ಬೆಳಗಾವಿ -ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಾಲೇಜು ಆವರಣದಲ್ಲಿ,ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪಿಸಲು ವ್ಯಯಕ್ತಿಕವಾಗಿ ಆರ್ಥಿಕ ಸಹಾಯ ಮಾಡಿದ,ಮಾಜಿ ಸಚಿವ ಹೆಚ್ ಎಂ ರೇವಣ್ಣ ಅವರಿಗೆ ಬೆಳಗಾವಿಯ ಗಡ್ಡೆ ಸಹೋದರರು ಸತ್ಕರಿಸಿ ಗೌರವಿಸಿದರು.
ಮಾಜಿ ಸಚಿವರಾದ ಹೆಚ್ ಎಂ ರೇವಣ್ಣ,ಹಾಗೂ ಹೆಚ್ ವಿಶ್ವನಾಥ ಅವರು ಇಂದು ಗಡ್ಡೆ ಡೆವಲಪರ್ಸ್ ಕಚೇರಿಗೆ ಭೇಟಿ ನೀಡಿದ ಸಂಧರ್ಭದಲ್ಲಿ ಸುಧೀರ್ ಗಡ್ಡೆ ,ಮತ್ತು ತುಷಾರ್ ಗಡ್ಡೆ ಅವರು ಇಬ್ಬರು ಮಾಜಿ ಸಚಿವರನ್ನು ಸತ್ಕರಿಸಿ ಗೌರವಿಸಿ ಅವರ ಸೇವೆಯನ್ನು ಕೊಂಡಾಡಿದರು.
ಇಬ್ಬರು ಮಾಜಿ ಸಚಿವರಿಗೆ ಸತ್ಕರಿಸಿ ಮಾತಮಾಡಿದ ಸುಧೀರ ಗಡ್ಡೆ, ಹಾಲುಮತ ಸಮಾಜಕ್ಕೆ ಹೆಚ್ ಎಂ ರೇವಣ್ಣ,ಹಾಗೂ ಹೆಚ್ ವಿಶ್ವನಾಥ ಅವರ ಕೊಡುಗೆ ಅಪಾರ,ಅವರ ಸೇವೆಯನ್ನು ಸಮಾಜ ಎಂದಿಗೂ ಮರೆಯಲು ಸಾಧ್ಯವಿಲ್ಲ.ಬೆಳಗಾವಿ ಜಿಲ್ಲೆಯ ಸಂಗೊಳ್ಳಿ ಗ್ರಾಮದಲ್ಲಿ ಹೆಚ್ ಎಂ ರೇವಣ್ಣ ಅವರ ಪ್ರಯತ್ನ ಮತ್ತು ಶ್ರಮದಿಂದಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಸತಿ ಶಾಲೆ ನಿರ್ಮಾಣವಾಗಿದ್ದು,ಈ ಶಾಲೆ ರಾಷ್ಟ್ರಕ್ಕೆ ಮಾದರಿಯಾಗಲಿದೆ.ಹೆಚ್ ಎಂ ರೇವಣ್ಣ ಅವರು ಬೆಳಗಾವಿ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪಿಸಲು ಆರ್ಥಿಕ ಸಹಾಯ ಮಾಡುವ ಮೂಲಕ ಇತರ ನಾಯಕರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಹಾಲುಮತ ಸಮಾಜದ ಬೆಳಗಾವಿ ಜಿಲ್ಲೆಯ ಮುಖಂಡರು ಉಪಸ್ಥಿತರಿದ್ದರು.