Breaking News

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮೊಳಗಿದ ನಾಡಗೀತೆ…!!!!

ಬೆಳಗಾವಿ-ಕನ್ನಡ- ಮರಾಠಿ ವಾಗ್ವಾದ,ಎಂಇಎಸ್ ಪುಂಡಾಟಿಕೆಗೆ ಗುರಿಯಾಗುತ್ತಿದ್ದ ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯಸಭೆಯಲ್ಲಿ ಇಂದು ಪಾಲಿಕೆಯ ಇತಿಹಾಸದಲ್ಲಿ ಎರಡನೇಯ ಬಾರಿಗೆ ನಾಡಗೀತೆ ಮೊಳಗಿತು.

ಇಂದು ಪಾಲಿಕೆಯ ಸಾಮಾನ್ಯಸಭೆಯಲ್ಲಿ ಮಹಾಪೌರ ಶೋಭಾ ಸೋಮನ್ನಾಚೆ ಅವರ ಸೂಚನೆ ಮೇರೆಗೆ ನಾಡಗೀತೆಯನ್ನು ನುಡಿಸಲಾಯಿತು ಎಂಇಎಸ್ ನಗರಸೇವಕರು ಸೇರಿದಂತೆ ಎಲ್ಲ ನಗರ ಸೇವಕರು ಎದ್ದು ನಿಂತು ಗೌರವ ಸಲ್ಲಿಸಿದ್ದು ಇಂದು ನಡೆದ ಪಾಲಿಕೆ ಸಾಮಾನ್ಯ ಸಭೆಯ ವಿಶೇಷ.

ಎಂಇಎಸ್ ಕಿರಿಕ್…

ಪಾಲಿಕೆ ಸಭೆಯಲ್ಲಿ ನಾಡಗೀತೆ ಮುಗಿದ ಬಳಿಕ ಎಂಇಎಸ್ ನ ಮೂರು ಜನ ನಗರ ಸೇವಕರು ಮಹಾಪೌರರ ವೇದಿಕೆ ಎದುರು ಕುಳಿತು ಧರಣಿ ನಡೆಸಿ ಮರಾಠಿ ಭಾಷೆಯಲ್ಲಿ ನೋಟಿಸ್ ಸೇರಿದಂತೆ ಇತರ ಕಾಗದಪತ್ರಗಳನ್ನು ಕೊಡುವಂತೆ ಮತ್ತೆ ಪುಂಡಾಟಿಕೆ ನಡೆಸಿದ್ರು.

ಈ ವಿಚಾರವಾಗಿ ಅಡಳಿತಾರೂಢ ಬಿಜೆಪಿ ನಗರಸೇವಕರು ಮತ್ತು ಕಾಂಗ್ರೆಸ್ ನಗರಸೇವಕರ ನಡುವೆ ಮಾತಿನ ಚಕಮಕಿ ನಡೆಯಿತು.ಎಂಇಎಸ್ ನಗರ ಸೇವಕರು ಮಹಾಪೌರರಿಗೆ ಏಕವಚನದಲ್ಲಿ ಮಾತನಾಡುವದು ಸರಿಯಲ್ಲ,ಅವರು ಮೊದಲು ಗೌರವ ಕೊಡುವದನ್ನು ಕಲಿಯಲಿ ಎಂದು ತರಾಟೆಗೆ ತೆಗೆದುಕೊಂಡರು.

ಕನ್ನಡ ಹೊರತುಪಡಿಸಿ ಇತರ ಭಾಷೆಯಲ್ಲಿ ಕಾಗದಪತ್ರಗಳನ್ನು ನೀಡಲು ಕಾನೂನಿನಲ್ಲಿ ಅವಕಾಶ ಇದೆಯೋ ? ಇಲ್ಲವೋ ಅನ್ನೋದರ ಬಗ್ಗೆ ಸುಧೀರ್ಘ ಚರ್ಚೆ ನಡೆಯಿತು ಈ ಸಂಧರ್ಭದಲ್ಲಿ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ರಾಜು ಸೇಠ,ಮತ್ತು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರ ನಡುವೆ ಮಾತಿನ ಸಂಘರ್ಷ ನಡೆಯಿತು.

ಕನ್ನಡ ಭಾಷೆ ಹೊರತು ಪಡಿಸಿ ಬೇರೆ ಭಾಷೆಯಲ್ಲಿ ಪಾಲಿಕೆಯ ನೋಟೀಸ್ ಸೇರಿದಂತೆ ಇತರ ಕಾಗದಪತ್ರಗಳನ್ನು ನೀಡಲು ಅವಕಾಶ ಇಲ್ಲ,ಎಂದು ಅಧಿಕಾರಿಗಳು ಸ್ಪಷ್ಟೀಕರಣ ನೀಡಿದ ಬಳಿಕ ಮಧ್ಯಪ್ರವೇಶಿಸಿ ಮಾತನಾಡಿದ ಮಹಾಪೌರ ಶೋಭಾ ಸೋಮನ್ನಾಚೆ.ಪಾಲಿಕೆಯಲ್ಲಿ ಮರಾಠಿ ಭಾಷೆಯಲ್ಲಿ ಸಭೆಯ ನೋಟೀಸ್ ಕೊಡುವ ಸಂಪ್ರದಾಯ ಇದೆ,ಈ ಸಂಪ್ರದಾಯ ಮುಂದುವರೆಸುವಂತೆ ರೂಲೀಂಗ್ ಕೊಟ್ಟ ಬಳಿಕ ಎಂಇಎಸ್ ನಡೆಸುತ್ತಿದ್ದ ಧರಣಿ ಅಂತ್ಯಗೊಂಡಿತು

ಸಭೆಯ ಅಜೇಂಡಾದಲ್ಲಿ ಇರುವ ವಿಷಯಗಳನ್ನು ಮಹಾಪೌರ ಶೋಭಾ ಸೋಮನ್ನಾಚೆ ಅವರು ಕನ್ನಡದಲ್ಲೇ ಓದಿದ್ದು ಪ್ರಶಂಸನೀಯ.

ರಾಮತೀರ್ಥ ನಗರವನ್ನು ಬುಡಾದಿಂದ ಪಾಲಿಕೆಗೆ ಹಸ್ತಾಂತರಿಸುವುದು, ಬೆಳಗಾವಿ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳ ಅಘೋಷಿತ ಕೊಳಚೆ ಪ್ರದೇಶಗಳನ್ನು ಘೋಷಿತ ಕೊಳಚೆ ಪ್ರದೇಶಗಳೆಂದು ಘೋಷಿಸುವುದು, ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ, ಶ್ರೀನಗರದಲ್ಲಿ ಅನುಭವ ಮಂಟಪದ ಬಳಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ ಕಾಮಗಾರಿ ಕೈಬಿಟ್ಟು, ಅಲ್ಲಿ ಉದ್ಯಾನ ನಿರ್ಮಿಸುವುದು, ಕುಡಿಯುವ ನೀರಿನ ಸಮಸ್ಯೆ ನಿವಾರಣೆ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ‌ ಸಮಿತಿಗಳಿಗೆ ಪಾಲಿಕೆ ನಾಮನಿರ್ದೇಶಿತ ಸದಸ್ಯರ ನೇಮಕ, ಕುಡಿಯುವ ನೀರಿನ ಬವಣೆ ನೀಗಿಸುವುದು ಮೊದಲಾದ ವಿಷಯಗಳ ಕುರಿತಾಗಿ ಚರ್ಚಿಸಿ, ಠರಾವು ಪಾಸ್ ಮಾಡಲಾಯಿತು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *