Breaking News
Home / Breaking News / ಟ್ರೇಡಿಂಗ್ ಹೆಸರಿನಲ್ಲಿ ಚೀಟೀಂಗ್ ,ಕೋಟಿ,ಕೋಟಿ ವಂಚನೆ…

ಟ್ರೇಡಿಂಗ್ ಹೆಸರಿನಲ್ಲಿ ಚೀಟೀಂಗ್ ,ಕೋಟಿ,ಕೋಟಿ ವಂಚನೆ…

ಗೋಕಾಕ: ಸೈಬರ್ ವಂಚಕರಿಂದ ಇಬ್ಬರು ಇಂಜಿನಿಯರ್‌, ಓರ್ವ ಉದ್ಯಮಿಗೆ ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿರುವ ಘಟನೆ ಗೋಕಾಕದಲ್ಲಿ ನಡೆದಿದೆ.

ಗೋಕಾಕ ಮೂಲದ ಉದ್ಯಮಿ ಬಾಬುರಾವ್‌ ಹಾಗೂ ಚಿಕ್ಕೋಡಿ ತಾಲೂಕಿನ ಖಡಕಲಾಟ್ ಗ್ರಾಮದ ನಿವಾಸಿ ಚಿದಾನಂದ ಹಾಗೂ ಇಂಜಿನಿಯರ್ ಶಿವರಾಜ್‌ಗೆ ಸೈಬರ್ ವಂಚಕರು ಲಕ್ಷ ಲಕ್ಷ ಪಂಗನಾಮ ಹಾಕಿದ್ದಾರೆ. ಫೇಸ್ಬುಕ್‌ನಲ್ಲಿ ಬಂದ ಜಾಹೀರಾತು ರೀಲ್ಸ್ ನೋಡಿ ಮೋಸ ಹೋಗಿರುವ ಶಿವರಾಜ್ ಷೇರು ಮಾರುಕಟ್ಟೆಯಲ್ಲಿ ಹಣ ವಿನಿಯೋಗಿಸಿದರೆ ಒಂದೇ ದಿನದಲ್ಲಿ ಶೇ. 10 ಪಟ್ಟು ಲಾಭವಾಗುತ್ತೇ ಎಂದು ವಂಚಕರು ಪುಸಲಾಯಿಸಿದ್ದಾರೆ. ಅಲ್ಲದೇ ಬೆನ್ ಕ್ಯಾಪಿಟಲ್, ಡಿಎನ್‌ಪಿ‌ ಕ್ಯಾಪಿಟಲ್‌ನಲ್ಲಿ ಹಣ ವಿನಿಯೋಗಿಸಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ವಂಚಕರು ನಂಬಿಸಿದ್ದಾರೆ. ಈ ಕಟ್ಟು ಕಥೆ ನಂಬಿದ ಶಿವರಾಜ್‌ ಜಾಹೀರಾತು ವಾಟ್ಸಪ್ ಗ್ರೂಪ್‌ ಸೇರಿ ಪ್ರೊಫೈಲ್ ಐಡಿ ಕ್ರಿಯೆಟ್ ಮಾಡಿಕೊಂಡಿದ್ದಾರೆ. ನಂತರ ಮೊದಲ ದಿನ 10 ಸಾವಿರ ಹಣ ಹಾಕಿದ್ದ ಶಿವರಾಜ್‌ಗೆ ಅದೇ ದಿನ 1 ಲಕ್ಷ ಹಣ ಖಾತೆಗೆ ಹಾಕಿ ನಂಬಿಸಿದ್ದಾರೆ.

ನಂತರ ಬ್ಯಾಂಕ್‌ಗೆ ಹೋಗಿ ಹಣ ವಿಥ್ ಡ್ರಾ ಮಾಡಿಕೊಂಡು ಕುಟುಂಬ‌ ಸದಸ್ಯರ ಜೊತೆಗೆ ‌ಚರ್ಚಿಸಿದ ಶಿವರಾಜ್ ಅವರು ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ. ನಂತರ ಕುಟುಂಬಸ್ಥರು ‌ಸಕಾರಾತ್ಮಕವಾಗಿ ಸ್ಪಂದಿಸಿದಾಗ ಹಂತಹಂತವಾಗಿ 5 ಲಕ್ಷ, 10‌ ಲಕ್ಷ‌ ಹಣ ಹಾಕಿದ್ದಾರೆ. ಹೀಗೆ‌ ಒಟ್ಟು 75.20 ಲಕ್ಷ‌ ಹಾಕಿದ್ದ ಶಿವರಾಜ್‌ಗೆ ಮರಳಿದ್ದು ಕೇವಲ 1.97 ಲಕ್ಷ‌‌ ಮಾತ್ರ. ಒಟ್ಟಾರೆ ಕಷ್ಟಪಟ್ಟು ‌ದುಡಿದ ಹಣ ಕಳೆದುಕೊಂಡು ಸಿಇಎನ್‌ ಪೊಲೀಸರ ಮೊರೆ ಹೋಗಿದ್ದಾರೆ.

