Breaking News

ಬೆಳಗಾವಿಯಲ್ಲಿ ಇಂದು ಪ್ರತಿಭಟನೆಗಳ ಸೀಝನ್…

ಪ್ರತಿಮೆ ಭಗ್ನಗೊಳಿಸಿದ,ಕಿಡಗೇಡಿಗಳ ವಿರುದ್ಧ ಕ್ರಮ ಜರುಗಿಸಿ….

ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ವಿಶ್ವಗುರು ಬಸವೇಶ್ವರ ಪ್ರತಿಮೆಯನ್ನು ಭಗ್ನಗೊಳಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸೋಮವಾರ ಬೆಳಗಾವಿ ಲಿಂಗಾಯತ ಸಂಘಟನೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ರವಾನಿಸಿದರು.

ಮಹಾ ಮಾನವತಾವಾದಿ ಬಸವೇಶ್ವರರ ಮೂರ್ತಿಯನ್ನು ಸಮಾಜಘಾತುಕ ವ್ಯಕ್ತಿಗಳು ಭಗ್ನ ಮಾಡಿದ್ದಾರೆ. ಇವ ನಮ್ಮವ. ಇವ ನಮ್ಮವ ಎಂದು ಜಗದ ಜನರೆಲ್ಲರನ್ನು ಅಪ್ಪಿಕೊಂಡು ಜಾತಿ, ವರ್ಗ, ಲಿಂಗ, ವರ್ಣ ಭೇದಗಳನ್ನು ಅಳಸಿ, ಸರ್ವರಿಗೂ ಲೇಸನ್ನೇ ಬಯಸಿದ್ದ ಯುಗಪುರುಷ ಬಸವಣ್ಣನವರಿಗೆ ಈ ರೀತಿ ಅವಮಾನಿಸಿದ್ದನ್ನು ಮನವಿಯಲ್ಲಿ ಖಂಡಿಸಿದ್ದಾರೆ.

ಬಸವೇಶ್ವರ ಮೂರ್ತಿ ಭಗ್ನಗೊಳಿಸಿರುವ ದುಷ್ಟ ಶಕ್ತಿಗಳನ್ನು ಪತ್ತೇ ಮಾಡಿ ಸೂಕ್ತ ಕ್ರಮ ಜರುಗಿಸಿ ಬಸವೇಶ್ವರ ಮೂರ್ತಿಯನ್ನು ಬಿಜಗುಪ್ಪಿ ಗ್ರಾಮದಲ್ಲಿ ಮರುಸ್ಥಾಪನೆ ಮಾಡಬೇಕೆಂದು ಆಗ್ರಹಿಸಿದರು.

ಈರಣ್ಣಾ ದಯನ್ನವರ, ಸುರೇಶ ನರಗುಂದ, ರಾಜು ಚಿಕ್ಕನಗೌಡರ, ಆರ್.ಪಿ.ಪಾಟೀಲ, ಶಿವಾನಂದ ವಾಘರವಾಡಿ, ಸದಾಶಿವ ದೇವರಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ತರಕಾರಿ ಹಾನಿ,ಪರಿಹಾರ ಕೊಡಿ….

ರೈತರು ಬೆಳೆದ ತರಕಾರಿ ಬೆಳೆ ಸಂಪೂರ್ಣ ಹಾಳಾಗಿದ್ದು, ಕೂಡಲೇ ಸರಕಾರ ಪರಿಹಾರ ಘೋಷಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ರವಾನಿಸಿದರು.

ಲಾಕ್ ಡೌನ್ ವೇಳೆಯಲ್ಲಿ ಕ್ಯಾಬಿಜ್ ಹಾಗೂ ಇನ್ನಿತರ ತರಕಾರಿ ಬೆಳೆಗಳು ಹೊಲದಲ್ಲಿಯೇ ನಾಶವಾಗಿದ್ದು, ಸರಕಾರಕ್ಕೆ ತಿಳಿದಿದೆ. ಆದರೂ ಇಲ್ಲಿಯವರೆಗೆ ಪರಿಹಾರ ಮಾತ್ರ ರೈತರಿಗೆ ದೊರಕಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ‌.
ಪರಿಹಾರ ಹಾಗೂ ಇನ್ನಿತರ ಸೌಲಭ್ಯ ಒದಗಿಸುವಾಗ ಪಹಣಿ ಪತ್ರಿಕೆ ಅಂತಿಮವಾಗದೆ ಪಂಚರಿಂದ ರೈತನೆಂದು ಗುರುತಿಸಿ ಪರಿಹಾರ ನೀಡಬೇಕು. ವಾರಸಾ ಮಾಡಿಕೊಡುವ ಪದ್ದತಿ ಜಟಿಲವಾಗಿದ್ದು, ಹಣ ನೀಡಿದವರಿಗೆ ಮಾತ್ರ ಸುಲಭವಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಪರಿಹಾರ ಕೊಡುವಾಗ ಸಣ್ಣ ಹಿಡುವಳಿಗಾರ, ದೊಡ್ಡ ಹಿಡುವಳಿಗಾರ ಎಂದು ಅಳತೆಯ ಮಾನವಿದರ. ಇದರಿಂದ ಅತೀ ಸಂಕಷ್ಟದಲ್ಲಿರುವ ಸಾಮಾನ್ಯ ರೈತನಿಗೆ ನಯಾ ಪೈಸೆ ಪರಿಹಾರ ದೊರಕಿಲ್ಲ. ನೀರಾವರಿ ಪ್ರದೇಶದಲ್ಲಿ ರೋಜಗಾರ ಒಕ್ಕಲುತನಕ್ಕೆ ವಿಸ್ತರಿಸಬೇಕು. ರೋಜಗಾರ ಕೂಲಿ ಪಾವತಿಯಾಗಬೇಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಕರೋನಾ ಪರಿಣಾಮದಿಂದ ಬಡ ನಿರುದ್ಯೋಗಿಗಳ ಶೈಕ್ಷಣಿಕ ಸಾಲ ಮನ್ನಾ ಮಾಡುವುದು ಹಾಗೂ ಮಾಸಿಕ ಗೌರವ ಧನಕೊಡುವ ಯೋಜನೆ ಮಾಡಬೇಕೆಂದು ಮನವಿಯಲ್ಲಿ ಆಗ್ರಹಿಸಿದರು.

