ಅಂತರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿಯ ಪತಾಕೆ ಹಾರಿಸಲು ಉಕ್ರೇನ್ ಗೆ ಹಾರಿದ ಬೆಳಗಾವಿಯ ಮೂವರು ಕುವರಿಯರು.
ಬೆಳಗಾವಿ-ಕ್ರಾಂತಿಯ ನೆಲ ಬೆಳಗಾವಿ ಫುಟ್‌ಬಾಲ್, ಹಾಕಿ,ಜುಡೋ,ಸೇರಿದಂತೆ ವಿವಿಧ ಕ್ರಿಡೆಗಳಲ್ಲೂ ಹೆಸರು ಮಾಡಿದೆ,ಪುಟ್ ಬಾಲ್ ಆಟದಲ್ಲೂ ಬೆಳಗಾವಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದು ಬೆಳಗಾವಿಯ ಮೂವರು ಫುಟ್‌ಬಾಲ್ ಆಟಗಾರರು ಊಕ್ರೇನ್ ನಲ್ಲಿ ನಡೆಯುವ ಮಿನಿ ಫುಟ್ಬಾಲ್ ವಿಶ್ವಕಪ್ ನಲ್ಲಿ ಭಾಗವಹಿಸುವ ಭಾರತ ತಂಡಕ್ಕೆ ಆಯ್ಕೆ ಆಗಿರುವದು ಹೆಮ್ಮೆಯ ಸಂಗತಿಯಾಗಿದೆ.
ಉಕ್ರೇನ್ ನಲ್ಲಿ ಮಹಿಳಾ ಫುಟ್ಬಾಲ್ ಮಿನಿ ವಿಶ್ವಕಪ್ ನಡೆಯಲಿದೆ,ಈ ವಿಶ್ವಕಪ್ ಫುಟ್ಬಾಲ್ ನಲ್ಲಿ ಭಾರತದ ತಂಡವೂ ಭಾಗವಹಿಸುತ್ತಿದೆ. ಭಾರತದ ಮಹಿಳಾ ಫುಟ್ಬಾಲ್ ತಂಡದಲ್ಲಿ ಕರ್ನಾಟಕದ ಐವರು ಮಹಿಳಾ ಆಟಗಾರರು ಆಯ್ಕೆಯಾಗಿದ್ದು,ಆಯ್ಕೆಯಾದ ಐದು ಜನ ಆಟಗಾರರಲ್ಲಿ ಮೂವರು ಆಟಗಾರರು ಬೆಳಗಾವಿಯವರೇ ಅನ್ನೋದು ಹೆಮ್ಮೆಪಡುವ ಸಂಗತಿಯಾಗಿದೆ.
ಲಿಂಗಾರಾಜ ಕಾಲೇಜಿನಲ್ಲಿ ಬಿಎ ವ್ಯಾಸಂಗ ಮಾಡುತ್ತಿರುವ ಆದಿತಿ ಪ್ರತಾಪ್ ಜಾಧವ,ಬಿಕಾಂ ಓದುತ್ತಿರುವ,ಅಂಜಲಿ ಹಿಂಡಲಗೇಕರ, ಹಾಗು ಉಜರೆ ಪ್ರಿಯಾಂಕಾ ಕಂಗ್ರಾಳಕರ ಅವರು ಪುಟ್ಬಾಲ್ ಮಹಿಳಾ ಮಿನಿ ವಿಶ್ವಕಪ್ ಗೆ ಆಯ್ಕೆಯಾಗಿದ್ದಾರೆ.
ಫುಟ್ಬಾಲ್ ಮಿನಿ ವಿಶ್ವಕಪ್ ಗೆ ಆಯ್ಕೆಯಾಗಿರುವ ಬೆಳಗಾವಿಯ ಮೂವರು ಆಟಗಾರ್ತಿ ಯರು ಒಂದು ವಾರ ಬೆಂಗಳೂರಿನಲ್ಲಿ ವಿಶೇಷ ತರಬೇತಿ ಪಡೆದಿದ್ದು ಇಂದು ಬೆಳಿಗ್ಗೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಿಂದ ಹೈದ್ರಾಬಾದ್ ಗೆ ಪ್ರಯಾಣ ಬೆಳೆಸಿದರು.