Breaking News

ಕರ್ನಾಟಕದ ಪೋಲೀಸರನ್ನು ಮಹಾರಾಷ್ಟ್ರ ಶಾಸಕರು ಮೂರ್ಖ ಮಾಡಿದ್ರಂತೆ…!

ಬೆಳಗಾವಿ- ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗಿದೆ. ಆದರೇ ಹೊರಗೆ ಮಾತ್ರ ನಾಡ ದ್ರೋಹಿ ಎಂಇಎಸ್ ಮತ್ತೆ ಮಹಾಮೇಳ ಆಯೋಜನೆ ಮಾಡುವ ಮೂಲಕ ರಾಜ್ಯ ಸರ್ಕಾರಕ್ಕೆ ಸೆಡ್ಡು ಹೊಡೆದಿದೆ.

ಗಡಿಯಲ್ಲಿ ಕದ್ದು ಮುಚ್ಚಿ ರಾಜ್ಯ ಪ್ರವೇಶಿಸಿದ ಮಹಾರಾಷ್ಟ್ರ ಶಾಸಕ ಉದ್ಧಟನದ ಹೇಳಿಕೆ ನೀಡಿದ್ರು. ಎಲ್ಲವನ್ನೂ ನೋಡಿದ ಪೊಲೀಸರು ಮೌನವಾಗಿರೋದು ಮಾತ್ರ ಹಲವು ಪ್ರಶ್ನೆ ಮೂಡಿಸಿದೆ.

ನಡು ಬೀದಿಯಲ್ಲಿ ಅಬ್ಬರಿಸಿದ ನಾಡದ್ರೋಹಿ ಎಂಇಎಸ್ ಜಿಲ್ಲಾಧಿಕಾರಿಗಳ ನಿರ್ಬಂಧ ಉಲ್ಲಂಘೀಸಿದ ಮಹಾ ಜನಪ್ರತಿನಿಧಿಗಳು ಕದ್ದು ಮುಚ್ಚಿ ಕರ್ನಾಟಕ ವಾಹನ ಹತ್ತಿ ಬಂದು ಉದ್ಧಟನ ಎಂಇಎಸ್ ವಿರುದ್ಧ ಪ್ರತಿಭಟನೆ ನಡೆಸಿ ಕರವೇ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು ಯಸ್, ಇದು ಬೆಳಗಾವಿಯಲ್ಲಿ ಇಂದು ಗಡಿ ವಿಚಾರ ಮುಂದಿಟ್ಟುಕೊಂಟ್ಟು ಮತ್ತೆ ಕನ್ನಡಗರನ್ನು ಕೆರಳಿಸುವ ಕೆಲಸಕ್ಕೆ ಎಂಇಎಸ್ ಕೈ ಹಾಕಿದೆ.

ಇಂದಿನಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನಕ್ಕೆ ವಿರುದ್ಧ ನಾಡದ್ರೋಯಿ ಎಂಇಎಸ್ ಮಹಾಮೇಳ ಆಯೋಜನೆಗೆ ಮುಂದಾಗಿತ್ತು. ಆದರೇ ವ್ಯಾಕ್ಸ್ ಡಿಪೋ ಮೈದಾನದಲ್ಲಿ ಎಂಇಎಸ್ ನಾಯಕರಿಗೆ ಮಹಾಮೇಳ ಆಯೋಜನೆಗೆ ಮಹಾನಗರ ಪಾಲಿಕೆ ಅನುಮತಿ ನೀಡಲಿಲ್ಲ. ಇದರಿಂದ ಕಂಗಾಲದ ಎಂಇಎಸ್ ಮುಖಂಡರಲ್ಲಿ ರಸ್ತೆಯ ಮದ್ಯದಲ್ಲಿಯೇ ಟೆಂಟ್ ನಿರ್ಮಾಣ ಮಾಡಿ ಮಹಾಮೇಳ ಆಯೋಜನೆಗೆ ಮಾಡಿದ್ರು. ಮಹಾರಾಷ್ಟ್ರದ ಜನಪ್ರತಿನಿಧಗಳು ರಾಜ್ಯ ಪ್ರವೇಶ ನಿರ್ಬಂಧ ಇದ್ದರು ಇದನ್ನು ಉಲ್ಲಂಘೀಸಿದ ಕೋಲ್ಹಾಪುರ ಸಂಸದ ಧನಂಜಯ ಧನಂಜಯ ಮಹಾಡಿಕ್, ಶಾಸಕಿ ಸಂದ್ಯಾ ದೇವಿ ಕುಪಿಕರ್, ಇಸ್ಲಾಂಪುರ ಶಾಸಕ ಜಯಂತ ಪಾಟೀಲ್ ಕದ್ದು ಮುಚ್ಚಿ ಕರ್ನಾಟಕ ವಾಹನದ ಹತ್ತಿ ಪೊಲೀಸರ ಕಣ್ಣು ತಪ್ಪಿಸಿ ಬೆಳಗಾವಿ ಬಂದು ಮಹಾಮೇಳದಲ್ಲಿ ಪಾಲ್ಗೊಂಡಿದ್ದರು. ಮಹಾಮೇಳದಲ್ಲಿ ಮಾತನಾಡಿದ ಜಯಂತ ಪಾಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ರು. ಕರ್ನಾಟಕ ಸರ್ಕಾರ ಬೆಳಗಾವಿಯನ್ನು ಎರಡನೇ ರಾಜಧಾನಿ ಮಾಡಲು ಹೋರಟಿದೆ.

ಆದರೇ ಇಲ್ಲಿನ ಜನ ಮಹಾರಾಷ್ಟ್ರಕ್ಕೆ ಸೇರಲು ಉತ್ಸುಕರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಮುಂಬೈ ಮತ್ತು ನಾಗಪುರದಲ್ಲಿ ಅಧಿವೇಶನ ನಡೆಸಲಾಗುತ್ತಿದ್ದು. ಮುಂದೆ ಸುಪ್ರೀಂ ಕೋರ್ಟ್ ಕೇಸ್ ಗೆದ್ದರೆ ಮೂರನೇ ಅಧಿವೇಶನ ಬೆಳಗಾವಿಯಲ್ಲಿ ಮಾಡುತ್ತೇವೆ. ಕರ್ನಾಟಕ ಪೊಲೀಸರನ್ನು ಮುರ್ಖರನ್ನಾಗಿ ಮಾಡಿ ಒಳ ಪ್ರವೇಶಿಸಿದ್ಧೇವೆ ಎಂದು ಹೇಳಿದ್ರು

Check Also

ಕರ್ನಾಟಕ ರಾಜ್ಯೋತ್ಸವ: ನಾಳೆ ಮಂಗಳವಾರ ಪೂರ್ವಭಾವಿ ಸಭೆ

ಬೆಳಗಾವಿ, -ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯನ್ನು ನವಂಬರ್ 1, 2024 ರಂದು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ (ಅಕ್ಟೋಬರ್ 8) ಜಿಲ್ಲಾ ಪಂಚಾಯತ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.