ಅಪ್ಪಾಸಾಬ ದೇಸಾಯಿ, ರಾಮನಗೌಡ ಪಾಟೀಲ, ನಾಮದೇವ ದುಡಂ, ಮಾರುತಿ ಕಡೆಮನಿ, ದುಂಡಪ್ಪ ಪಾಟೀಲ, ಗಜು ಗುರಾಯಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ರಾಜ್ಯದಲ್ಲಿವಿದ್ಯುತ್ ಖಾಸಗೀಕರಣ ಬೇಡ..

ರಾಜ್ಯದಲ್ಲಿ ವಿದ್ಯುತ್ ಖಾಸಗೀಕರಣ ನಿಲ್ಲಿಸಬೇಕು. ನೇಕಾರರು ಉತ್ಪಾಧಿಸಿರುವ 15 ಲಕ್ಷ ಸೀರೆಗಳನ್ನು ಸರಕಾರ ಖರೀದಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ಬೆಳಗಾವಿ ಜಿಲ್ಲಾ ನೇಕಾರರ ವೇದಿಕೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ರಾಜ್ಯದ ಕೂಲಿ ನೇಕಾರರನ್ನು ಕಟ್ಟಡ ಕಾರ್ಮಿಕ ಇಲಾಖೆ ವ್ಯಾಪ್ತಿಗೆ ಸೇರಿಸಬೇಕು. ಕರ್ನಾಟಕ ಮೂಲ ಜವಳಿ ಅಭಿವೃದ್ಧಿ ನಿಗಮವನ್ನು ಪೂರ್ಣ ಪ್ರಮಾಣದಲ್ಲಿ ಬೆಳಗಾವಿಗೆ ಸ್ಥಳಾಂತರ ಮಾಡಬೇಕೆಂದು ಒತ್ತಾಯಿಸಿದರು.

ರಾಜ್ಯದಲ್ಲಿ ವಿದ್ಯುತ್ ಖಾಸಗಿಕರಣವಾದರೆ ನೇಕಾರರ 1 ಯುನಿಟ್‌ ಗೆ 1ರು. 25 ಪೈಸೆ ರಾಜ್ಯ ಸರಕಾರ ‌ನೀಡುವ ಸಹಾಯ ಧನ ನಿಂತು‌ ಹೋಗುತ್ತದೆ. ಇದರಿಂದ ನಷ್ಟ ಉಂಟಾಗಿ ಉದ್ಯೋಗ ಸಂಪೂರ್ಣ ನಿಂತು‌ ಹೋಗುತ್ತದೆ. ಆದ್ದರಿಂದ ವಿದ್ಯುತ್ ಖಾಸಗೀಕರಣ ಕೈಬಿಡಬೇಕೆಂದು ಮನವಿಯಲ್ಲಿ ಆಗ್ರಹಿಸಿದರು.

ಈಗಾಗಲೇ ಮಹಾಮಾರಿ ಕೊರೋನಾದಿಂದ ಬೆಳಗಾವಿ ಜಿಲ್ಲಾ ಮತ್ತು ರಾಜ್ಯದ ನೇಕಾರರಿಗೆ ಸಾಕಷ್ಟು ನಷ್ಟ ಉಂಟಾಗಿ ಶೇ.90 ರಷ್ಟು ಉದ್ಯೋಗ ಬೀದಿಗೆ ಬಂದಿರುತ್ತದೆ. ಸಿಎಂ ಹಾಗೂ ಜವಳಿ ಸಚಿವರು ಭರವಸೆ ನೀಡಿದಂತೆ ದೀಪಾವಳಿಗೆ ನೇಕಾರರು ಸಿದ್ದಪಡಿಸಿದ ಸೀರೆಯನ್ನು ಖರೀದಿ ಮಾಡಬೇಕೆಂದು ವಿನಂತಿಸಿಕೊಂಡರು.

ಪಾಂಡುರಂಗ ದೋತ್ರೆ, ಪರಶುರಮಾ ಢಗೆ, ರಮೇಶ ಸೋಂಟಕ್ಕಿ, ಶ್ರೀನಿವಾಸ ತಾಳೂಕರ, ನಾರಾಯಣ ಕಾಮಕರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Check Also

ಶಿವಸಾಗರ ಸಕ್ಕರೆ ಕಾರ್ಖಾನೆ ಮಾರಾಟ, ಸಿಡಿದೆದ್ದ ಷೇರುದಾರರು, ಡಿಸಿ ಕಚೇರಿಯಲ್ಲಿ ಹಠಾತ್ ಸಭೆ…!!

ಶಿವಸಾಗರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಸಿಡಿದೆದ್ದ ಷೇರುದಾರರು, ರೈತರು.. ಬೆಳಗಾವಿ ಡಿಸಿ ನೀಡಿದ ಭರವಸೆ ಏನು? ಬೆಳಗಾವಿ: …

Leave a Reply

Your email address will not be published. Required fields are marked *