Breaking News

ನಾಲ್ಕು ಕೋಟಿ ವಸೂಲಿ ಮಾಡಲು ಮಕ್ಕಳನ್ನು ಕಿಡ್ನ್ಯಾಪ್ ಮಾಡಿ ಜೈಲಿಗೆ ಹೋದ್ರು…..

ಹಣ ಡಬಲ್ ಆಗುತ್ತದೆ ಎಂದು ಕೋಟಿ,ಕೋಟಿ ಹಣವನ್ನು ಇನ್ವೆಸ್ಟ್ ಮಾಡಿ ಮೋಸ ಹೋದವರು ಕೊನೆಗೆ ಹಣವನ್ನು ವಸೂಲಿ ಮಾಡಲು ವಂಚಕನ ಮಕ್ಕಳನ್ನು ಅಪಹರಿಸಿದ ಇನ್ವೆಸ್ಟರ್ ಗಳು ಜೈಲಿಗೆ ಹೋದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆದಿದೆ.

ಅಥಣಿ-ನಿನ್ನೆ ಮಟಮಟ ಮಧ್ಯಾಹ್ನವೆ ಅಥಣಿ ಪಟ್ಟಣದಲ್ಲಿ ಇಬ್ಬರು ಮಕ್ಕಳನ್ನ ಕಿಡ್ಯ್ನಾಪ್ ಮಾಡಲಾಗಿತ್ತು ಕಿಡ್ನಾಪ ಪ್ರಕರಣ ಕಂಡು ಈಡಿ ಪಟ್ಟಣದ ಜನರೆ ಬೆಚ್ಚಿ ಬೆರಗಾಗಿದ್ದರು, ಪ್ರಕರಣದ ಕುರಿತು ಚರ್ಚೆ ನಡೆಯುತ್ತಿರುವಾಗಲೆ ಕೇವಲ 10 ಗಂಟೆಗಳಲ್ಲಿ ಕಿಡ್ಯ್ನಾಪ್ ಮಾಡಿದ ಆಗುಂತಕರನ್ನ ಪೊಲೀಸರು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದ್ದಾರೆ. ಕಿಡ್ನಾಪ ಆದ ಮಕ್ಕಳು ವಾಪಸ್ ತಾಯಿ ಮಡಿಲನ್ನ ಸೇರಿದ್ದಾರೆ.ಕಿಡ್ನಾಪ ಆದ 10 ಗಂಟೆಗಳಲ್ಲಿ ಆರೋಪಿಗಳು ಅರೆಸ್ಟ್ ಆಗಿದ್ದು ವಿಶೇಷ.

ಕೋಟಿ,ಕೋಟಿ ಇನ್ವೆಸ್ಟ್ ಮಾಡಿ ಅರೆಸ್ಟ್ ಆದ್ರು….

