ ಹಂತಕ್ಕೆ ತಲುಪಿದಾಗ ಪಪ್ಪ್ಯಾ ಮನೆಯಲ್ಲಿದ ಚೂರಿ ತಂದು ಪ್ರವೀಣ ಎದೆಯ ಭಾಗಕ್ಕೆ ಚೂಚ್ಚಿದ್ದಾನೆ. ತಕ್ಷಣವೇ ಪ್ರವೀಣ ಧರೆಗೆ ಉಳಿರುಬಿದ್ದು ನರಳಾಡುತ್ತಿದ್ದ್ರು, ಅಣ್ಣನ ನರಳಾಟವನ್ನ ನೋಡುತ್ತ ಪಪ್ಪ್ಯಾ ನಿಂತಿದ್ದ. ಎಲ್ಲಿಯೂ ಪಪ್ಪ್ಯಾಗೆ ಕೊಲೆ ಮಾಡಿದ ಪಚ್ಛಾತಾಪ, ಭಯ ಆತನ ಮುಖದಲ್ಲಿ ಕಾಣಿಸುತ್ತಿರಲಿಲ್ಲ. ತಕ್ಷಣವೇ ಸ್ಥಳೀಯರು ಗಾಯಗೊಂಡ ಪ್ರವೀಣನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದ್ರು. ಆದ್ರೆ ಚಿಕಿತ್ಸೆ ಫಲಿಸದಕಾರಣ ಪ್ರವೀಣ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ.
ಪ್ರವೀಣ ತಾಯಿ ಮತ್ತು ಸಂಬಂಧಿಸಿಕರು ಆಸ್ಪತ್ರೆಗೆ ಆಗಮಿಸುತ್ತಿದ್ದಂತೆ ಪ್ರವೀಣ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಕ್ಷುಲ್ಲಕ ಕಾರಣಕ್ಕೆ ಸಹೋದರರ ಜಗಳ ಕಣ್ಣಮುಂದೆಯೇ ದುರಂತವಾಗಿರುವುದನ್ನ ಕಂಡು ತಾಯಿ, ಸಂಬಧಿಕರು ಕಣ್ಣೀರು ಮುಗಿಲು ಮುಟ್ಟಿತ್ತು.
ಅತ್ತ ಘಟನೆ ವಿಚಾರ ತಿಳಿಯುತ್ತಿದ್ದಂತೆ ಕ್ಯಾಂಪ್ ಠಾಣೆ ಸಿಪಿಐ ತ್ವರಿತ ಕಾರ್ಯಾಚರಣೆ ನಡೆಸಿ, ಒಂದು ಘಟನೆ ಅವಧಿಯಲ್ಲಿಯೇ ಆರೋಪಿತ ಪಪ್ಪ್ಯಾನನ್ನ ಬಂಧಸಿ ಠಾಣೆಗೆ ತಂದು ವಿಚಾರಣೆಗೆ ಒಳ ಪಡಿಸಿದ್ರು. ಹೆದರಿಸುವುದಕ್ಕಾಗಿ ಚೂರಿ ತೊರಿಸಲು ಹೋಗಿ ಅನಾಹುತವಾಗಿದೆ ಎಂದು ಆರೋಪಿ ತಮ್ಮ ಪಪ್ಪ್ಯಾ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.
ಒಟ್ಟ್ನಲ್ಲಿ ಕುಡಿತದ ಮತ್ತಿನಲ್ಲಿ ಸಹೋದರರ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಮನೆ ಮುಂದಿ ಕಣ್ಣ್ಮುಂದೆ ಜಗಳ ನಡೆತ್ತಿದ್ದ್ರು ಯಾರೊಬ್ಬರು ಜಗಳ ಬಿಡಿಸಲು ಮುಂದಾಗಲಿಲ್ಲ. ಇದರ ಪರಿಣಾಮವೇ ಅಣ್ಣ ಪ್ರವೀಣ ಹೆಣವಾಗಿ ಹೋದ್ರೆ. ತಮ್ಮ ಪಪ್ಪ್ಯಾ ಜೈಲು ಪಾಲಾಗಿದ್ದಾನೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