ಸ್ವಾಮಿಜಿ ವಿರುದ್ಧ ಅವಹೇಳನಕಾರಿ ಟ್ವಿಟ್-ಜೈನ ಸಮಾಜದ ಖಂಡನೆ

ಬೆಳಗಾವಿ.ಆ.28: ಇತ್ತಿಚಿಗೆ ಜೈನ ಮುನಿ ರಾಷ್ಟ್ರಸಂತ ಅವರು ಹರಿಯಾಣ ವಿಧಾನಸಭೆಯಲ್ಲಿ 40 ನಿಮಿಷಗಳ ಕಾಲ ನೀಡಿದ ಪ್ರವಚನಕ್ಕೆ ಸಂಬಂಧಿಸಿದಂತೆ ದೆಹಲಿ ಆಮ್ ಆದ್ಮಿ ಪಕ್ಷದ ವಕ್ತಾರ ವಿಶಾಲ ದಾದಲಾನಿ ಮತ್ತು ಕಾಂಗ್ರೆಸ ಮುಖಂಡ ತಹಶೀನ ಪೂನಾವಾಲಾ ಇವರು ಆಚಾರ್ಯ ತರುಣಸಾಗರಜೀ ಅವರ ವಿರುದ್ದ ಟ್ವೀಟರ್‍ನಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ಪ್ರಕಟಿಸಿರುವುದನ್ನು ಸಮಸ್ತ ಜೈನ ಸಮಾಜ ತೀವ್ರವಾಗಿ ಖಂಡಿಸಿದ್ದು, ಬೆಳಗಾವಿಯ ಪೀರನವಾಡಿಯಲ್ಲಿ ಈ ಉಭಯ ಜನರ ಪ್ರತಿಕೃತಿಯನ್ನು ದಹಿಸಿ ಪ್ರತಿಭಟನೆ ನಡೆಸಲಾಯಿತು.
ಹರಿಯಾಣದ ವಿಧಾನ ಸಭೆಯಲ್ಲಿ ಧರ್ಮ, ರಾಜಕಾರಣ, ರಾಷ್ಟ್ರ ಪ್ರೇಮ, ಹೆಣ್ಣು ಬ್ರೂಣ ಹತ್ಯೆ ತಡೆಗಟ್ಟಿವಿಕೆ ಕುರಿತು ಐತಿಹಾಸಿಕ ಪ್ರವಚನ ನೀಡಿದ ರಾಷ್ಟ್ರಸಂತ ಆಚಾರ್ಯ ತರುಣಸಾಗರಜೀ ಮಹಾರಾಜರ ವಿರುದ್ದ ಆಪ್ ಪಕ್ಷದ ದೆಹಲಿ ವಕ್ತಾರ ವಿಶಾಲ ದಾದಲಾನಿ ಇವರು ತುರಣಸಾಗರಜೀ ಇವರು ಓರ್ವ ಮಂಗ ಎಂದು ಟ್ವೀಟರ್‍ನಲ್ಲಿ ಟ್ವೀಟ್ ಮಾಡಿದ್ದಾರೆ. ಇವರೊಂದಿಗೆ ಕಾಂಗ್ರೆಸ ಮುಖಂಡ ತಹಶೀನ ಪೂನಾವಾಲಾ ಇವರು ತರುಣಸಾಗರಜೀ ಮುನಿಗಳನ್ನು ಅರೆನಗ್ನ ಮಹಿಳೆಯೊಂದಿಗೆ ಹೋಲಿಕೆ ಮಾಡಿದ ಚಿತ್ರವನ್ನು ಟ್ವೀಟ್ ಮಾಡುವುದಲ್ಲದೇ ಅವಹೇಳನಕಾರಿ ಭಾಷೆಯನ್ನು ಬಳಿಸಿದ್ದಾರೆ.
ಈ ಇಬ್ಬರ ಟ್ವೀಟರ್‍ಗಳು ಇಂದು ಟ್ವೀಟರ್ ಮತ್ತು ವಾಟ್ಸ್‍ಪ್‍ಗಳಲ್ಲಿ ಸುದ್ದಿ ಹರಿದಾಡುತ್ತಿದ್ದಂತೆ ಬೆಳಗಾವಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಜೈನ ಸಮುದಾಯದಲ್ಲಿ ಅಸಂತೋಷದ ವಾತಾವರಣ ಉಂಟಾಯಿತು. ಈ ಹಿನ್ನಲೆಯಲ್ಲಿ ಪೀರನವಾಡಿಯ ಜೈನ ಸಮಾಜ ಬೀದಿಗಿಳಿದು ಪ್ರತಿಭಟನೆ ನಡೆಸುವುದಲ್ಲದೇ ತರುಣಸಾಗರಜೀ ಮುನಿಗಳ ವಿರುದ್ದ ಅವಹೇಳನಕಾರಿ ಟ್ವೀಟ್ ಮಾಡಿದ ವ್ಯಕ್ತಿಗಳ ವಿರುದ್ದ ರಾಷ್ಟ್ರದ್ರೋಹ ಪ್ರಕರಣವನ್ನು ದಾಖಲಿಸಿ ಜೈಲಿಗೆ ಅಟ್ಟಬೇಕೆಂದು ಆಗ್ರಹಿಸಿದ್ದಾರೆ.
ಈ ಪ್ರತಿಭಟನೆ ಸಂದರ್ಭದಲ್ಲಿ ಪೀರನವಾಡಿ ಜೈನ ಸಮಾಜದ ಅಧ್ಯಕ್ಷ ಹೀರಾಚಂದ ಪಾಟೀಲ, ಚಂದ್ರಕಾಂತ ಪಾಟೀಲ, ಅನಿಲ ಪಾಟೀಲ, ಭೂಷಣ ಪಾಟೀಲ, ಪ್ರಶಾಂತ ಅನಗೋಳಕರ, ಶ್ರೀಕಾಂತ ಪಾಟೀಲ,ಧರ್ಮರಾವ ಅನಗೋಳಕರ, ನೇಮಿನಾಥ ಪಾಟೀಲ, ರವಿ ಜೈನರ, ಪ್ರಮೋದ ಬೆಳಗಾಂವಕರ, ಅಮಿತ ಪಾಟೀಲ, ಸುಭಾಷ ಪಾಟೀಲ, ಅಶೋಕ ಪಾಟೀಲ, ಮಹಾವೀರ ಅನಗೋಳಕರ ಸೇರದಿಂತೆ ಹೆಚ್ಚಿನ ಸಂಖ್ಯೆಯಲ್ಲಿ ಜೈನ ಸಮಾಜದ ಬಾಂಧವರು ಉಪಸ್ಥಿತರಿದ್ದರು.

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.