ಬೆಳಗಾವಿಯ ಶಾಸಕನಿಗೆ ಹೊರ ರಾಜ್ಯಗಳಲ್ಲೂ ಡಿಮ್ಯಾಂಡು…!!
ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲರಿಗೆ ಈಗ ಕರ್ನಾಟಕ ಹೊರತುಪಡಿಸಿ ಹೊರ ರಾಜ್ಯಗಳಲ್ಲೂ ಫುಲ್ ಡಿಮ್ಯಾಂಡು.ಆಂದ್ರದಲ್ಲಿ,ತೆಲಂಗಾಣ ರಾಜ್ಯಗಳಲ್ಲಿ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ಯಶಸ್ವಿ ಸಂಘಟನಾ ಚತುರತೆ ಪ್ರದರ್ಶಿಸಿದ ಶಾಸಕ ಅಭಯ ಪಾಟೀಲರು ಪಕ್ಕದ ಗೋವಾ ರಾಜ್ಯದ ಲೋಕಸಭಾ ಚುನಾವಣೆಯ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ, ತೆಲಂಗಾಣ,ಹಾಗೂ ಗೋವಾ ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಉಸ್ತುವಾರಿಯಾಗಿ ಚಾಣಕ್ಯ ನೀತಿಯನ್ನು ರೂಪಿಸಿ,ಬಿಜೆಪಿ ಗೆಲುವಿಗೆ ಕಾರ್ಯತಂತ್ರ ರೂಪಿಸಿ ವಿಜಯದ ಪತಾಕೆ ಹಾರಿಸಿದ ಶಾಸಕ ಅಭಯ ಪಾಟೀಲರು ಈಗ ಲೋಕಸಭಾ ಚುನಾವಣೆಯಲ್ಲಿ ಗೋವಾ ರಾಜ್ಯದ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ.
ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರಾಗಿರುವ ಅಭಯ ಪಾಟೀಲ ತಮ್ಮ ಕ್ಷೇತ್ರದಲ್ಲೂ ಬಿಜೆಪಿಗೆ ಹೆಚ್ಚಿನ ಮತಗಳನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ತಂತ್ರ ರೂಪಿಸಿದ್ದು ವಾರದಲ್ಲಿ ಕೆಲವು ದಿನ ತಮ್ಮ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರಿಗೆ,ಬೆಂಬಲಿಗರಿಗೆ ,ಬಿಜೆಪಿ ನಗರ ಸೇವಕರಿಗೆ ಚುನಾವಣೆಯ ಜವಾಬ್ದಾರಿ ನೀಡಿ, ಹೊರ ರಾಜ್ಯಗಳಲ್ಲೂ ಬಿಜೆಪಿ ಪರವಾಗಿ ಪ್ರಚಾರ ನಡೆಸಲಿದ್ದಾರೆ.
ಬೆಳಗಾವಿಯ ಅಭಿವೃದ್ಧಿಯ ಹರಿಕಾರ ಈಗ ಬಿಜೆಪಿ ಪಕ್ಷದ ಸಂಘಟನೆಯ ವಿಚಾರದಲ್ಲೂ ಪ್ರಚಾರದಲ್ಲೂ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ.