Breaking News
Home / Breaking News / ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೆ 8 ಜನ ಸೊಂಕಿತರ ಪತ್ತೆ

ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೆ 8 ಜನ ಸೊಂಕಿತರ ಪತ್ತೆ

ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಕರ್ಮಕಾಂಡ ಮುಂದುವರೆದಿದೆ,ಜಿಲ್ಲೆಯ ಜನ ಸಂಡೇ ಮೂಡ್ ನಲ್ಲಿ ಇರುವಾಗಲೇ ಈ ಮಹಾಮಾರಿ ಹೊಡೀ ಒಂಬತ್ತ್ ಎಂದಿದೆ,ಯಾಕಂದ್ರೆ ಇವತ್ತು ಒಂದೇ ದಿನ 8 ಜನ ಸೊಂಕಿತರು ಪತ್ತೆಯಾಗಿದ್ದಾರೆ.

ಇಂದು ಭಾನುವಾರದ ಹೆಲ್ತ್ ಬುಲೀಟೀನ್ ಬಿಡುಗಡೆಯಾಗಿದ್ದು,ಈ ಬುಲೀಟಿನ್ ನಲ್ಲಿ ಜಿಲ್ಲೆಯಲ್ಲಿ ಮತ್ತೆ 8 ಜನರಿಗೆ ಸೊಂಕು ಇರುವದು ದೃಡವಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ರಾಜ್ಯ ಹೆಲ್ತ್ ಬುಲೀಟೀನ್ ಪ್ರಕಾರ 326 ಕ್ಕೇರಿದಂತಾಗಿದೆ. ಇಂದು ಪತ್ತೆಯಾದ 9 ಜನ ಸೊಂಕಿತರ ಪೈಕಿ 1 ಬೆಳಗಾವಿ ನಗರದ ಸದಾಶಿವ ನಗರ,1ಕಾಕತಿ,2, ಬೋರಗಾಂವ ಚಿಕ್ಕೋಡಿ, ತಾಲ್ಲೂಕು,4 ಹುಕ್ಕೇರಿ ತಾಲ್ಲೂಕಿನವರು ಎಂದು ತಿಳಿದು ಬಂದಿದೆ. ಈ ಕುರಿತು ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ನೀಡಬೇಕಾಗಿದೆ.

ಅಂತರ್ ಜಿಲ್ಲಾ ಪ್ರವಾಸಿನ ನಂಟಿನಿಂದಾಗಿ ಸೊಂಕಿತರು ಪತ್ತೆಯಾಗುತ್ತಿದ್ದಾರೆ.ಬೆಂಗಳೂರಿನಂದ ಬೆಳಗಾವಿಗೆ ಬಂದ ವ್ಯಕ್ತಿಗೆ ಸೊಂಕು ಇರುವದು ದೃಡವಾಗಿದೆ.ಅಂತರ್ ಜಿಲ್ಲಾ ಓಡಾಟದ ಕಾಟ ಶುರುವಾಗಿದ್ದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ.

Check Also

ಸುರೇಶ ಅಂಗಡಿ ಅವರ ಪಾರ್ಥೀವ ಶರೀರವನ್ನು ಬೆಳಗಾವಿಗೆ ತರಲು ಬಹಳ ಪ್ರಯತ್ನ ಮಾಡಿದೆ.

ದಿವಂಗತ ಸುರೇಶ್ ಅಂಗಡಿ ಅವರಿಗೆ ಗಣ್ಯರ ನಮನ ಬೆಳಗಾವಿ,-ಬೆಳಗಾವಿಯ ಸದಾಶಿವ ನಗರ ಬಳಿಯ ಸಂಪಿಗೆ ನಗರದಲ್ಲಿರುವ ರೈಲ್ವೆ ಇಲಾಖೆಯ ರಾಜ್ಯ …

Leave a Reply

Your email address will not be published. Required fields are marked *