Breaking News

ಬೆಳಗಾವಿಯಲ್ಲಿ ಇಂದು ಪತ್ತೆಯಾದ ಎರಡು ಶವಗಳ ಕಣ್ಣೀರ ಕಹಾನಿ….!!

ಬೆಳಗಾವಿ- ಇವತ್ತು ಬೆಳಗ್ಗೆ ಬೆಳಗಾವಿಯ ಕಪಿಲೇಶ್ವರ ಹೊಂಡದಲ್ಲಿ ಎರಡು ಶವಗಳು ಪತ್ತೆಯಾಗಿದ್ದು ಎರಡೂ ಶವಗಳ ಗುರುತು ಪತ್ತೆಯಾಗಿದೆ.ಸತ್ತವರು ಇಬ್ಬರೂ ಬೇರೆ,ಬೇರೆ,ಇವರಿಬ್ಬರ ಸಾವಿಗೆ ಕಾರಣ ಬೇರೆ ಬೇರೆ ಇದ್ದರೂ ಇಬ್ಬರೂ ಪ್ರತ್ಯೇಕವಾಗಿ ಒಂದೇ ಹೊಂಡಕ್ಕೆ ಹಾರಿ ಪ್ರಾಣ ಬಿಟ್ಟಿರುವ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ.

ಪತ್ನಿ ತೀರೀಕೊಂಡಿದ್ದಕ್ಕೆ ನೊಂದ ಪತಿ ಹೊಂಡಕ್ಕೆ ಹಾರಿ ಪ್ರಾಣ ಬಿಟ್ಟರೆ,ತಾಯಿ ತೀರಿಕೊಂಡು ನೊಂದ ಮಗಳೂ ಸಹ ಅದೇ ಹೊಂಡಕ್ಕೆ ಹಾರಿ ಪ್ರಾಣ ಬಿಟ್ಟಿದ್ದಾಳೆ. ಇಬ್ಬರ ಶವಗಳು ಇಂದು ಬೆಳಗ್ಗೆ ಒಂದೇ ಹೊಂಡದಲ್ಲಿ ಪತ್ತೆಯಾಗಿವೆ.

ಈ ಸಂಬಂಧಗಳು ಅಂದ್ರನೇ ಹಾಗೆ ತೀರ ಪ್ರೀತಿಸುವ ತೀರ ಹಚ್ಚಿಕೊಂಡ ಹೃದಯಗಳು ಸಂಬಂಧಗಳು ಅಕಾಲಿಕಾವಾಗಿ‌ ನಮ್ಮೊಂದಿಗೆ ಇಲ್ಲ ಅಂದಾಗ ಜೀವಂತವಾಗಿದ್ದವರ ಕಾಲ್ಗೆಳಗಿನ ಭೂಮಿ ಕುಸಿದ ಅನುಭವ ಆಗಿಬಿಡುತ್ತೆ.. ಇಲ್ಲಿ ಹೆಂಡತಿಯ ನೆನಪಲ್ಲಿ ಗಂಡ ಮತ್ತು ತಾಯಿಯ ನೆನಪಲ್ಲಿ ಮಗಳು ತೀರಿ ಹೋಗಿದ್ದು ಅಮಾವಾಸ್ಯೆಯ ದಿನವೇ ಘೋರ ದುರಂತ ನಡೆದು ಹೋಗಿದೆ..

ತಾಯಿ ಕಳೆದುಕೊಂಡ ಮಗಳು ಕಪಿಲೇಶ್ವರ ಹೊಂಡಕ್ಕೆ ಹಾರಿ ಬಿಟ್ಟಳು ಪ್ರಾಣ!!

ಪತ್ನಿ ಕಳೆದುಕೊಂಡ ಪತಿಯೂ ಸಹ ಅದೇ ಹೊಂಡಕ್ಕೆ ಬಿದ್ದು ಬಿಟ್ಟ ಪ್ರಾಣ!!

ಕಾಕತಾಳಿಯವೆಂಬಂತೇ ಒಂದೇ ಸಲ ಸಿಕ್ಕವು ಎರಡೂ ಮೃತ ದೇಹಗಳು!!

ಇಂದು ಶ್ರಾವನ ಸೋಮವಾರದ ಅಮವಾಸ್ಯೆ ನಿತ್ಯ ಭಕ್ತರು ದೇವಸ್ಥಾನಗಳಿಗೆ ಬರೋದು ಪೂಜೆ ಪುನಸ್ಕಾರಗಳಲ್ಲಿ ತೊಡಗೋದು ಕಾಮನ್ ಆದರೆ ಬೆಳಗಾವಿಯ ಕಪಿಲೇಶ್ವರ ದೇವಸ್ಥಾನಕ್ಕೆ ಬಂದ ಭಕ್ತರು ಇಂದು ಶಾಕ್ ಗೆ ಒಳಗಾಗಿದ್ದರು. ಕಪಿಲೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಹೊಂಡದಲ್ಲಿ ಎರಡು ಮೃತ ದೇಹಗಳು ತೇಲುತ್ತಿದ್ದವು. ಮೊದಲಿಗೆ ಇದು ಇಬ್ಬರೂ ಸೇರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಭಾಸವಾಗಿದ್ದರೂ ಸಹ ಇಬ್ಬರದ್ದರೂ ಸಹ ಬೇರೆ ಬೇರೆ ಕಾರಣಕ್ಕೆ ಸಾವಾಗಿದೆ ಎನ್ನುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ತಾಯಿ ತೀರಿ ಹೋಗಿದ್ದರಿಂದ ಖಿನ್ನತೆಗೆ ಒಳಗಾಗಿ ಮಾನಸಿಕವಾಗಿ ಅಸ್ವಸ್ಥವಾಗಿದ್ದ ಚಿತ್ರಲೇಖಾ ಸಫಾರ್ ತಾಯಿಯ ನೆನಪಿನಲ್ಲಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಶಹಾಪುರದ ದಾನೆ ಗಲ್ಲಿಯಲ್ಲಿ ಚಿತ್ರಲೇಖಾ ವಾಸವಿದ್ದರು ಎಂದು ತಿಳಿದು ಬಂದಿದೆ. ಅಲ್ಲದೆ ಸಾವಿನ ಕಾರಣವನ್ನು ಮಾಧ್ಯಮಗಳಿಗೆ ಕುಟುಂಬಸ್ಥರು ತಿಳಿಸಿದ್ದಾರೆ..

ಇನ್ನು ಬೆಳಗಾವಿಯ ಕಾಂಗಲೇ ಗಲ್ಲಿಯ ನಿವಾಸಿ ವಿಜಯ್ ಪವಾರ್ ತಮ್ಮ‌ ಹೆಂಡತಿ ತೀರಿ ಹೋಗಿದ್ದರಿಂದ ಮಾನಸಿಕವಾಗಿ ಅಸ್ವಸ್ಥರಾಗಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ವಿಜಯ್ ಪತ್ನಿ ಮೃತಪಟ್ಟಿದ್ದರು.‌ನಿನ್ನೆ ರಾತ್ರಿ ಮನೆ ಬಿಟ್ಟು ಹೋದ ವಿಜಯ್ ಬೆಳಗ್ಗೆ ಕಪಿಲೇಶ್ವರ ಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತ ವಿಜಯ್ ಪವಾರಗೆ ಒಬ್ಬ ಪುತ್ರ ಮತ್ತು ಒಬ್ಬಳು ಪುತ್ರಿ ಇದ್ದಾರೆ.

ಒಟ್ಟಿನಲ್ಲಿ ತಾಯಿ ಹಾಗೂ ಹೆಂಡತಿಯ ಸಂಬಂಧಗಳಿಂದ ದೂರವಾದ ಎರಡು ಮುಗ್ದ ಜೀವಗಳು ಅವರ ನೆನಪಿನಲ್ಲಿಯೇ ಪ್ರಾಣ ತೆತ್ತಿದ್ದು ನಿಜಕ್ಕೂ ದುರಂತವೇ ಸರಿ ಆದರೆ ತೀರಿ ಹೋದ ಇವರ ನೆನಪಲ್ಲಿ ಈಗ ಮನೆಯವರು ಕೊರಗುವ ಪರಿಸ್ಥಿತಿ ನಿರ್ಮಾಣವಾಗಿದೆ.

Check Also

ಗುರುವಾರ ಬೆಳಗಾವಿಗೆ ಕೇಂದ್ರ ರೇಲ್ವೆ ಸಚಿವ ಸೋಮಣ್ಣ

ಬೆಳಗಾವಿ -ಗುರುವಾರ ದಿನಾಂಕ 14 ರಂದು ಕೇಂದ್ರದ ರಾಜ್ಯ ರೇಲ್ವೆ ಸಚಿವ ವಿ.ಸೋಮಣ್ಣ ಅವರು ಬೆಳಗಾವಿಗೆ ಬರಲಿದ್ದಾರೆ. ಬೆಳಗ್ಗೆ 9 …

Leave a Reply

Your email address will not be published. Required fields are marked *