Breaking News
Home / ಬೆಳಗಾವಿ ನಗರ / ನಾಲ್ವತ್ತು ವರ್ಷಗಳಿಂದ ದಲಿತಕೇರಿಗಳಿಗೆ ಹೊಗಿಲ್ಲ- ಸಚಿವ ಜಿಗಜಿಣಗಿ

ನಾಲ್ವತ್ತು ವರ್ಷಗಳಿಂದ ದಲಿತಕೇರಿಗಳಿಗೆ ಹೊಗಿಲ್ಲ- ಸಚಿವ ಜಿಗಜಿಣಗಿ

ಬೆಳಗಾವಿ-ಕಳೆದ ನಲ್ವತ್ತು ವರ್ಷಗಳಿಂದ ನಾನು ದಲಿತಕೇರಿಗಳಿಗೆ ಹೋಗಿಲ್ಲ ಯ್ಯಾಕೆ ಹೋಗಿಲ್ಲ ಅನ್ನೊದನ್ನು ಸಮಯ ಸಂದರ್ಭ ಬಂದಾಗ ಹೇಳುತ್ತೇನೆ ಸಮಾಜಕ್ಕೆ ಏನಾದ್ರೂ ಮಾಡಬೇಕೆಂಬ ಛಲ ಇದೆ ಈ ಛಲ ಸಾಧಿಸಲು ಜನರಿಂದ ಸ್ವಲ್ಪ ದೂರ ಇದ್ದೇನೆ ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ತಿಳಿಸಿದ್ದಾರೆ
ನಗರದ ಕುಮಾರ ಗಮಧರ್ವ ರಂಗಮಂದಿರದಲ್ಲಿ ರಾಷ್ಟ್ರೀಯ ಪರಶಿಷ್ಠ ಜಾತಿಯ ಸಂವಿಧಾನಾತ್ಮಕ ಸವಲತ್ತುಗಳ ಅನುಷ್ಠಾನ ಮತ್ತು ರಕ್ಷನಾ ಪರಿಷತ್ತ ವತಿಯಿಂದ ಆಯೋಜಿಸಲಾದ ಕೇಂದ್ರ ಸರ್ಕಾರದ ಯೋಜನೆಗಳ ಜಾಗೃತಿ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಾಧನೆ ಮಾಡಲು ಛಲ ಬೇಕು ಕೇವಲ ಸರ್ಕಾರಿ ಉದ್ಯೋಗದ ಮೇಲೆ ಅವಲಂಭಿತರಾಗದೇ ಸ್ವಾವಲಂಭಿಗಳಾಗುವ ಛಲ ಇರಬೆಕು ಸರ್ಕಾರದ ಸವಲತ್ತುಗಳನ್ನು ಪಡೆದುಕೊಂಡು ದಲಿತ ಬಾಂಧವರು ಉದ್ಯೋಗಪತಿಗಳಾಗಬೇಕು ಎಂದರು
ದಲಿತ ಬಾಂಧವರಿಗೆ ಸರ್ಕಾರಗಳು ಕೇವಲ ಕುರಿ ಕೋಳಿ.ಕೋಣ ಕೊಟ್ಟು ಸೋಮಾರಿಗಳನ್ನಾಗಿ ಮಾಡಿದೆ ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರು ಹೇಳಿದಂತೆ ಎಲ್ಲರು ಸುಕ್ಷಿತತರಾಗಬೇಕು ಸಂಘಟಿತರಾಗಿ ತಮ್ಮಲ್ಲಿರುವ ದಾರಿದ್ರ್ಯದ ವಿರುದ್ಧ ಹೋರಾಡಬೇಕು ಬಡತನದ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದರು
ಸ್ವ ಉದ್ಯೋಗ ಕೈಗೊಳ್ಳಲು ಕೇಂದ್ರ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ ಈ ಯೋಜನೆಗಳ ಅನುಷ್ಠಾನಕ್ಕೆ ಭೂಮಿ ನಿಡುª ಜವಾಬ್ದಾರಿ ರಾಜ್ಯ ಸಕಾರದ ಮೇಲಿದೆ ಎಂದು ಹೇಳಿದರು
ರಾಯಣ್ಣ ಬ್ರಿಗೇಡ್ ಬಿಜೆಪಿ ಪಕ್ಷಕ್ಕೆ ಸಮಂಧವಿಲ್ಲ
ಕಾರ್ಯಕ್ರಮದ ಬಳಿಕ ಮಾದ್ಯಮಗಳ ಜತೆ ಮಾತನಾಡಿದ ಅವರು ಬಿಜೆಪಿ ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇಟ್ಟು ಕೆಲಸ ಮಾಡುತ್ತಿದೆ ಈಶ್ವರಪ್ಪನವರ ರಾಯಣ್ಣ ಬ್ರೀಗೇಡ್ ಸ್ಥಾಪಿಸುವ ಘೋಷಣೆ ಮಾಡಿದ್ದಾರೆ ಅದು ಅವರ ವ್ಯೆಯಕ್ತಿಕ ವಿಚಾರ ಅದಕ್ಕೂ ಬಿಜೆಪಿಗೂ ಯಾವುದೇ ಸಂಮಂಧವಿಲ್ಲ ಎಂದು ಕೇಂದ್ರದ ರಾಜ್ಯ ಸಚಿವ ರಮೇಶ ಜಿಗಜಿಣಗಿ ಹೇಳಿದರು

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *