ಬೆಳಗಾವಿ-ಮಾಜಿ ಶಾಸಕ ಸಂಜಯ ಪಾಟೀಲ ಹೇಳಿಕೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗರಂ ಆಗಿದ್ದಾರೆ.ಇಂದು ಮಧ್ಯಾಹ್ನ ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿಂಡಲಗಾ ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾಜಿ ಶಾಸಕ ಸಂಜಯ ಪಾಟೀಲ ಹೆಬ್ಬಾಳಕರ್ ಕುರಿತು ಹಗುರವಾಗಿ ಮಾತನಾಡಿದ ಹಿನ್ನಲೆಯಲ್ಲಿ,ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಲಕ್ಷ್ಮೀ ಹೆಬ್ಬಾಳಕರ್ ಶಾಸಕ ಸಂಜಯ್ ಪಾಟೀಲ್ ವಿರುದ್ಧ ಹರಿಹಾಯ್ದಿದ್ದಾರೆ.
ಹೆಬ್ಬಾಳಕರ್ ಅವರಿಗೆ ಬಿಜೆಪಿ ಸಮಾವೇಶದಲ್ಲಿ ಇಷ್ಟೊಂದು ಜನ ಸೇರಿದ್ದನ್ನು ನೋಡಿ,ಇಂದು ರಾತ್ರಿ ನಿದ್ದೆ ಬರೋಲ್ಲ, ನಿದ್ದೆ ಬರಬೇಕಾದ್ರೆ,ಇವತ್ತು ರಾತ್ರಿ ೧ ಎಕ್ಸಟ್ರಾ ಪೆಗ್ ಹೊಡಿಬೇಕು ಎಂದಿದ್ದ ಮಾಜಿ ಶಾಸಕ ಸಂಜಯ ಪಾಟೀಲ,
ಪ್ರಚಾರಕ್ಕಾಗಿ ನೀಚತನದ ಕೀಳು ಮಟ್ಟದ ಹೇಳಿಕೆ ನನ್ನ ಬಗ್ಗೆ ಸಂಜಯ್ ಪಾಟೀಲ್ ನೀಡಿದ್ದಾರೆ.ಕರ್ನಾಟಕ ರಾಜ್ಯದ ಮಹಿಳೆಯರು ಮಕ್ಕಳನ್ನು ನಿಭಾಯಿಸುವ ಸಚಿವೆಗೆ ಇವರು ಈ ರೀತಿ ಹೇಳಿಕೆ ನೀಡ್ತಾರೆ.ಈ ಮೂಲಕ ಬಿಜೆಪಿಯವರಿಗೆ ಮಹಿಳೆಯರು ಮತ್ತು ಮಹಿಳಾ ಕುಲದ ಬಗ್ಗೆ ಇರು ಗೌರವ ಎಷ್ಟು ಎನ್ನುವುದು ತೋರಿಸುತ್ತೆ.ಬಿಜೆಪಿಯವರ ಅಝೆಂಡಾ ಎನು ಎನ್ನುವುದು ಈ ಮೂಲಕ ಗೊತ್ತಾಗುತ್ತೆ.ಬರೀ ಮಾತಲ್ಲಿ ರಾಮ ಅಂತಾರೆ ಭೇಟಿ ಬಚಾಬ್ ಭೇಟಿ ಫಡಾವ್ ಅಂತಾರೆ,ಪ್ರತಿಯೊಬ್ಬ ಮಹಿಳೆಯನ್ನು ಗೌರವ ನೀಡುವುದು ಹಿಂದೂ ಸಂಸ್ಕ್ರತಿ,ಸಂಜಯ್ ಪಾಟೀಲ್ ಅವರ ಈ ಹೇಳಿಕೆ ಲಕ್ಷ್ಮೀ ಹೆಬ್ಬಾಳಕರ್ ಅಷ್ಟೆ ರಾಜ್ಯದ ಹಾಗೂ ದೇಶದ ಹೆಣ್ಣು ಮಕ್ಕಳಿಗೆ ಮಾಡಿದ ಅವಮಾನ ಎಂದು ಲಕ್ಷ್ಮೀ ಹೆಬ್ಬಾಳಕರ್ ಸಂಜಯ ಪಾಟೀಲ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ನಾನು ರಾಜ್ಯದ ಮಹಿಳೆಯರಿಗೆ ಕರೆ ನೀಡ್ತಿನಿ ಇಂತಹ ಹಿಡನ್ ಅಝೇಂಡಾ ಇಟ್ಟುಕೊಂಡಿರುವ ಬಿಜೆಪಿಗೆ ದಿಕ್ಕಾರ ಕೂಗಬೇಕು,ಸಂಜಯ್ ಪಾಟೀಲ್ ಈ ರೀತಿ ಮಾತಾಡುವಾಗ ಮಾಜಿ ಸಿಎಂ ಜಗದೀಶ ಶೆಟ್ಟರ್ ಹಾಗೂ ಮಂಗಳಾ ಅಂಡಗಿ ನಕ್ಕಿದ್ದಾರೆ. ಇದು ಬಿಜೆಪಿಯ ಹಿಡನ್ ಅಝೆಂಡಾವನ್ನು ತೋರಿಸುತ್ತೆ.ಆ ಹೇಳಿಕೆಯನ್ನ ಅಲ್ಲೆ ಅವರು ಖಂಡಿಸಿದ್ರೆ ಬಿಜೆಪಿ ವೇದಿಕೆಯ ಮೇಲೆ ಕುಳಿತು ಖಂಡಿಸಬೇಕಿತ್ತು.ಖಂಡಿಸಿದ್ರೆ ಬಿಜೆಪಿಯವರು ಹೆಣ್ಣಿಗೆ ಗೌರವ ಕೊಡ್ತಾರೆ ಎಂದಾಗುತ್ತಿತ್ತು ಆದರೆ ಇವತ್ತು ಬಿಜೆಪಿಯವರ ಅಸಲಿ ಮುಖವಾಡ ಗೊತ್ತಾಗಿದೆ.ಮಹಿಳೆಯರ ಬಗ್ಗೆ ಬಿಜೆಪಿಗೆ ಎಷ್ಟು ಗೌರವ ಇದೆ ಎನ್ನುವದು ಸಂಜಯ ಪಾಟೀಲ ಅವರ ಮಾತುಗಳಿಂದ ಗೊತ್ತಾಗುತ್ತದೆ. ಎಂದು ಹೆಬ್ಬಾಳಕರ್ ಅವರು ಸಂಜಯ ಪಾಟೀಲ ಅವರಿಗೆ ತಿರಗೇಟು ನೀಡಿದ್ದಾರೆ.