ಬೆಳಗಾವಿ-ಬೆಳಗಾವಿ ನಗರದ ಜಿಐಟಿ ಕಾಲೇಜಿನ ಸಿವ್ಹಿಲ್ ಇಂಜನೀಯರಿಂಗ್ ವಿಧ್ಯಾರ್ಥಿಯೊಬ್ಬ ತನ್ನ ರೂಮಿನಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ
ಆತ್ಮಹತ್ಯೆ ಮಾಡಿಕೊಂಡಿರುವ ಜಿಐಟಿ ಕಾಲೇಜಿನ ವಿಧ್ಯಾರ್ಥಿಯನ್ನು ಅಥಣಿ ತಾಲೂಕಿನ ಮದಬಾಂವಿ ಗ್ರಾಮದ ೨೨ ವರ್ಷ ವಯಸ್ಸಿನ ಹರ್ಷಲ ಪಾಟೀಲ ಎಂದು ಗುರುತಿಸಲಾಗಿದೆ
ಇತ ತನ್ನ ಗೆಳೆಯನ ಜೊತೆ ಕಾಲೇಜಿನ ಬದಿಯಲ್ಲಿ ರೂಂ ಮಾಡಿಕೊಂಡು ವಾಸವಾಗಿದ್ದ ಮಂಗಳವಾರ ಸಂಜೆ ಇತನ ಗೆಳೆಯ ಹೊರಗಡೆ ಹೋದ ಸಂಧರ್ಭದಲ್ಲ ಹರ್ಷಲ್ ಪಾಟೀಲ ಆತ್ಮಹತ್ಯೆ ಮಾಡಿಕೊಂಡಿದ್ದು ಕಾರಣ ತಿಳಿದುಬಂದಿಲ್ಲ
ಉದ್ಯಮಬಾಗ ಪೋಲಿಸರು ಸ್ಥಳಕ್ಕೆ ದೌಡಾಯಿಸಿ ಪರಶೀಲನೆ ನಡೆಸುತ್ತದ್ದಾರೆ ಅಥಣಿಯಿಂದ ಪಾಲಕರು ಬಂದ ನಂತರ ಆತ್ಮಹತ್ಯೆಗೆ ಕಾರಣ ಏನೆಂಬುದು ಗೊತ್ತಾಗಲಿದೆ