Breaking News

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕಾ..ಕಾ..ಮಾ..ಮಾ ಕಹಾನಿ.!

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ  ಕಾ ಕಾ ಮಾ ಮಾ ಪ್ರತ್ಯಕ್ಷರಾಗುತ್ತಾರೆ ಇವರಿಬ್ಬರು ಪ್ರತಿ ಸಭೆಯಲ್ಲಿ ಜಗಳಾಡಯತ್ತಾರಯೋ ಅಥವಾ ದೋಸ್ತಿ ಜಗಳವೋ ಅನ್ನೋದು ಆ ಭ್ರಹ್ಮನಿಗೂ ಅರ್ಥ ಆಗುವದಿಲ್ಲ ಈ ಕಾ ಕಾ ಮಾ ಮಾ ಯಾರು ಅಂತೀರಾ ಹಾಗಾದರೆ ಈ ಸುದ್ಧಿ ಓದಿ

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಹಲವಾರು ರೀತಿಯ ಸ್ಪೇಶ್ಯಾಲಿಟಿ ನೋಡಲು ಸಿಗುತ್ತದೆ ಆಡಳಿತ ಪಕ್ಷದ ನಾಯಕ ಒಂಡರಿ ಪರಬ ಸಭೆಯಲ್ಲಿ ಗಂಟೆ ಗಟ್ಟಲೇ ಮಾತಾಡ್ತಾರೆ ನಗರಸೇವಕಿ ಸರಳಾ ಹೇರೇಕರ ತಮ್ಮ ವಾರ್ಡಿನಲ್ಲಿ ಕೆಲಸ ಆಗಿಲ್ಲ ಅಂತಾ ಪ್ರತಿಯೊಂದು ಸಭೆಯಲ್ಲಿ ಕಿರಚಾಡುವದು ಸಾಮಾನ್ಯ

ಕಾಕಾ ಮಾಮಾ ಅಂದರೆ ಯಾರು ಅಂತೀರಾ ಕಾಕಾ ಅಂದ್ರೆ ರಮೇಶ ಸೊಂಟಕ್ಕಿ ಮಾಮಾ ಅಂದ್ರೆ ಕಿರಣ ಸೈನಾಯಕ ಸೈನಾಯಕ ಆಡಳಿತ ಗುಂಪಿನಲ್ಲಿದ್ದರೆ  ರಮೇಶ ವಿರೋಧಿ ಗುಂಪಿನಲ್ಲಿದ್ದಾರೆ ಆದರೆ ಸಾಮಾನ್ಯ ಸಭೆಯಲ್ಲಿ ಇವರಿಬ್ಬರೂ ಆರೋಪ ಪ್ರತ್ಯಾರೋಪ ಮಾಡುತ್ತಾರೆ ಇವರಿಬ್ಬರ ಜಗಳ ನೋಡಿದರೆ ಇದೊಂದು ಮ್ಯಾಚ್ ಫಿಕ್ಸಿಂಗ್ ಅನ್ನೋದು ದಡ್ಡರಿಗೂ ಅರ್ಥ ಆಗುತ್ತದೆ ಕಾ ಕಾ ಮಾ ಮಾ ನ ಜಗಳ ಪಾಲಿಕೆ ಸಭೆಯ ಎಂಟರಟ್ರೇಟಮೆಂಟ ಅನ್ನೋದು ಸತ್ಯ

ಸಭೆಯ ಇನ್ನೊಂದು ಸ್ಪೇಶ್ಯಾಲಿಟಿ ಏನೆಂದರೆ ಶಾಸಕ ಸೇಠ ಮರಾಠಿ  ಕನ್ನಡ ಇಂಗ್ಲೀಷ್ ಮಿಕ್ಸ ಮಾಡಿ ಮಾತಾಡಿದರೆ ಅಧಿಕಾರಿಗಳು ಇಂಗ್ಲೀಷ್ ನಲ್ಲಿಯೇ    ಉತ್ತರ ಕೊಡ್ತಾರೆ ಆಗಾಗ ದೀಪಕ ಜಮಖಂಡಿ ರಮೇಶ ಸೊಂಟಕ್ಕಿಗೆ ಸಾಥ್ ಕೊಟ್ಟರೆ ಗಂಟೆ ಗಟ್ಟಲೇ ಭಾಷಣ ಬಿಗಿಯುವ ಪಂಡರಿ ಪರಬ ಗೆ ಕಿರಣ ಸೈನಾಯಕ್ ಸಾಥ್ ಕೊಡ್ತಾರೆ

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *