ಬೆಳಗಾವಿ- ಟ್ರಾಫಿಕ್ ಪೋಲೀಸರು ಟ್ರಾಫಿಕ್ ಕಂಟ್ರೋಲ್ ಮಾಡಿದ್ದನ್ನು ನಾವು ನೋಡಿದ್ದೇವೆ ಕೇಳಿದ್ದೇವೆ.ಆದ್ರೆ ಬೆಳಗಾವಿಯ ಟ್ರಾಫಿಕ್ ಹವಾಲ್ದಾರ್ ಒಬ್ರು ಟ್ರಾಫಿಕ್ ಕಂಟ್ರೋಲ್ ಮಾಡುವದರ ಜೊತೆಗೆ ದೊಡ್ಡ ಡ್ಯಾಮೇಜ್ ದೊಡ್ಡ ಅನಾಹುತ ಆಗುವದನ್ನು ಸಮಯ ಪ್ರಜ್ಞೆಯಿಂದ ಕಂಟ್ರೋಲ್ ಮಾಡಿದ ಘಟನೆ ನಡೆದಿದೆ.
ಬೆಳಗಾವಿಯಲ್ಲಿ ನಿನ್ನೆ ಧಾರಾಕಾರವಾಗಿ ಮಳೆ ಸುರಿದು ಅಲ್ಲಲ್ಲಿ ಗಿಡದ ಟೊಂಗೆ ಮುರಿದು ಬಿದ್ದ ಘಟನೆಗಳು ನಡೆದಿದ್ದವು ಬೆಳಗಾವಿಯ ಜೀಜಾಮಾತಾ ಚೌಕ್ ನಲ್ಲಿ ಡಿವೈಡರ್ ನಲ್ಲಿ ಇದ್ದ ವಿದ್ಯುತ್ ಕಂಬದ ಮೂಲಕ ವಿದ್ಯುತ್ ಹರಿದು ಪಾದಚಾರಿ ಒಬ್ಬರಿಗೆ ಶಾಕ್ ಹತ್ತಿದ ಅನುಭವ ಆಯಿತು.ಈ ವಿಚಾರವನ್ನು ಪಾದಚಾರಿ ತಕ್ಷಣ ಅದೇ ಜಾಗದಲ್ಲಿ ಕರ್ತವ್ಯದಲ್ಲಿದ್ದ ಟ್ರಾಫಿಕ್ ಹವಾಲ್ದಾರ್ H.J ಹೊಸಮನಿ ಅವರಿಗೆ ತಿಳಿಸಿದ್ದಾನೆ.ತಕ್ಷಣ ಎಚ್ಚೆತ್ತುಕೊಂಡ ಹವಾಲ್ದಾರ್ ಸಾಹೇಬ್ರು ತಕ್ಷಣ ಈ ರಸ್ತೆಯ ಟ್ರಾಫಿಕ್ ಬಂದ್ ಮಾಡಿ,ವಿದ್ಯುತ್ ಹರಿಯುತ್ತಿರುವ ಜಾಗದಲ್ಲಿ ವಾಹನ ಸಂಚಾರ ತಡೆದು ತಕ್ಷಣ ಹೆಸ್ಕಾಂ ಅಧಿಕಾರಿಗಳಿಗೆ ಫೋನ್ ಮಾಡಿ ದೊಡ್ಡ ಅನಾಹುತ ಆಗೋದನ್ನು ಈ ಟ್ರಾಫಿಕ್ ಹವಾಲ್ದಾರ್ ತಪ್ಪಿಸಿ ಎಲ್ಲರ ಮೆಚ್ವುಗೆಗೆ ಪಾತ್ರರಾಗಿದ್ದಾರೆ.
ಟ್ರಾಫಿಕ್ ಪೋಲೀಸನ ಫೋನ್ ಕರೆಯನ್ನು ಸ್ವೀಕರಿಸಿದ ಹೆಸ್ಕಾಂ AEE ಸಂಜೀವ ಹಮ್ಮಣ್ಣವರ ತಮ್ಮ ಸಿಬ್ಬಂದಿಯ ಜೊತೆ ಸ್ಥಳಕ್ಕೆ ಧಾವಿಸಿ ಈ ಪ್ರದೇಶದ ವಿದ್ಯುತ್ ಸ್ಥಗಿತಗೊಳಿಸಿದ್ದಾರೆ.ಪೋಲೀಸಪ್ಪನ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದ್ದು ಟ್ರಾಫಿಕ್ ಹವಾಲ್ದಾರನ ಕರ್ತವ್ಯಪ್ರಜ್ಞೆ ಮತ್ತು ಸಮಯ ಪ್ರಜ್ಞೆ,ಹಾಗೂ ಸಾಮಾಜಿಕ ಕಳಕಳಿಯ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.