ಬೆಳಗಾವಿಯ ಹೈಟೆಕ್ ವೇಶ್ಯಾವಾಟಿಕೆ ,ಫುಲ್ ನೈಟ್ ಗೆ ಇಪ್ಪತ್ತು ಸಾವಿರ
ಬೆಳಗಾವಿ: ನಗರದ ಟಿಳಕವಾಡಿಯ ಅಪಾರ್ಟಮೆಂಟವೊಂದರ ಮೇಲೆ ದಾಳಿ ಮಾಡಿರುವ ಸಿಸಿಐಬಿ ಪೊಲೀಸರು, ಮುಂಬೈ ಮೂಲದ ಯುವತಿಯೊಬ್ಬಳನ್ನು ರಕ್ಷಿಸಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಓರ್ವನನ್ನು ಬಂಧಿಸಿದ್ದಾರೆ.
ಪ್ರವೀಣ ಪಾಟೀಲ ಎಂಬಾತ ಮುಂಬೈ ಮೂಲದ ಯುವತಿಯರನ್ನು ಬೆಳಗಾವಿಗೆ ಕರೆಯಿಸಿ ಟಿಳಕವಾಡಿಯ ಅಪಾರ್ಟಮೆಂಟ್ ನಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ. ಕೆಲ ಗಿರಾಕಿಗಳು ಅಪಾರ್ಟಮೆಂಟಗೆ ಬಂದು ಮಜಾ ಮಾಡುತ್ತಿದ್ದರು. ಇನ್ನು ಕೆಲವರು ಯುವತಿಯರನ್ನು ಬೇರೆ ಹೋಟೆಲಗಳಿಗೆ ಕರೆದೊಯ್ಯುತ್ತಿದ್ದರು ಎಂದು ತಿಳಿದುಬಂದಿದೆ. ಈವತ್ತು ಸಂಜೆ ದಾಳಿ ಮಾಡಿರುವ ಪೊಲೀಸರು ಪ್ರವೀಣನನ್ನು ಬಂಧಿಸಿ ಹೈಟೆಕ್ ಜಾಲ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ದಂಧೆಗೆ ಒಂದು ರಾತ್ರಿಗೆ ಗ್ರಾಹಕರಿಂದ 20 ಸಾವಿರ ರೂ. ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದರು.
ಪೋಲಿಸ್ ಆಯುಕ್ತರ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಸಿಪಿಐ ಗಡ್ಡೇಕರ ಸೇರಿದಂತೆ ಸಿಸಿಬಿ ಪೋಲೀಸರು ಭಾಗವಹಿಸಿದ್ದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