ನಿನ್ನೆಯ ದಿನ ಮಧ್ಯಾಹ್ನ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಸ್ವಾಮಿ ಪ್ಲಾಟ್‌ನಲ್ಲಿರುವ ವಿಜಯ ದೇಸಾಯಿ ಎಂಬುವವರ ಮನೆಗೆ ನುಗ್ಗಿ ಇಬ್ಬರು ಮಕ್ಕಳನ್ನು ಅಪಹರಣ ಮಾಡಿದ್ರು. ಶಾಲೆ ಮುಗಿಸಿಕೊಂಡು ಅದಷ್ಟೆ ಮನೆಗೆ ಬಂದಿದ್ದ ಮಕ್ಕಳನ್ನ ಇಬ್ಬರು ಜನ ಮನೆಗೆ ಬಂದು ಮನೆಯಲ್ಲಿದ್ದ ಅಜ್ಜಿಯನ್ನ ಹೆದರಿಸಿ 4 ವರ್ಷ ಹಾಗೂ 3 ವರ್ಷದ ಇಬ್ಬರು ಕಂದಮ್ಮಗಳನ್ನ ಹೆಗಲ ಮೇಲೆ ಹಾಕಿಕೊಂಡು ಮನೆಯಿಂದ ಸಿನಿಮಾ ಸ್ಟೈಲ್ ನಲ್ಲಿ ಓಡಿ ಹೋಗಿದ್ದರು. ಏನ ಆಯಿತು ಎನ್ನುವಷ್ಟರಲ್ಲೆ ಅದಗಲೆ ಕಿರಾತಕರು ಸಾಕಷ್ಟು ದೂರ ಸಾಗಿದ್ರು. ಕೂಡಲೆ ಅಥಣಿ ಪೊಲೀಸ ಠಾಣೆಗೆ ಮಾಹಿತಿ ನೀಡುತ್ತಿದ್ದಂತೆ ತಡ ಮಾಡದ ಅಥಣಿ ಪೊಲೀಸರು ತಡ ಮಾಡದೆ ಕಾರ್ಯ ಪ್ರವೃತ್ತರಾಗಿ ಮೂರು ತಂಡಗಳನ್ನ ರಚಸಿ ಆರೋಪಿಗಳ ಪತ್ತೆಗೆ ಜಾಲ ಬೀಸಿದ್ರು ಇನ್ನೆನು ನಮ್ಮ ರಾಜ್ಯದಿಂದ ಪಕ್ಕದ ಮಹಾರಾಷ್ಟ್ರಕ್ಕೆ ಹೋಗಬೇಕು ಎಂದು ಪ್ಲಾನ್ ಮಾಡಿದ್ದ ಆರೋಪಿಗಳ ಕಾರಗೆ ಅಡ್ಡಗಟ್ಟಿದ್ದಾರೆ. ಇದರಿಂದ ಕೆರಳಿದ ಆರೋಪಿಗಳು ಅಥಣಿ ಠಾಣೆಯ ಇಬ್ಬರು ಪೊಲೀಸ್ ಪೇದೆ ಹಾಗೂ ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ ಮೇಲೆ ಹಲ್ಲೆ ನಡೆಸಿದ್ದಾರೆ. ಇದೆ ವೇಳೆ ಇನ್ನೊಂದು ತಂಡ ಆಗಮಿಸಿ ಆರೋಪಿ ಕಾಲಿಗೆ ಗುಂಡು ಹೊಡೆದಿದ್ದಾರೆ. ಮೂವರು ಆರೋಪಿಗಳನ್ನ ಬಂದಿಸಿ ಮಕ್ಕಳನ್ನ ಸುರಕ್ಷಿತವಾಗಿ ತಂದೆ ತಾಯಿಗೆ ಒಪ್ಪಿಸಿದ್ದಾರೆ.

