Breaking News

ಪಾಲಿಕೆ ಅಧಿಕಾರಿಗಳ ವಿರುದ್ಧ ಶಾಸಕ ಸೇಠ ಗರಂ

ಬೆಳಗಾವಿ- ಗಣೇಶ ಉತ್ಸವ,ಬಕರೀದ ಹಬ್ಬದ ಸಂಧರ್ಭದಲ್ಲಿ ಪಾಲಿಕೆ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ ಎಂದು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ  ಮಂಡಿಸಿದ ಅಭಿನಂದನಾ ಠರಾವಗೆ ಶಾಸಕ ಫೀರೋಜ್ ಸೇಠ ತೀರ್ವ ವಿರೋಧ ವ್ಯಕ್ತಪಡಿಸಿ ಪಾಲಿಕೆ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ

ಪಾಲಿಕೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಇವರಿಗೆ  ಸಿಸ್ಟಂ ಅನ್ನೋದೆ ಗೊತ್ತಿಲ್ಲ ಕೆಲಸ ಆದ ಮೇಲೆ ವರ್ಕ ಆರ್ಡರ್ ಕೊಡ್ತಾರೆ ಒಂದು ಬಿಲ್ಡಿಂಗ್ ಗೆ ಬೋಲ್ಡೆಜರ್ ಹಚ್ತಾರೆ ಪಕ್ಕದ ಬಿಲ್ಡಿಂಗ್ ನಿಂದ ವಸೂಲಿ ಮಾಡ್ತಾರೆ ಆರು ತಿಂಗಳಾದರೂ ಕಟ್ಟಡ ನಿರ್ಮಾಣದ ಅನುಮತಿ ಸಿಗುತ್ತಿಲ್ಲ ಸರ್ಕಾರ ಸಾಕಷ್ಟು ಅನುದಾನ ಕೊಡುತ್ತಿದ್ದರೂ ಅಧಕಾರಿಗಳು ಖರ್ಚು ಮಾಡುತ್ತಿಲ್ಲ ಅಧಿಕಾರಿಗಳು ಏನು ಘನಂದಾರಿ ಕೆಲಸ ಮಾಡಿದ್ದಾರೆ ಎಂದು ಅಭಿನಂದನೆ ಸಲ್ಲಿಸಬೇಕು ಎಂದು ಶಾಸಕ ಸೇಠ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು

ಬೆಳಗಾವಿ ನೀರು ಸರಬರಾಜು ಮಂಡಳಿಯಲ್ಲಿ ೫೦ ಕೋಟಿ ರೂ ಹಣ ಕೊಳೆಯುತ್ತಿದೆ ಪಸನ್ನಮೂರ್ತಿ ಖರ್ಚು ಮಾಡುತ್ತಿಲ್ಲ ಬೆಳಗಾವಿ ನಗರದಲ್ಲಿ ಸಾವಿರಾರು ಬಡ ಕುಟುಂಬಗಳು ವಾಸವಾಗಿವೆ ಮಹಾಪೌರರು ವಾಟರ್ ಫಾರ್ ಆಲ್ ಎಂದು ಘೋಷನೆ ಮಾಡಬೇಕು ಬಡ ಕುಟುಂಬಗಳಿಗೆ ಉಚಿತವಾಗಿ ನೀರನ ಸಂಪರ್ಕ ಕಲ್ಪಿಸಬೇಕು ಅದಕ್ಕಾ ಪ್ರತ್ಯೆಕ ಸಭೆ ಕರೆಯಬೇಕು ಎಂದು ಶಾಸಕ ಸೇಠ ಒತ್ತಾಯಿಸಿದಾಗ ಮೇಯರ್ ಈ ಕುರಿತು ಚರ್ಚಿಸಲು ಪ್ರತ್ಯೇಕ ಸಭೆ ಕರೆಯುವದಾಗಿ ರೂಲಿಂಗ್ ನೀಡಿದರು

ಪಾಲಕೆಯ ಸಾಮಾನ್ಯ ಸಭೆ ಕರೆಯಲು ಮೇಯರ್ ಹಲವಾರು ಬಾರಿ ಪತ್ರ ಬರೆದರೂ ಯಾವ ಕಾರಣಕ್ಜಾಗಿ ಸಭೆ ಕರೆಯಲಿಲ್ಲ ಎನ್ನುವ ವಿಷಯಯವನ್ನು ನಗರ ಸೇವಕ ರಮೇಶ ಸೊಂಟಕ್ಕಿ ಪ್ರಸ್ತಾಪಿಸಿದಾಗ ಆಡಳಿತ ಹಾಗು ವಿರೋಧಿ ಗುಂಪಿನ ನಡಯವೆ ಮಾತಿನ ಚಕಮಕಿ ನಡೆಯಿತು

 

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *