Breaking News
Home / Breaking News / ನಿಗಮ ಬೆಳಗಾವಿ ಜಿಲ್ಲೆಯ ಕೈ ಶಾಸಕರಿಗೆ ದಾರಿ ಸುಗಮ….!!

ನಿಗಮ ಬೆಳಗಾವಿ ಜಿಲ್ಲೆಯ ಕೈ ಶಾಸಕರಿಗೆ ದಾರಿ ಸುಗಮ….!!

ಬೆಳಗಾವಿ- ಮಕರ ಸಂಕ್ರಾಂತಿಯ ಸಂಭ್ರಮದ ಹೊಸ್ತಿಲಲ್ಲಿ ಬೆಳಗಾವಿ ಜಿಲ್ಲೆಯ ಕೆಲವು ಕಾಂಗ್ರೆಸ್ ಶಾಸಕರಿಗೆ ನಿಗಮ ಮಂಡಳಿಗಳು ದಕ್ಕುವುದು ಖಚಿತವಾಗಿದೆ. ಚಿಕ್ಕೋಡಿ ಸದಲಗಾ ಶಾಸಕ ಗಣೇಶ ಹುಕ್ಕೇರಿ,ಕಾಗವಾಡ ಶಾಸಕ ರಾಜು ಕಾಗೆ ಮತ್ತು ಬೈಲಹೊಂಗಲದ ಶಾಸಕ ಮಹಾಂತೇಶ್ ಕೌಜಲಗಿ ಅವರಿಗೆ ಈ ಬಾರಿ ನಿಗಮಗಳಿಗೆ ದಾರಿ ಸುಗಮವಾಗಿದೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ.

ಒಳ್ಳೆಯ ನಿಗಮ ಸಿಕ್ರೆ ಮಾಡ್ತೀನಿ,ಇಲ್ಲಾ ಅಂದ್ರೆ ಶಾಸಕನಾಗಿ ಸೇವೆ ಮಾಡ್ತೀನಿ ಎಂದು ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ ಅವರು ಪಕ್ಷದ ನಾಯಕರಿಗೆ ಸಂದೇಶ ರವಾನಿಸಿದ್ದಾರೆ ಎಂದು ತಿಳಿದು ಬಂದಿದ್ದು ಗಣೇಶ್ ಹುಕ್ಕೇರಿ ಮತ್ತು ರಾಜು ಕಾಗೆ ಅವರಿಗೆ ಉತ್ತಮ ನಿಗಮಗಳು ಸಿಗಬಹುದು ಜೊತೆಗೆ ಇನ್ನೂ ಅನೇಕ ಜನ ಕಾಂಗ್ರೆಸ್ ನಾಯಕರುಗಳು ನಿಗಮ ಮಂಡಳಿಗಳನ್ನು ಪಡೆಯಲು ಬಿರುಸಿನ ಕಸರತ್ತು ನಡೆಸಿದ್ದಾರೆ.

ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ಅವರಿಗೆ KSRTC ನಿಗಮ,ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರಿಯ ಕಾಂಗ್ರೆಸ್ ಮುಖಂಡ,ಮರಾಠಿ ಸಮಾಜದ ನಾಯಕ ಯುವರಾಜ್ ಕದಂ ಅವರಿಗೆ ಕಾಡಾ ಸಿಕ್ಕಿದೆ ಎನ್ನುವ ಸುದ್ದಿ ಕಾಂಗ್ರೆಸ್ ವಲಯದಲ್ಲಿ ಸದ್ದು ಮಾಡುತ್ತಿದೆ.

ಕಾಂಗ್ರೆಸ್ ಮುಖಂಡ ಸುನೀಲ ಹನಮಣ್ಣವರ ಅವರಿಗಾಗಿ ವಿಶೇಷವಾದ ನಿಗಮ ಸ್ಥಾಪಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.ಆ ನಿಗಮಕ್ಕೆ ದಾರಿಯನ್ನು ಸುನೀಲ ಹನಮಣ್ಣವರ್ ಅವರೇ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದು ಹೇಳಲಾಗುತ್ತಿದೆ.ಬೆಳಗಾವಿ ತಾಲ್ಲೂಕು ಪಂಚಾಯತಿಯ ಮಾಜಿ ಅಧ್ಯಕ್ಷ ಶಂಕರಗೌಡ ಪಾಟೀಲ ಅಡಿವೇಶ ಇಟಗಿ, ಶ್ರೀಕಾಂತ ಮಧು ಭರಮಣ್ಣವರ ಹಾಗು ಬಸವರಾಜ್ ಮ್ಯಾಗೋಟಿ ಅವರೂ ಸಹ ನಿಮಗ ಮಂಡಳಿಗಳಲ್ಲಿ ಸ್ಥಾನ ಪಡೆಯಲು ಪ್ರಯತ್ನ ನಡೆಸಿದ್ದು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಈ ಬಾರಿಯೂ ಮರಾಠಿ ಸಮುದಾಯದ ನಾಯಕ ಯುವರಾಜ್ ಕದಂ ಅವರಿಗೆ ಮಣೆ ಹಾಕಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಬೆಳಗಾವಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ ಎಂ.ಜೆ ಅವರಿಗೆ ಎರಡನೇಯ ಲಿಸ್ಟ್ ನಲ್ಲಿ ವಿಶೇಷವಾದ ಸ್ಥಾನಮಾನ ಸಿಗೋದು ಖಚಿತವಾಗಿದೆ.ನಾಳೆ ಸೋಮವಾರ ನಿಗಮ ಮಂಡಳಿಗಳ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆ ಇದೆ‌. ಆದ್ರೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ವಿದೇಶಿ ಪ್ರವಾಸದಲ್ಲಿದ್ದು ನಿಗಮ ಮಂಡಳಿಗಳ ಆಕಾಂಕ್ಷಿಗಳು ಬೆಂಗಳೂರು,ದೆಹಲಿ ಮಟ್ಟದಲ್ಲಿ ಲಾಬಿ ನಡೆಸಿದ್ದಾರೆ.ನಾಳೆ ಪಟ್ಟಿ ಬಿಡುಗಡೆಯಾದ ಬಳಿಕವೇ ಯಾರಿಗೆ ಯಾವ ಸ್ಥಾನ ಸಿಕ್ಕಿದೆ ಅನ್ನೋದು ದೃಡವಾಗಲಿದೆ.ಪಟ್ಟಿ ಬಿಡುಗಡೆ ಆಗೋವರೆಗೂ ಗಾಳಿ ಸುದ್ದಿಗಳ ಭರಾಟೆ ಮುಂದುರೆಯಲಿದೆ.

Check Also

ಶಾಸಕ ರಾಜು ಕಾಗೆ ಅವರಿಗೆ ನೋಟೀಸ್ ಜಾರಿ..

ವಿವಾದಾತ್ಮಕ ಹೇಳಿಕೆ ಶಾಸಕರಾದ ರಾಜು ಕಾಗೆ ಅವರಿಗೆ ನೋಟಿಸ್ ಜಾರಿ ಚಿಕ್ಕೋಡಿ (ಮೇ.1) ಕಾಗವಾಡ ಶಾಸಕರಾದ ರಾಜು ಕಾಗೆ ಅವರು …

Leave a Reply

Your email address will not be published. Required fields are marked *