Breaking News
Home / Breaking News / ಬೆಳಗಾವಿಯ ಕಣಬರ್ಗಿ ಹೊಸ ಲೇಔಟ್ ಗೆ 50 ಕೋಟಿ ₹

ಬೆಳಗಾವಿಯ ಕಣಬರ್ಗಿ ಹೊಸ ಲೇಔಟ್ ಗೆ 50 ಕೋಟಿ ₹

ಬುಡಾ: 384.46 ಕೋಟಿ ರೂಪಾಯಿ ಬಜೆಟ್ ಗೆ ಅನುಮೋದನೆ

ಕಣಬರ್ಗಿ ವಸತಿ ವಿನ್ಯಾಸಕ್ಕೆ 50 ಕೋಟಿ ಮೀಸಲು

ಬೆಳಗಾವಿ, ): ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ(ಬುಡಾ)ದ 2024-25 ನೇ ಸಾಲಿನಲ್ಲಿ 384.46 ಕೋಟಿ ರೂಪಾಯಿ ಆಯವ್ಯಯಕ್ಕೆ ಅನುಮೋದನೆ ನೀಡಲಾಗಿದೆ.

ಶುಕ್ರವಾರ(ಮಾ.1) ನಡೆದ ಪ್ರಾಧಿಕಾರದ ಸಾಮಾನ್ಯ ಸಭೆ‌ ಹಾಗೂ‌‌ ಆಯವ್ಯಯ ಸಭೆಯಲ್ಲಿ ಬಜೆಟ್ ಗೆ‌ ಅನುಮೋದನೆ‌ ಪಡೆಯಲಾಯಿತು.

ಸದರಿ ಬಜೆಟ್ ನಲ್ಲಿ ಕಣಬರ್ಗಿ ಯೋಜನೆ (ಯೋಜನಾ ಸಂಖ್ಯೆ 61) ಕೈಗೋಳ್ಳಲು ಪ್ರಸ್ತುತ ಆರ್ಥಿಕ ವರ್ಷ (2024-2025) ರೂ.5000 ಲಕ್ಷಗಳನ್ನು ಮೀಸಲಿಡಲಾಗಿದೆ.

ಹೊಸ ವಸತಿ ವಿನ್ಯಾಸ ಅಭಿವೃದ್ಧಿ ಯೋಜನೆಗೆ ರೂ.3000 ಲಕ್ಷಗಳನ್ನು ಹಮ್ಮಿಕೊಳ್ಳಲಾಗಿದೆ. ಮಹಾ ಯೋಜನೆಯ ರಸ್ತೆಗಳು ಮತ್ತು ಸಂಚಾರಿ ವರ್ತುಲ ಅಭಿವೃದ್ಧಿ ಕಾಮಾಗಾರಿಗೆ ರೂ.5000 ಲಕ್ಷ ಮೀಸಲಿಡಲಾಗಿದೆ.

ಪ್ರಾಧಿಕಾರದ ಯೋಜನೆಯಲ್ಲಿನ ವಾಣಿಜ್ಯ ಸಂಕೀರ್ಣಗಳ ನಿರ್ಮಾಣಕ್ಕಾಗಿ ರೂ.3500 ಲಕ್ಷಗಳು; ನಗರದಲ್ಲಿನ ವಿವಿಧ ಉದ್ಯಾನವನಗಳ ಅಭಿವೃದ್ಧಿಗಾಗಿ ರೂ.1500 ಲಕ್ಷಗಳು; ಮುಖ್ಯ ಕೆರೆಗಳ ಅಭಿವೃದ್ಧಿಗಾಗಿ ರೂ.1500 ಲಕ್ಷಗಳನ್ನು ಹಾಗೂ ನಗರ ವ್ಯಾಪ್ತಿಯ ಎಲ್ಲಾ ಕೆರೆಗಳಿಗೆ ಬೆಲಿ ಹಾಕುವ ಕಾಮಗಾರಿಗಳಿಗೆ ರೂ.500 ಲಕ್ಷಗಳನ್ನು ತೆಗೆದಿರಿಸಲಾಗಿದೆ.

ಅದೇ ರೀತಿ ನಗರದ ವಿವಿಧ ಪ್ರಮುಖ ಜಾಗೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ರೂ.50 ಲಕ್ಷಗಳು ಹಾಗೂ ಸಂಚಾರಿ ಸಿಸಿ ಕ್ಯಾಮರಾ ಅಳವಡಿಸಲು ರೂ.50 ಲಕ್ಷಗಳು; ನಗರ ಸೌಂದರೀಕರಣಕ್ಕಾಗಿ ರೂ.500 ಲಕ್ಷಗಳು ಹಾಗೂ ಕಣಬರ್ಗಿ ವಸತಿ ವಿನ್ಯಾಸ ಅಭಿವೃದ್ಧಿ ಯೋಜನೆ ಸಂಖ್ಯೆ:61 ಯನ್ನು ಶೀಘ್ರವಾಗಿ ಪ್ರಾರಂಭಿಸಲು ತಿರ್ಮಾನಿಸಲಾಗಿರುತ್ತದೆ.

ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ, ಶಾಸಕರಾದ ಆಸಿಫ್(ರಾಜು) ಸೇಠ್, ಅಭಯ್ ಪಾಟೀಲ, ಜಿಲ್ಲಾಧಿಕಾರಿ‌ ನಿತೇಶ್ ಪಾಟೀಲ, ಬುಡಾ ಆಯುಕ್ತರಾದ ಶಕೀಲ್‌ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.
***

Check Also

ಮನೆ,ಮನೆಗೆ ಹೋಗಿ ಮತದಾರರ ಚೀಟಿ ವಿತರಿಸಲು ಡಿಸಿ ನಿತೇಶ್ ಪಾಟೀಲ್ ಸೂಚನೆ

ಬೆಳಗಾವಿ, ):ಮತದಾರರಿಗೆ ತಮ್ಮ ಮತಗಟ್ಟೆಗಳ ಬಗ್ಗೆ ಮುಂಚಿತವಾಗಿ ಮತದಾರರ ಚೀಟಿ(ವೋಟರ್ ಸ್ಲಿಪ್)ಗಳನ್ನು ನೀಡಿದರೆ ಮತದಾನ ಮಾಡಲು ಅನುಕೂಲವಾಗಲಿದೆ. ಆದ್ದರಿಂದ ಪ್ರತಿಯೊಂದು …

Leave a Reply

Your email address will not be published. Required fields are marked *