ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಹೊಸ ಕಾರಿಗಾರಿ ಮೇಯರ್ ಹಾಗೂ ಉಪ ಮೇಯರ್ ಅವರ ಗುದ್ದಾಟ ಮುಂದುವರೆದಿದೆ.
ಹೊಸ ಕಾರು ಬೇಕು ಎಂದು ಪಟ್ಟು ಹಿಡಿದಿರುವ ಉಪ ಮೇಯರ್ ಸಂಜಯ ಶಿಂಧೆ ಕಳೆದ ಎರಡು ವಾರಗಳಿಂದ ಪಾಲಿಕೆಗೆ ಖಾಸಗಿ ಕಾರಿನಲ್ಲಿಯೇ ಬರುತ್ತಿದ್ದು, ಈಗ ಮೇಯರ್ ಸರಿತಾ ಪಾಟೀಲ ಹೊಸ ಕಾರಿಗಾಗಿ ವಾರ್ ಆರಂಭಿಸಿದ್ದಾರೆ.
ಈ ಕುರಿತು ಅವರನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಹೊಸ ಕಾರು ಖರೀಧಿಸುವ ನಿರ್ಣಯ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಅದಕ್ಕಾಗಿಯೇ 20 ಲಕ್ಷ ರೂ ಗಳನ್ನು ತೆಗೆದಿರಿಸಲಾಗಿದೆ. ಆದರೆ ಅಧಿಕಾರಿಗಳು ಸರ್ಕಾರದ ನೀತಿನಿಯಮಾವಳಿಗಳ ನೆಪವೊಡ್ಡಿ ಇನ್ನೂವರೆಗೆ ಹೊಸ ಕಾರುಗಳನ್ನು ಖರೀದಿಸಿಲ್ಲ. ಅಧಿಕಾರಿಗಳ ಧೋರಣೆಯಿಂದಾಗಿ ಸಹಣೆಯ ಕಟ್ಟೆ ಒಡೆದಿದ್ದು, ಇದೇ ಪರಿಸ್ಥಿತಿ ಮುಂದುವರೆದರೆ ಮನೆಯಲ್ಲಿರುವ ದ್ವೀಚಕ್ರವಾಹನದಲ್ಲಿ ಪಾಲಿಕೆಗೆ ಬರುವುದಾಗಿ ಮೇಯರ್ ಸರಿತಾ ಪಾಟೀಲ ಎಚ್ಚರಿಕೆ ನೀಡಿದ್ದಾರೆ.
ಮೇಯರ್ ಹಾಗೂ ಉಪಮೇಯರ್‍ಗಾಗಿ ಈಗಿರುವ ಕಾರುಗಳು ಹಳೆಯದಾಗಿವೆ. ಕಾರ್ಯಕ್ರಮಕ್ಕೆ ಹೋಗುವ ಸಂದರ್ಭದಲ್ಲಿ ಮಧ್ಯ ರಸ್ತೆಯಲ್ಲಿಯೇ ಹಲವಾರು ಭಾರಿ ಕೆಟ್ಟು ನಿಂತಿವೆ. ನಮಗೆ ಇಂಥಹ ಕಂಪನೀಯ ಕಾರು ಬೇಕಂತ್ತಿಲ್ಲ. ಅಧಿಕಾರಿಗಳು ನನಗೆ ಬೆಲೆ ಕೊಡದಿದ್ದರೂ ತಮ್ಮ ಸ್ಥಾನಕ್ಕಾದರೂ ಬೆಲೆ ಕೊಡಲಿ. ನಗರಾಭಿವೃದ್ಧಿ ಸಚಿವರು ಹೊಸ ಕಾರು ಖರೀಧಿಗೆ ಸೂಚನೆ ನೀಡಿದ್ದರೂ ಸಹ ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ. ಈ ಕುರಿತು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶೀಗಳಿಗೆ ದೂರು ಸಲ್ಲಿಸುವುದಾಗಿ ಮೇಯರ್ ಸರಿತಾ ಪಾಟೀಲ ಹೊಸ ಬಾಂಬ್ ಸಿಡಿಸಿದ್ದಾರೆ.
ಒಟ್ಟಾರೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಹೊಸ ಕಾರಿಗಾಗಿ ವಾರ್ ಆರಂಭವಾಗಿದೆ. ಅಧಿಕಾರಿಗಳ ಜೊತೆಗೆ ಜಟಾಫಟಿ ನಡೆಯುತ್ತಿದೆ. ಉಪಮೇಯರ್ ತಿರಸ್ಕರಿಸಿದÀ ಅಂಬ್ಯಾಸೆಡರ್ ಕಾರು ಪಾಲಿಕೆಯ ಎದುರು ನಿರ್ಗತಿಕವಾಗಿದೆ. ಮೇಯರ್ ಸರಿತಾ ಪಾಟೀಲ ಬೈಕ್ ಮೇಲೆ ಪಾಲಿಕೆ ಕಚೇರಿಗೆ ಬರುವುದಾಗಿ ಹೇಳಿಕೆ ನೀಡಿ ಅಧಿಕಾರಿಗಳಿಗೆ ಮತ್ತು ರಾಜ್ಯ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ.
Check Also
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …