Breaking News

ಎರಡು ಗುಂಪುಗಳ ನಡುವೆ ಗಲಾಟೆ,ಪೋಲೀಸರ ದೌಡು…

ಖಾನಾಪೂರ-ಎರಡು ಗುಂಪುಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿರುವ ಘಟನೆ,ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ನಡೆದಿದೆ.

ನಿನ್ನೆ ಸಂಜೆ ಕ್ಷುಲ್ಲಕ ಕಾರಣಕ್ಕೆ ಯುವಕರ ಮಧ್ಯೆ ನಡೆದಿದ್ದ ಗಲಾಟೆ ನಡೆದಿದೆ.ನಡೆದುಕೊಂಡು ಹೋಗುವಾಗ ಕೈ ತಾಗಿದಕ್ಕೆ ಯುವಕರ ಮಧ್ಯೆ ಗಲಾಟೆ ಆಗಿದೆ. ಹಿರಿಯರು ಯುವಕರನ್ನು ಮನವೊಲಿಸಿ ಗಲಾಟೆಯನ್ನು ನಿಯಂತ್ರಿಸಿದ್ದರು.

ಸಂಜೆ ಆಗ್ತಿದ್ದಂತೆ ಒಂದು ಗುಂಪಿನ ಯುವಕರ ಕಾಲನಿಗೆ ಹೋಗಿ ಮತ್ತೊಂದು ಗುಂಪಿನವರ ಜೊತೆ ಗಲಾಟೆ ಮಾಡಿದ್ದಾರೆ.ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಶಾಸಕ ವಿಠ್ಠಲ ಹಲಗೇಕರ ಶಾಂತಿ ಸಭೆ ನಡೆಸಿದ್ದರು.

ಸಭೆಯ ಆರಂಭಕ್ಕೂ ಮುನ್ನವೇ ಕಿಡಿಗೇಡಿಗಳಿಂದ ಕಲ್ಲು ತೂರಾಟ ನಡೆದಿತ್ತು.ಪರಿಸ್ಥಿತಿ ಹತೋಟಿಗೆ ತರಲು ಖಾನಾಪುರ ಪೋಲೀಸರ ಹರಾಹಸ ಪಟ್ಟಿದ್ದರು.ಸ್ಥಳದಲ್ಲಿ ಎರಡು ಪೊಲೀಸ್ ಡಿಆರ್ ವಾಹನಗಳ ನಿಯೋಜನೆ ಮಾಡಲಾಗಿದೆ.ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಜೆಡಿ ಶಶಿಧರ ಬಬಲಿ ಭೇಟಿ ನೀಡಿದ್ದಾರೆ.

Check Also

ಗುರುವಾರ ಬೆಳಗಾವಿಗೆ ಕೇಂದ್ರ ರೇಲ್ವೆ ಸಚಿವ ಸೋಮಣ್ಣ

ಬೆಳಗಾವಿ -ಗುರುವಾರ ದಿನಾಂಕ 14 ರಂದು ಕೇಂದ್ರದ ರಾಜ್ಯ ರೇಲ್ವೆ ಸಚಿವ ವಿ.ಸೋಮಣ್ಣ ಅವರು ಬೆಳಗಾವಿಗೆ ಬರಲಿದ್ದಾರೆ. ಬೆಳಗ್ಗೆ 9 …

Leave a Reply

Your email address will not be published. Required fields are marked *