Breaking News

ಗಂಡನ ಮರ್ಡರ್ ಮಾಡಿ, ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟ ಖಿಲಾಡಿ ಇವಳೇ..!!

ಮರ್ಡರ್ ಮಾಡಲು ಖಿಲಾಡಿ ಪತ್ನಿಗೆ ಸಾಥ್ ಕೊಟ್ಟವರು

ಬೆಳಗಾವಿ-ಮದುವೆಯಾಗಿದ್ದರೂ ಅನೈತಿಕ ಸಂಬಂಧ ಹೊಂದಿದ್ದ ಖಿಲಾಡಿ ಪತ್ನಿ ಗೆಳೆಯನೊಂದಿಗೆ ಸೇರಿಕೊಂಡು ಪತಿಯನ್ನು ಕೊಲೆ ಮಾಡಿ ಗಂಡ ಕಾಣೆಯಾಗಿದ್ದಾನೆ ಎಂದು ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟ ಪತ್ನಿ ಈಗ ಪೋಲೀಸರ ಬಲೆಗೆ ಬಿದ್ದಿದ್ದಾಳೆ.

ಕಳೆದ ಮೂರು ತಿಂಗಳ ಹಿಂದೆ ನನ್ನ ಪತಿ ಕಾಣೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿ ಈಗ ಖಾಕಿಗೆ ಲಾಕ್ ಆದ ಘಟನೆ ನಡೆದಿದೆ.ಅನೈತಿಕ ಸಂಬಂಧ ಪ್ರಶ್ನೆ ಮಾಡಿದ ಪತಿಯನ್ನೇ ಗೆಳೆಯನೊಂದಿಗೆ ಸೇರಿಕೊಂಡು ಕೊಲೆ ಮಾಡಿ ಕಳೆದ ಮೂರು ತಿಂಗಳು ಹಿಂದೆ ನನ್ನ ಪತಿ ರಮೇಶ ಕಾಂಬಳೆ ಕಾಣೆಯಾಗಿದ್ದಾನೆ ಎಂದು ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ನಾಟಕ ಮಾಡಿದ ಪತ್ನಿಯ ಬಣ ಬಯಲಾಗಿ ಈಗ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಅತಿಥಿಯಾಗಿದ್ದಾರೆ.

ತಮ್ಮ ಅನೈತಿಕ ಸಂಬಂಧ ಪತಿಯ ಎದುರಿಗೆ ಬಯಲಿಗೆ ಬರುತ್ತಿದ್ದಂತೆ ಪತಿಯನ್ನು ಕೊಲೆ ಮಾಡಿ ಶವವನ್ನು ಬೇರೆ ಕಡೆ ಎಸೆದು ಎಪಿಎಂಸಿ ಪೊಲೀಸ್ ಠಾಣೆಗೆ ಕಳೆದ ಮೂರು ತಿಂಗಳ ಹಿಂದೆ ಸಂದ್ಯಾ ಕಾಂಬಳೆ ಕಾಣೆಯಾಗಿದ್ದಾರೆ ನನ್ನ ಪತಿ ಎಂದು ದೂರು ನೀಡಿದ್ದಳು. ಈಗ ಕೊಲೆಯಾಗಿದೆ ಎಂದು ತಿಳಿದ ಕೂಡಲೇ ಎಪಿಎಂಸಿ ಪೊಲೀಸರು ಕಿಲಾಡಿ ಪತ್ನಿ ಸಂದ್ಯಾ, ಆಕೆಯ ಗೆಳೆಯ ಬಾಳು ಬಿರಂಜೆ ಸೇರಿದಂತೆ ಅವರಿಗೆ ಸಹಕರಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಮೇಲ್ನೋಟಕ್ಕೆ ಇದು ಅನೈತಿಕ ಸಂಬಂಧದ ಕೊಲೆ ಎಂದು ಶಂಕಿಸಿರುವ ಪೊಲೀಸರು ರಮೇಶ ಶವ ಹುಡುಕಾಟ ನಡೆಸಿದ್ದಾರೆ. ಈ ಕುರಿತು ಎಪಿಎಂಸಿ ‌ಪೊಲೀಸರು ತನಿಖೆ ನಡೆಸಿದ್ದಾರೆ.

Check Also

ಆಸ್ಪತ್ರೆ ಉದ್ಘಾಟನೆ ಮಾಡಿ,ಡೆಸ್ಕ್ ಖರೀಧಿ ಮಾಡಿ,ಡೆಂಗ್ಯು ಕಂಟ್ರೋಲ್ ಮಾಡಿ….!!

  ಚಿಕ್ಕೋಡಿ‌ ತಾಯಿ ಮಕ್ಕಳ ಆಸ್ಪತ್ರೆ ಶೀಘ್ರ ಲೋಕಾರ್ಪಣೆಗೆ ಕ್ರಮ‌ ಜರುಗಿಸಿ: ಸಚಿವ ಸತೀಶ ಜಾರಕಿಹೊಳಿ ಬೆಳಗಾವಿ- ಜು.12: ಚಿಕ್ಕೋಡಿಯಲ್ಲಿ …

Leave a Reply

Your email address will not be published. Required fields are marked *