ಇನ್ನು ಆರೋಪಿಗಳ ಬಂದಿಸಿ ಗಾಯಗೊಂಡ ಆರೋಪಿ
ಮಹಾರಾಷ್ಟ್ರ ಮೂಲದ ಸಾಂಬಾ ಕಾಂಬಳೆ, ಹಾಗೂ ಸಿಬ್ಬಂದಿಗಳನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇನ್ನು ಆರೋಪಿಗಳನ್ನ ವಿಚಾರಿದಾಗ ಹಣ ವ್ಯವಹಾರದಿಂದಾಗಿ ಕಿಡ್ನಾಪ ಮಾಡಿರುವ ವಿಚಾರವನ್ನ ಬಾಯಿ ಬಿಟ್ಟಿದ್ದಾರೆ. ಅಸಲಿಗೆ ಮಕ್ಕಳ ತಂದೆ ವಿಜಯ ದೇಸಾಯಿ ಹಾಗೂ ಆರೋಪಿಗಳ ಚಿಕ್ಕೋಡಿ ಮೂಲದ ರವಿಕಿರಣ ಕಮಲಾಕರ್ ಹಾಗೂ ಬಿಹಾರ ಮೂಲದ ಶಾರುಖ್ ಶೇಖ್ ನಡುವೆ ಹಣ ವ್ಯವಹಾರ ನಡೆದಿದೆ. ವಿಜಯ ದೇಸಾಯಿ ಹಣ ಡಬಲ್ ಮಾಡಿಕೊಡುವುದಾಗಿ 4 ಕೋಟಿ ರೂಪಾಯಿಗಳನ್ನ ಪಡೆದಿದ್ದನಂತೆ. ಆದ್ರೆ ವಿಜಯ ದೇಸಾಯಿ ಹಣ ವಾಪಸ್ ಕೊಡದೇ ಸತಾಯಿಸುತ್ತಿದ್ದ. ಇದರಿಂದ ಬೇಸತ್ತ ಮೂವರು ಜನ ಆರೋಪಿಗಳು ವಿಜಯ ದೇಸಾಯಿ ಮಕ್ಕಳನ್ನ ಕಿಡ್ಯ್ನಾಪ್
ಮಾಡುವ ಪ್ಯ್ಯಾನ್ ಮಾಡಿದ್ದಾರೆ ಹಾಗೂ ಅದರಲ್ಲಿ ಯಶಸ್ವಿ ಸಹ ಆಗಿದ್ದಾರೆ. ಬಳಿಕ ವಿಜಯ್ ದೇಸಾಯಿಗೆ ಕರೆ ಮಾಡಿ‌ ನಿನಗೆ ಮಕ್ಕಳು ಬೇಕೆಂದರೆ ನಮಗೆ ಹಣ ವಾಪಸ್ ಮಾಡಿ ನಿನ್ನ ಮಕ್ಕಳನ್ನು ಕರೆದುಕೊಂಡು ಹೋಗು ಎಂದು ಹೇಳಿದ್ದಾರಂತೆ. ಈ ಮಾಹಿತಿಯನ್ನೆ ಬೆನ್ನತ್ತಿದ ಪೊಲೀಸರು ಅಥಣಿ ತಾಲೂಕಿನ ಕೊಹಳ್ಳಿ ಗ್ರಾಮದ ಹೊರವಲದ ಬಳಿ ಮೂವರು ಜನರ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಒಟ್ಟಿನಲ್ಲಿ ಹಾಡುಹಗಲೇ ಮಕ್ಕಳ‌ ಕಿಡ್ಯ್ನಾಪ್ ಮಾಡಿರುವ ಪ್ರಕರಣ ಜಿಲ್ಲೆಯ ಜನತೆಯನ್ನು ಬೆಚ್ಚಿಬಿಳಿಸುವಂತೆ ಮಾಡಿತ್ತು. ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಇಬ್ಬರು ಮಕ್ಕಳು ವಾಪಸ್ ತಾಯಿ ಮಡಿಲು ಸೇರಿದ್ದು ಮಕ್ಕಳು ಸುರಕ್ಷಿತವಾಗಿದ್ದಾರೆ. ಅಲ್ಲದೆ ಕಾರ್ಯಾಚರಣೆಯಲ್ಲಿ ಗಾಯಗೊಂಡ ಸಿಬ್ಬಂದಿಗಳು ಸದ್ಯ ಬೆಳಗಾವಿ ಬೀಮ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Check Also

ಬೀಯರ್ ಬಾಟಲಿಗಳಿಂದ ಹಲ್ಲೆ, ಬೈಲಹೊಂಗಲದಲ್ಲಿ ಯುವಕನ ಮರ್ಡರ್

ಹಳೇ ವೈಷಮ್ಯದ ಕಾರಣ 13 ಜನ ಸೇರುಕೊಂಡು ಬೀಯರ್ ಬಾಟಲಿ,ಹಾಗೂ ಕುಡುಗೋಲಿನಿಂದ ಯುವಕನ ಮೇಲೆ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ …

Leave a Reply

Your email address will not be published. Required fields are marked *