Breaking News

ಬೆಳಗಾವಿ, ಎಪಿಎಂಸಿ- ಜೈ ಕಿಸಾನ್ ಮಾರುಕಟ್ಟೆಯ ವರ್ತಕರ ಸಭೆ —–

ವಹಿವಾಟು ಸುಗಮಗೊಳಿಸಲು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸಲಹೆ

ಬೆಳಗಾವಿ, ): ನಗರದ ಎ.ಪಿ.ಎಂ.ಸಿ ಹಾಗೂ ಜೈಕಿಸಾನ್ ಎರಡೂ ಸಗಟು ಮಾರುಕಟ್ಟೆಗಳಲ್ಲಿ ವ್ಯಾಪಾರ-ವಹಿವಾಟುಗಳನ್ನು ನಡೆಸಲು ಅವಕಾಶವಿದ್ದು, ವರ್ತಕರ ಸಂಘದವರು ಪರಸ್ಪರ ಚರ್ಚಿಸಿಕೊಂಡು ಸುಗಮವಾಗಿ ವಹಿವಾಟು ನಡೆಸಿಕೊಂಡ ಹೋಗಬೇಕು ಎಂದು ಜಿಲ್ಲಾಧಿಕಾರಿ ನೀತೇಶ್ ಪಾಟೀಲ ಅವರು ಸಲಹೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ (ಅ.10) ಏರ್ಪಡಿಸಲಾಗಿದ್ದ ಎಪಿಎಂಸಿ ಹಾಗೂ ಜೈ ಕಿಸಾನ್ ತರಕಾರಿ ಮಾರುಕಟ್ಟೆಗಳ ವರ್ತಕರ ಸಂಘದ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

ಟ್ರಾಫಿಕ್ ಸಮಸ್ಯೆ, ವ್ಯಾಪಾರ ವಹಿವಾಟು ಕುಂಠಿತ, ರೈತರು ಮಾರುಕಟ್ಟೆಗೆ ಬರದೇ ಇರುವ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳು ತಮ್ಮ ಗಮನಕ್ಕಿದ್ದು, ಇವುಗಳನ್ನು ಶೀಘ್ರವಾಗಿ ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಎರಡು ಮಾರುಕಟ್ಟೆಯ ವ್ಯಾಪಾರಸ್ಥರು ಪರಸ್ಪರ ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಬೇಕು. ನಂತರವೂ ಉಳಿದ ಸಮಸ್ಯೆಗಳು ಇತ್ಯರ್ಥವಾಗದಿದ್ದಲ್ಲಿ ಇನ್ನೊಂದು ಬಾರಿ ಸಚಿವರು ಹಾಗೂ ಶಾಸಕರ ಸಮ್ಮುಖದಲ್ಲಿ ಸಭೆ ನಡೆಸಿ ಸಮಸ್ಯೆಯನ್ನು ಇತ್ಯರ್ಥಗೊಳಿಸೋಣ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್ಷಲ್ ಬೋಯರ್, ನಗರದ ಎಪಿಎಂಸಿ ಹಾಗೂ ವ್ಯಾಪಾರಸ್ಥರು ಹಾಗೂ ಜೈ ಕಿಸಾನ್ ಮಾರುಕಟ್ಟೆಯ ವ್ಯಾಪಾರಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.
****

Check Also

ಮದ್ಯರಾತ್ರಿ ಸಾರಾಯಿ ಹುಡುಕಾಡದಿದ್ದರೆ ಅವರು ಸಿಗುತ್ತಿರಲಿಲ್ಲ……!!

ವೈನ್ ಇಸ್ ಇನ್…ಮೈಂಡ್ ಇಸ್ ಔಟ್ ಆತ ಹೇಳ್ತಾರೆ ಅದು ಸತ್ಯ…. ಆತ ಕಂಠಪೂರ್ತಿ ಕುಡುದಿದ್ದ ಬೆಳಗಾವಿಗೆ ಬರಲು ಬಸ್ …

Leave a Reply

Your email address will not be published. Required fields are marked *