Breaking News

ನಿಮ್ಮ ಸಹಾಯಕ್ಕೆ ನಮ್ಮ ಸಲಾಂ…..!!!

ಬೆಳಗಾವಿ: ಅನಾರೋಗ್ಯದಿಂದ ಸಾವನ್ನಪ್ಪಿದ ಮಗನ ಅಂತ್ಯಕ್ರಿಯೆಗೆ ದುಡ್ಡಿಲ್ಲದೇ ಪರದಾಡುತ್ತಿದ್ದ ತಾಯಿಗೆ ಬೆಳಗಾವಿಯ ವಿಜಯ ಮೋರೆ ಅವರ ಯಂಗ್ ಬೆಲಗಾಮ್ ಫೌಂಡೇಶನ್ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದೆ.

ಹೌದು ಸವದತ್ತಿ ತಾಲ್ಲೂಕಿನ ಮರುಕುಂಬಿ ಗ್ರಾಮದ ವಿಶ್ವನಾಥ ಶಿವಲಿಂಗಪ್ಪ ಗುರಕ್ಕನವರ(34) ಅನಾರೋಗ್ಯದಿಂದ ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ಅನಾರೋಗ್ಯದಿಂದ ಮೃತರಾಗಿದ್ದರು. ಈ ವೇಳೆ ಮೃತ ವಿಶ್ವನಾಥ ತಾಯಿ‌ ನೀಲವ್ವ ದಿಕ್ಕೆ ತೋಚದಂತಾಗಿ ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಆಗ ಸಹಾಯಕ್ಕೆ ಬಂದಿದ್ದೆ ಯಂಗ್ ಬೆಲಗಾಮ್ ಫೌಂಡೇಶನ್. ಮಗನ ಕಳೆದುಕೊಂಡು ನೋವಿನಲ್ಲಿದ್ದ ಆ ಅಜ್ಜಿಗೆ ಸಾಂತ್ವನ ಹೇಳಿ ನಿಮ್ಮ ಜೊತೆ ನಾವಿದ್ದೇವೆ. ನಾವೇ ಮುಂದೆ ನಿಂತು ನಿಮ್ಮ ಮಗನ ಅಂತ್ಯಕ್ರಿಯೆ ನೆರವೇರಿಸುತ್ತೇವೆ ಎಂದು ಹೇಳಿದ್ದಾರೆ. ಆಗ ಅಜ್ಜಿ ನಿಟ್ಟುಸಿರು ಬಿಟ್ಟರು.

ನಂತರ ಮಹಾನಗರ ಪಾಲಿಕೆಯ ಆಂಬುಲೇನ್ಸ್ ನಲ್ಲಿ ಸದಾಶಿವನಗರದ ಸ್ಮಶಾನಕ್ಕೆ ಶವವನ್ನು ತೆಗೆದುಕೊಂಡು ಹೋದ ಯಂಗ್ ಬೆಲಗಾಮ್ ಫೌಂಡೇಶನ್ ಯುವಕರು ವಿಧಿ ವಿಧಾನ ಪೂರ್ಣಗೊಳಿಸಿದರು. ಬಳಿಕ ತಮ್ಮ ಕೈಯಾರೆ ಚಿತೆಗೆ ಅಗ್ನಿ ಸ್ಪರ್ಶ ಮಾಡಿ ಮಾದರಿಯಾದರು. ಈ ವೇಳೆ ಮೃತ ವಿಶ್ವನಾಥ ತಾಯಿ ನೀಲವ್ವ ಮಗನ ನೆನೆದು ಕಣ್ಣೀರು ಹಾಕಿದರು. ಅಲ್ಲದೇ ಈ ಯುವಕರ ಸಹಾಯಕ್ಕೆ ಶರಣು ಎಂದರು.

ಬೆಳಗಾವಿ ಸುದ್ದಿ ಡಾಟ್ ಕಾಮ್ ಜೊತೆಗೆ ಮಾತನಾಡಿದ ಅಜ್ಜಿ ನೀಲವ್ವ, ಗಂಡನ ಕಳೆದುಕೊಂಡು ಬಿದ್ದ ಮನೆಯಲ್ಲಿ ವಾಸವಿದ್ದ. ಕೂಲಿ ನಾಲಿ ಮಾಡಿಕೊಂಡು ಜೊತೆಗಿದ್ದ ಮಗ ನೋಡಿದರೆ ಈಗ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ. ಈ ಬೆಳಗಾವಿ ಯುವಕರು ನನ್ನ ಸಹಾಯಕ್ಕೆ ಬಂದಿದ್ದಾರೆ. ಅವರಿಗೆ ನಾನು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೆ ಎಂದರು.

ಅಂತ್ಯಕ್ರಿಯೆಗೆ ನೆರವು ನೀಡಿದ ಅಲನ್ ಮೋರೆ ಮಾತನಾಡಿ, ನಿನ್ನೆ ರಾತ್ರಿ ಜಿಲ್ಲಾಸ್ಪತ್ರೆಯಲ್ಲಿ ಇವರು ಮೃತರಾಗಿದ್ದರು. ಆಗ ಈ ಅಜ್ಜಿ ನಮ್ಮ ತಂದೆ ಮಾಜಿ ಮೇಯರ್ ವಿಜಯ ಮೋರೆ ಅವರಿಗೆ ತಿಳಿಸಿದ್ದರು. ನಮ್ಮ ತಂಡ ಆಗಮಿಸಿ ಮೃತ ಯುವಕನ ಅಂತ್ಯಕ್ರಿಯೆ ಮಾಡಿದ್ದೇವೆ. ಆ ಅಜ್ಜಿಗೆ ಸಂಬಂಧಿಕರು ಯಾರೂ ಇಲ್ಲ. ಕೈಯಲ್ಲಿ ಹಣವೂ ಇರಲಿಲ್ಲ. ಈವರೆಗೆ 948 ಮೃತರ ಅಂತ್ಯಕ್ರಿಯೆಗೆ ಸಹಾಯ ಮಾಡಿದ್ದು, ಇದರಲ್ಲಿ ನಮಗೆ ಖುಷಿಯಿದೆ. ಈ ಸೇವೆ ಮುಂದುವರಿಸುತ್ತೇವೆ , ಇಂತಹ ಸೇವೆಯಲ್ಲಿ ಸಿಗುವ ತೃಪ್ತಿ ಬೇರೆ ಯಾವುದರಲ್ಲೂ ಸಿಗಲು ಸಾಧ್ಯವಿಲ್ಲ.

Check Also

ಇವರು ನೀಡಿದ ಚಿಕಿತ್ಸೆ ಅದ್ಭುತ , ಬೆಳಗಾವಿಯ ವ್ಯಕ್ತಿ ಇವರ ಔಷಧಿಯಿಂದ ಬದುಕಿದ್ದು ಪವಾಡ…!!

ನಾಟಿ ವೈದ್ಯ ಲೋಕೇಶ್ ಟೇಕಲ್ ಅವರು ನೀಡಿದ ಚಿಕಿತ್ಸೆ ನೋಡಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ …

Leave a Reply

Your email address will not be published. Required fields are marked *