Breaking News
Home / Breaking News / ಬೆಳಗಾವಿ MP ಇಲೆಕ್ಷನ್,ಬಿಜೆಪಿ ಆಕಾಂಕ್ಷಿಗಳ ರೇಸ್ ನಲ್ಲಿ ಮಾಜಿ ಜಿಲ್ಲಾಧಿಕಾರಿ.!!

ಬೆಳಗಾವಿ MP ಇಲೆಕ್ಷನ್,ಬಿಜೆಪಿ ಆಕಾಂಕ್ಷಿಗಳ ರೇಸ್ ನಲ್ಲಿ ಮಾಜಿ ಜಿಲ್ಲಾಧಿಕಾರಿ.!!

ಬೆಳಗಾವಿ ಜಿಲ್ಲಾಧಿಕಾರಿ ಗಳಾಗಿ ಪ್ರಾದೇಶಿಕ ಆಯುಕ್ತರಾಗಿ, ಸೇವೆ ಮಾಡಿರುವ ಎಂ.ಜಿ ಹಿರೇಮಠ ಅವರು ಪ್ರಸಕ್ತ ಲೋಕಸಭೆ ಚುನಾವಣೆಯ ಬೆಳಗಾವಿ ಕ್ಷೇತ್ರದ ಬಿಜೆಪಿಯ ಪ್ರಬಲ ಆಕಾಂಕ್ಷಿಯಾಗಿದ್ದಾರೆ.ಕೋವೀಡ್ ಅವಧಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದಲ್ಲಿ ಕೋವೀಡ್ ಲಸಿಕೆ ಹಾಕಿಸಿ,ಪ್ರಧಾನಿ ನರೇಂದ್ರ ಮೋದಿ ಅವರಿಂದ ಶಹಬ್ಬಾಸ್ ಗಿರಿ ಪಡೆದಿದ್ದ ಎಂ.ಜಿ ಹಿರೇಮಠ ಅವರು ಬೆಳಗಾವಿ ಜಿಲ್ಲೆಯಲ್ಲಿ ಅಪಾರ ಜನಮೆಚ್ಚುಗೆ ಗಳಿಸಿದ್ದರು.ಜನರ ಒತ್ತಾಯದ ಮೇರೆಗೆ ರಾಜಕೀಯ ಪ್ರವೇಶ ಮಾಡಿರುವ ಅವರು ಈಗಾಗಲೇ ಅವರು ಬಿಜೆಪಿಯ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿದ್ದು ರಾಜ್ಯದ ಬಿಜೆಪಿ ನಾಯಕರು ಎಂ.ಜಿ ಹಿರೇಮಠ ಅವರ ಬೆನ್ನಿಗೆ ನಿಂತಿದ್ದಾರೆ. ಅಧಿಕಾರಿಯ ರಾಜಕೀಯ ಎಂಟ್ರಿ, ಬೆಳಗಾವಿ ಲೋಕಸಭಾ ಕ್ಷೇತ್ರದ ದಿಕ್ಸೂಚಿಯನ್ನು ಬದಲಿಸಿದೆ.

ಬಿಜೆಪಿ ಪಕ್ಷ ಜನಮೆಚ್ಚುಗೆ ಗಳಿಸಿದ ಅಧಿಕಾರಿಗಳಿಗೆ ಚುನಾವಣೆಗೆ ಸ್ಪರ್ದಿಸಲು ಅವಕಾಶ ಕೊಟ್ಟಿದೆ. ಹೀಗಾಗಿ ಜನಪ್ರೀಯ ಅಧಿಕಾರಿಯಾಗಿದ್ದ ಎಂ.ಜಿ ಹಿರೇಮಠ ಅವರನ್ನು ಕಣಕ್ಕಿಳಿಸುವ ಚಿಂತನೆ ಈಗ ಬಿಜೆಪಿಯಲ್ಲಿ ಶುರುವಾಗಿದೆ.ನಿವೃತ್ತ ಐಎಎಸ್ ಅಧಿಕಾರಿ ಎಂ.ಜಿ. ಹಿರೇಮಠ ಅವರನ್ನು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಸಂಬಂಧ ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ.

ಈ ಹಿಂದೆ ಐಪಿಎಸ್ ಅಧಿಕಾರಿಗಳಾಗಿದ್ದ ಭಾಸ್ಕರ ರಾವ್ ಮತ್ತು. ಅವರಿಗೆ ಬಿಜೆಪಿ ಮಣೆ ಹಾಕಿತ್ತು.‌ ಆದರೆ ಈಗ ಬೆಳಗಾವಿಯ ನಿವೃತ್ತ ಐಎಎಸ್ ಅಧಿಕಾರಿ ಎಂ. ಜಿ. ಹಿರೇಮಠ ಅವರನ್ನು ಸೆಳೆದಿರುವ ಬಿಜೆಪಿ, ಅವರನ್ನು ಲೋಕಸಭಾ ಬೆಳಗಾವಿ ಕ್ಷೇತ್ರದಿಂದ ಕಣಕ್ಕಿಳಿಸಲು ಮುಂದಾಗಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಹಾಲಿ ಸಂಸದೆ ಮಂಗಲ ಅಂಗಡಿ ಸೇರಿದಂತೆ ಹಲವರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಇದ್ದಾರೆ. ಆದರೆ ಸೂಕ್ತ ಗೆಲ್ಲುವ ಅಭ್ಯರ್ಥಿ ಗಾಗಿ ಬಿಜೆಪಿ ನಾಯಕರು ಹೆಣಗಾಡುತ್ತಿದ್ದಾರೆ.

ಎಂ. ಜಿ. ಹಿರೇಮಠ ಅವರು ಬೆಳಗಾವಿ ಜಿಲ್ಲಾಧಿಕಾರಿ ಆಗಿದ್ದ ಅವಧಿಯಲ್ಲಿ ಸಲ್ಲಿಸಿದ ಜನಪರ ಆಡಳಿತ ಜಿಲ್ಲೆಯ ಜನತೆ ಜನ ಪ್ರಿಯತೆಗೆ ಸಾಕ್ಷಿ ಆಗಿತ್ತು. ಅದರಲ್ಲೂ ಕರೋನಾ ಕಷ್ಟ ಕಾಲದಲ್ಲಿ ಹಿರೇಮಠ ಅವರು ಜನರ ಕಷ್ಟಕ್ಕೆ ಸ್ಪಂದಿಸಿದ್ದರು. ಅಲ್ಲದೆ ಬೆಳಗಾವಿ ಪ್ರಾದೇಶಿಕ ಆಯುಕ್ತರಾಗಿಯೂ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು. ಬಳಿಕ ಅವರು ಜಿಲ್ಲೆಯ ಯುವಕರಿಗೆ ಕೆಎಎಸ್, ಐಎಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುತ್ತ ಬಂದಿದ್ದಾರೆ. ಈಗ ಜನತೆ ಒತ್ತಾಸೆ ಮೇರೆಗೆ ರಾಜಕೀಯ ಸೇರ್ಪಡೆ ಆಗುವ ಮೂಲಕ ಮತ್ತೆ ಜನ ಸೇವೆಗೆ ನಿಂತಿದ್ದಾರೆ. ಆಡಳಿತ ಸೇವೆಯಲ್ಲಿ ಸಾಕಷ್ಟು ಅನುಭವ ಹೊಂದಿರುವ ಎಂ. ಜಿ. ಹಿರೇಮಠ ಅವರು ಜನಪ್ರತಿನಿಧಿ ಆಗಿ ಆಯ್ಕೆ ಆದರೆ ಜನಪರ ಸೇವೆ ನೀಡಲು ಸಾಕಷ್ಟು ಅನುಕೂಲ ಆಗಲಿದೆ. ಹಾಗಾಗಿ ಬಿಜೆಪಿ ನಾಯಕರು ಎಂ.ಜಿ. ಹಿರೇಮಠ ಅವರನ್ನು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆಗಳಿವೆ.

Check Also

ಮನೆ,ಮನೆಗೆ ಹೋಗಿ ಮತದಾರರ ಚೀಟಿ ವಿತರಿಸಲು ಡಿಸಿ ನಿತೇಶ್ ಪಾಟೀಲ್ ಸೂಚನೆ

ಬೆಳಗಾವಿ, ):ಮತದಾರರಿಗೆ ತಮ್ಮ ಮತಗಟ್ಟೆಗಳ ಬಗ್ಗೆ ಮುಂಚಿತವಾಗಿ ಮತದಾರರ ಚೀಟಿ(ವೋಟರ್ ಸ್ಲಿಪ್)ಗಳನ್ನು ನೀಡಿದರೆ ಮತದಾನ ಮಾಡಲು ಅನುಕೂಲವಾಗಲಿದೆ. ಆದ್ದರಿಂದ ಪ್ರತಿಯೊಂದು …

Leave a Reply

Your email address will not be published. Required fields are marked *