ಗೋಕಾಕ ಮೂಲದ ಉದ್ಯಮಿ ಬಾಬುರಾವ್‌ಗೂ ವಂಚಕರ ಪಂಗನಾಮ: ಟ್ರೇಡಿಂಗ್‌ನಲ್ಲಿ ಒಳ್ಳೆಯ ‌ಲಾಭ ಆಗುತ್ತದೆ ಎಂದು ಕೇಳಿರುವ ಬಾಬುರಾವ್ ಅವರಿಗೆ ಟೆಲಿಗ್ರಾಂ‌ನಲ್ಲಿ ವಂಚಕರು ಪರಿಚಯವಾಗಿದ್ದಾರೆ. ಶಿವರಾಜ ನಂತೆ ಇವರು ಕೂಡಾ ಜಾಹಿರಾತು ವಾಟ್ಸಪ್ ನಂಬರ್ ಪಡೆದು ಅಲ್ಲಿಯೂ ಗ್ರೂಪ್‌ಗೆ ಸೇರಿದ್ದಾರೆ. ವಂಚಕರ ಸಲಹೆಯಂತೆ ಕೆಕೆಆರ್‌ಎಂಎಫ್‌ ವೆಬ್ಸೈಟ್‌ನಲ್ಲಿ ಪ್ರೊಫೈಲ್‌ ಕ್ರಿಯೆಟ್‌ ಮಾಡಿಕೊಂಡಿರುವ ಉದ್ಯಮಿ ಹಣ ಹೂಡಿಕೆ‌ ಮಾಡಿದ್ರೆ ಲಾಭ ಬರುತ್ತೆಂದು ಶಿವರಾಜ್ ಮಾದರಿಯಲ್ಲೇ ಬಾಬುರಾವ್‌ ಅವರು ಒಟ್ಟು 27.50 ಲಕ್ಷ ಹಣ ಕಳೆದುಕೊಂಡು ಮೋಸ ಹೋಗಿ ಸಿಇಎನ್ ಪೊಲೀಸರ ‌ಮೊರೆ ಹೋಗಿದ್ದಾರೆ.
ಚಿಕ್ಕೋಡಿ ‌ತಾಲೂಕಿನ‌ ಕೆರೂರು ಗ್ರಾಮದ ಚಿದಾನಂದಗೂ 58.34 ಲಕ್ಷ ಪಂಗನಾಮ: ಇದೇ‌ ರೀತಿ ಪ್ರತಿಷ್ಠಿತ ‌ಕಂಪನಿಯಲ್ಲಿ ಪ್ರೊಗ್ರಾಂ ಅಸೋಸಿಯೇಟ್ ‌ಆಗಿರುವ‌‌ ಚಿದಾನಂದಗೂ ವಂಚಕರು ಮೋಸ ಮಾಡಿದ್ದಾರೆ. ಅಡೆಪ್ಟೆಡ್ ಸೊಶಿಯಲ್ ಮಿಡಿಯಾ ಮಾರ್ಕೆಟಿಂಗ್ ಕಂಪನಿ ಹೆಸರಿನಲ್ಲಿ ಚಿದಾನಂದಗೆ ವರ್ಕ್ ಫ್ರಮ್‌ ಹೋಮ್ ಕೆಲಸದ‌‌ ಆಫರ್ ಕೊಟ್ಟು ಅವರ ವಾಟ್ಸಪ್ ಮೂಲಕ ಅನೌನ್ ನಂಬರ್‌ನಿಂದ ಸಂಪರ್ಕಿಸಿ ಹಣ ಪಿಕಿದ್ದಾರೆ.

ಸೈಬರ್‌ ವಂಚಕರು ಇನ್ಟಾಗ್ರಾಂ‌ನ ಪೇಜ್ ಸ್ಕ್ರೀನ್ ಶಾಟ್ ಕಳಿಸಿದರೆ ಹಣ ನೀಡುವುದಾಗಿ ಚಿದಾನಂದ ಅವರಿಗೆ ನಂಬಿಸಿದ್ದಾರೆ. ನಂತರ ಮೊದಲ ದಿನ ಚಿದಾನಂದ ಅವರ ಕೆವಿಜಿ ಬ್ಯಾಂಕ್ ಅಕೌಂಟಿಗೆ 210 ಹಣ ಸಂದಾಯ ಮಾಡಿದ್ದಾರೆ. ನಂತರ‌ ಪ್ರೊಫೈಲ್ ‌ಕ್ರಿಯೆಟ್ ಮಾಡಿಸಿ ಹಣ ಹೂಡಿದ್ರೆ ಹೆಚ್ಚಿನ ‌ಲಾಭ ಬರುತ್ತೆ ಎಂದು ನಂಬಿಸಿದ್ದಾರೆ. ಆಗ‌ ಒಂದು ಸಾವಿರ ಜಮಾ‌ಮಾಡಿದ್ದ ಚಿದಾನಂದ‌ಗೆ ವಂಚಕರು 1400 ರೂ‌ ಸಂದಾಯ ಮಾಡಿದ್ದಾರೆ. ಹೀಗೆ ಹೆಚ್ಚಿನ ‌ಲಾಭದ‌ ಆಸೆಗೆ ಬಿದ್ದ ಚಿದಾನಂದ ‌ಒಟ್ಟು 58.34 ಲಕ್ಷ‌ ಹಣ ಕಳೆದುಕೊಂಡಿದ್ದಾರೆ.

ಬೆಳಗಾವಿ ಎಸ್ಪಿ ಡಾ. ಭೀಮಾಶಂಕರ ‌ ಸೂಚನೆ: ಒಂದೇ ತಿಂಗಳಲ್ಲಿ ಮೂರು ಸೈಬರ್ ವಂಚನೆ ‌ಪ್ರಕರಣ ಹಿನ್ನೆಲೆ ವಿಷಯ ತಿಳಿಸದ ಅವರು, ಸೈಬರ್ ವಂಚಕರು ಸಾಮಾಜಿಕ ‌ಜಾಲತಾಣ ಬಳಸಿ ಹೆಚ್ಚಿನ ಲಾಭದ ಆಮಿಷ ಒಡ್ಡಿ ಒಂದೇ ತಿಂಗಳಲ್ಲಿ ಬೆಳಗಾವಿ ಜಿಲ್ಲೆಯ ಮೂವರಿಗೆ 1.53 ಕೋಟಿ ಹಣ ಪಂಗನಾಮ ಹಾಕಿದ್ದಾರೆ. ಆದ್ದರಿಂದ ಒಂದೇ ದಿನದಲ್ಲಿ ಹೆಚ್ಚಿನ ಲಾಭ ಕೊಡಲು ಯಾವ ಕಂಪನಿಗಳಿಂದಲೂ ‌ಸಾಧ್ಯವಿಲ್ಲ. ಸಾರ್ವಜನಿಕರು‌ ಈ ಸಂಗತಿಯನ್ನು ‌ಮೊದಲು ಮನವರಿಕೆ ‌ಮಾಡಿಕೊಳ್ಳಬೇಕು. ಸೈಬರ್‌ ವಂಚರಿಂದ ಇಂಥ‌ ಆಸೆ- ಆಮಿಷಗಳಿಗೆ ಜನ ಒಳಗಾಗಬಾರದು ಎಂದು ಬೆಳಗಾವಿ ಎಸ್ಪಿ ಡಾ. ಭೀಮಾಶಂಕರ ‌ಗುಳೇದ ತಿಳಿಸಿದ್ದಾರೆ.

ಒಂದು ವೇಳೆ ಹಣ ಕಳೆದುಕೊಂಡವರು ತಕ್ಷಣವೇ ಕಂಟ್ರೋಲ್ ರೂಂ‌ ‌1930 ನಂಬರ್‌ಗೆ ಕಾಲ್‌ ಮಾಡಬೇಕು. ಹಣ‌ ಕಳೆದುಕೊಂಡು ಬಹಳ‌ ದಿನಗಳ ಬಳಿಕ ದೂರು‌ ನೀಡಲು ಬಂದರೆ ಹನ ರಿಕೋವರಿ ಮಾಡಲು ಕಷ್ಟವಾಗುತ್ತದೆ. ಆದ್ದರಿಂದ ಬೆಳಗಾವಿ ಜಿಲ್ಲೆಯ ಜನ ಸೈಬರ್‌ ವಂಚಕರಿಂದ ಎಚ್ಚರದಿಂದ ಇರಲು ಸಲಹೆ ನೀಡಿದ್ದಾರೆ.

Check Also

ಕಾಂಗ್ರೆಸ್ ಪಾರ್ಟಿಯಲ್ಲೂ ಚಹಾ ಪೇ ಚರ್ಚಾ ವೀದೌಟ್ ಖರ್ಚಾ…!!!

ಬೆಳಗಾವಿ- ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಇವತ್ತು ಬೆಳಗಾವಿಗೆ ಬಂದ್ರು ಇಲ್ಲಿಯ ಕಾಂಗ್ರೆಸ್ ಭವನದಲ್ಲಿ …

Leave a Reply

Your email address will not be published. Required fields are marked *